ನಾನು ಯಾವ ಹೆಜ್ಜೆ ಇಟ್ಟರೂ ಅದು ಮಂಡ್ಯ ಜನರ ಒಳಿತಿಗಾಗಿ ಮಾತ್ರ; ಸಂಸದೆ ಸುಮಲತಾ

ನೀವ್ಯಾಕೆ ಅಲ್ಲೋಗ್ತೀರಾ? ನೀವ್ಯಾಕೆ ಇಲ್ಲೋಗ್ತಿರಾ? ನೀವ್ಯಾಕೇ ಅವರನ್ನು ಮಾತಾಡಿಸ್ತೀರಾ? ನೀವ್ಯಾಕೆ ಇಲ್ಲಿರ್ತೀರಾ? ಎಂದು ನನ್ನನ್ನು ಕೇಳಲು ಯಾರಿಗೂ ಹಕ್ಕಿಲ್ಲ. ಯಾಕೆಂದರೆ ನನ್ನ ಉದ್ದೇಶದಲ್ಲಿ ತಪ್ಪಿಲ್ಲ, ದುರುದ್ದೇಶ ಇಲ್ಲ. 

Latha CG | news18-kannada
Updated:October 10, 2019, 3:57 PM IST
ನಾನು ಯಾವ ಹೆಜ್ಜೆ ಇಟ್ಟರೂ ಅದು ಮಂಡ್ಯ ಜನರ ಒಳಿತಿಗಾಗಿ ಮಾತ್ರ; ಸಂಸದೆ ಸುಮಲತಾ
ಸುಮಲತಾ ಅಂಬರೀಶ್
  • Share this:
ಮಂಡ್ಯ(ಅ.10): ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದ ಸಂಸದೆ ಸುಮಲತಾ, ನಿನ್ನೆ ಬಿಜೆಪಿ ಪಕ್ಷದ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಇದು ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಜೊತೆಗೆ ಕಾಂಗ್ರೆಸ್​ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. 

ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿ ನಾಯಕರು ಬೆಂಬಲ ಸೂಚಿಸಿ, ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಬಿಜೆಪಿಗೆ ಸೇರುವುದಾದರೆ ಅಧಿಕೃತವಾಗಿ ತಿಳಿಸುತ್ತೇನೆ. ಕದ್ದುಮುಚ್ಚಿ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು.

ಸದನ ವಿಸ್ತರಣೆಗೆ ಒಪ್ಪದ ಸ್ಪೀಕರ್​; ನೆರೆ ಚರ್ಚೆಗೂ ಇಲ್ಲ ಅವಕಾಶ; ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ 3 ದಿನ ಮಾತ್ರ!

ಇದೇ ವೇಳೆ, ಕೆ.ಆರ್.ಪೇಟೆ ಉಪಚುನಾಣೆಯಲ್ಲಿ ಅನರ್ಹ ಶಾಸಕ ನಾರಾಯಣ್​ಗೌಡಗೆ ಸುಮಲತಾ ಬೆಂಬಲ ನೀಡುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಈ ಬಗ್ಗೆ ಸಂಸದೆ ಸುಮಲತಾ ಇಂದು ಸ್ಪಷ್ಟನೆ ನೀಡಿದ್ದಾರೆ. ಕೆಲವರು ನನ್ನನ್ನು ನೀವು  ಆ ಪಕ್ಷ ಸೇರ್ತಿರಾ, ಈ ಪಕ್ಷ ಸೇರ್ತಿರಾ? ಅವ್ರಿಗೆ ಬೆಂಬಲ ಕೊಡಲ್ವ? ಇವ್ರಿಗೆ ಕೊಡಲ್ವ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನಗೆ ಯಾರೆಲ್ಲಾ ಬೆಂಬಲ ಕೊಟ್ಟಿದ್ದಾರೆ ಅವರೆಲ್ಲರ ಪರವಾಗಿ ನಾನಿರುತ್ತೇನೆ ಎಂದು ಹೇಳಿದ್ದಾರೆ.

ನಾನು ಯಾರನ್ನು ಮರೆಯಲ್ಲ, ನಾನು  ಯಾರನ್ನು ಕೈ ಬಿಡಲ್ಲ. ನನ್ನ ಗೆಲುವಿಗೆ ಕಾರಣ ಮಂಡ್ಯದ ಜನ. ಆ ಮಂಡ್ಯ ಜನರ ಒಳಿತಿಗಾಗಿ ನಾನು ಏನೇನು ಕ್ರಮ ತೆಗೆದುಕೊಳ್ಳಬೇಕು,  ಯಾವ ಹೆಜ್ಜೆ ಇಡಬೇಕು ಎಂಬುದನ್ನು ಮಾತ್ರ ನಾನು ಮಾಡೇ ಮಾಡುತ್ತೇನೆ ಎಂದರು.

ನನ್ನನ್ನು ಕೇಳಲು ಯಾರಿಗೂ ಹಕ್ಕಿಲ್ಲ

ನೀವ್ಯಾಕೆ ಅಲ್ಲೋಗ್ತೀರಾ? ನೀವ್ಯಾಕೆ ಇಲ್ಲೋಗ್ತಿರಾ? ನೀವ್ಯಾಕೇ ಅವರನ್ನು ಮಾತಾಡಿಸ್ತೀರಾ? ನೀವ್ಯಾಕೆ ಇಲ್ಲಿರ್ತೀರಾ? ಎಂದು ನನ್ನನ್ನು ಕೇಳಲು ಯಾರಿಗೂ ಹಕ್ಕಿಲ್ಲ. ಯಾಕೆಂದರೆ ನನ್ನ ಉದ್ದೇಶದಲ್ಲಿ ತಪ್ಪಿಲ್ಲ, ದುರುದ್ದೇಶ ಇಲ್ಲ.  ನಾನು ಏನೇ ಹೆಜ್ಜೆ ಹಾಕಿದರೂ ಅದು‌ ನನ್ನ ಈ ಮಂಡ್ಯ ಜನರಿಗಾಗಿಯೇ ಹೊರತು ಬೇರೆನು ಇಲ್ಲ. ಇದರಲ್ಲಿ ನನ್ನ ಸ್ವಾರ್ಥ ಏನು ಇಲ್ಲ, ಎಲ್ಲವೂ ನನ್ನ ಮಂಡ್ಯ ಜನರಿಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.ತೆರಿಗೆ ಕಟ್ಟದವರ ಬದಲು ದಕ್ಷ ರಾಜಕಾರಣಿಗಳ ಮೇಲೆ ಐಟಿ ದಾಳಿ; ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ

First published: October 10, 2019, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading