BY Vijayendra: ಹೈಕಮಾಂಡ್​ ಸೂಚಿಸಿದರೆ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧೆ; ಸಿಎಂ ಯಡಿಯೂರಪ್ಪ

ತುಂಗಭದ್ರಾ ಎಡದಂಡೆ ನಾಲೆಗೆ ಎಪ್ರಿಲ್ 10ರವರೆಗೂ ನೀರು ಬಿಡಲು ರೈತರು ಆಗ್ರಹಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಸ್ಕಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ 5ಎ ಕಾಲುವೆಗೆ ನೀರಿನ ಲಭ್ಯತೆ ಇಲ್ಲದ ಕಾರಣ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಆರಂಭಿಸಲಾಗುವುದು. ಈ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಲಾಗುವುದು ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ.

ಸಿಎಂ ಬಿಎಸ್ ಯಡಿಯೂರಪ್ಪ.

  • Share this:
ರಾಯಚೂರು(ಮಾ.21): ಮುಂಬರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖ್ಯಮಂತ್ರಿ ಗಳ ಪುತ್ರ ಬಿ ವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗೆ ಸ್ವತಃ ಯಡಿಯೂರಪ್ಪ ಸ್ಪಷ್ಠನೆ ನೀಡಿದ್ದು, ಅವರು ಬಸವಕಲ್ಯಾಣ ದಿಂದ ಸ್ಪರ್ಧಿಸುವುದಿಲ್ಲ. ಈ ಉಪಚುನಾವಣೆಯ ನಂತರ ಮೈಸೂರಿನಲ್ಲಿ ಮನೆ ಮಾಡುತ್ತಾರೆ. ಸುತ್ತಲಿನ 2-3 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಿ ಅಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ. ವರುಣಾದಿಂದ ಸ್ಪರ್ಧಿಸಲು ಹೈಕಮಾಂಡ್​ ಸೂಚಿಸಿದರೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ನಿನ್ನೆ ಮಸ್ಕಿ ಬೈ ಎಲೆಕ್ಷನ್ ಹಿನ್ನಲೆಯಲ್ಲಿ ಸಿಂಧನೂರಿಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಇಂದು ಮುಂಜಾನೆ ಸಿಂಧನೂರಿನಿಂದ ಬೆಂಗಳೂರಿಗೆ ಹೋದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪಗೌಡ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

ಇದೇ ವೇಳೆ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ನಾಲೆಗೆ ಎಪ್ರಿಲ್ 10ರವರೆಗೂ ನೀರು ಬಿಡಲು ರೈತರು ಆಗ್ರಹಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಸ್ಕಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ 5ಎ ಕಾಲುವೆಗೆ ನೀರಿನ ಲಭ್ಯತೆ ಇಲ್ಲದ ಕಾರಣ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಆರಂಭಿಸಲಾಗುವುದು. ಈ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಲಾಗುವುದು ಎಂದರು.

ಹೆಚ್ಚಾಗುತ್ತಿರುವ ಕೊರೋನಾ; ಸರ್ವಪಕ್ಷಗಳ ಸಭೆ ಕರೆಯುವಂತೆ ಸಿಎಂಗೆ ಮನವಿ ಮಾಡಿದ ಸಚಿವ ಸುಧಾಕರ್

ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಪಂಚರಾಜ್ಯಗಳ ಚುನಾವಣೆಯ ನಂತರ ಯಡಿಯೂರಪ್ಪ ಬದಲಾಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸದೆ ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸದೆ ಎದ್ದರು. ಇಂದು ಮುಂಜಾನೆಯೇ ವೇಳೆಗೆ ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಸಿಎಂ ಭೇಟಿಗೆ ಬಂದಿದ್ದರು. ಸಿಂಧನೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಬಂದು ಮಸ್ಕಿ ಅಭ್ಯರ್ಥಿಯೊಂದಿಗೆ ಕಾಣಿಸಿಕೊಂಡರು, ವೆಂಕಟರಾವ್ ನಾಡಗೌಡ ಸಿಎಂ ಭೇಟಿಯಾಗುತ್ತಿರುವುದು ಹಲವಾರು ಕುತೂಹಲಕ್ಕೆ ಕಾರಣವಾಗಿತ್ತು. ಆಪರೇಷನ್ ಕಮಲವಾಗುತ್ತಾ? ಮಸ್ಕಿ ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸದೆ ಇರುವ ಬಗ್ಗೆ ಚರ್ಚೆ ನಡೆಸಬಹುದು? ಎಂಬ ಚರ್ಚೆ ಆರಂಭವಾಗಿದೆ.

ಸಿಎಂ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟರಾವ್ ನಾಡಗೌಡ, ಸಿಎಂ ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಹೀಗಾಗಿ ಭೇಟಿಯಾಗಿದ್ದೇನೆ, ನಮ್ಮ ಸಮಾಜದ ಹೇಮರಡ್ಡಿ ಮಲ್ಲಮ್ಮ ಭವನಕ್ಕೆ ಅನುದಾನ ನೀಡುವ ಕುರಿತು ಹಾಗೂ ಏಪ್ರಿಲ್ 10 ರವರೆಗೂ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುವ ಕುರಿತು ಚರ್ಚಿಸಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಈ ಜಾತ್ರೆಯಲ್ಲಿ ರಾಜಕೀಯ ಚರ್ಚೆ ಮಾಡುವುದಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ತಂಡವೊಂದು ಸಿಎಂ ಗೆ ಭೇಟಿ ಮಾಡಿ ತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 15ರವರೆಗೂ ನೀರು ಬಿಡಲು ಮನವಿ ಮಾಡಿದ್ದೇವೆ. ಈಗ ತುಂಗಭದ್ರಾ ಜಲಾಶಯದಿಂದ ಮಾರ್ಚ್​​ 31 ರವರೆಗೆ ನೀರು ಬಿಡಲು ನಿರ್ಧರಿಸಲಾಗಿದೆ. ಅವಧಿಗೆ ನೀರು ನಿಲ್ಲಿಸಿದರೆ ಬೆಳೆದು ನಿಂತಿರುವ ಬೆಳೆ ನಾಶವಾಗುತ್ತದೆ. ಈ ಕಾರಣಕ್ಕಾಗಿ ಭದ್ರಾದಿಂದ ನೀರು ಬಿಡಿಸಬೇಕು. ಜಲಾಶಯದಲ್ಲಿ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಪಾಲಿನ 3 ಟಿಎಂಸಿ ನೀರು ಇದೆ. ಈ ರಾಜ್ಯಗಳೊಂದಿಗೆ ಮಾತನಾಡಿ ಈ ನೀರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ, ಒಂದು ವೇಳೆ ನೀರು ಬಿಡದಿದ್ದರೆ ಈ ಸರಕಾರವು ರೈತ ವಿರೋಧಿ ಸರಕಾರ ಎನ್ನಬೇಕಾಗುತ್ತದೆ ಎಂದು ಹಂಪನಗೌಡ ಹೇಳಿದರು.

ಇದೇ ವೇಳೆ ಮುಂಜಾನೆಯೇ ಸಿಎಂ ಸಿಂಧನೂರು ತಾಲೂಕಿನ ಗೊರೇಬಾಳದಲ್ಲಿಯ ಶ್ರೀಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದರು. ಮುಂಜಾನೆಯಿಂದಲೂ ಸಿಎಂರೊಂದಿಗೆ ನೂರಾರು ಜನರಿದ್ದರು, ಬಹುತೇಕರು ಮಾಸ್ಕ್ ಶಾರೀರಕ ಅಂತರ ಕಾಯ್ದುಕೊಂಡಿರಲಿಲ್ಲ. ನಿಯಮ ರೂಪಿಸಿ ಪಾಲಿಸಿ ಎಂದು ಹೇಳುವ ಸಿಎಂ ನಿಯಮ ಉಲ್ಲಂಘಿಸಿದ್ದಾರೆ ಎಂದು ಜನ ಆರೋಪಿಸಿದರು.
Published by:Latha CG
First published: