ಅನರ್ಹರು ಉಪಚುನಾವಣೆಯಲ್ಲಿ ಗೆದ್ದರೆ ಅದು ಪ್ರಜಾಪ್ರಭುತ್ವದ ಅಣಕು ಪ್ರದರ್ಶನ; ಎಚ್.ಡಿ.ಕುಮಾರಸ್ವಾಮಿ
ಹಿರೇಕೆರೂರು ಬಿಜೆಪಿ ಅಭ್ಯರ್ಥಿಯ ತಳಮಳ ನೋಡಿದ್ದೇನೆ. ಎರಡು ಬಾರಿ ನನ್ನನ್ನ ಆ ಅಭ್ಯರ್ಥಿ ಮುಖ್ಯಮಂತ್ರಿ ಮಾಡಿದ್ದಾರಂತೆ. ಯಾರಿಗೆ ಬೇಕಾದ್ರೂ , ಯಾವಾಗಲಾದರೂ ಇವರು ಕಾಲಿಗೆ ಬೀಳುತ್ತಾರೆ. ಅನರ್ಹರು ಚುನಾವಣೆಯಲ್ಲಿ ಗೆದ್ದರೆ ಅದು ಪ್ರಜಾಪ್ರಭುತ್ವದ ಅಣಕು ಪ್ರದರ್ಶನ ಆಗುತ್ತದೆ. ಮುಂದೆ ಇಂತಹವರು ಏನೂ ಮಾಡಿದರೂ ನಡೆಯುತ್ತೆ ಅನ್ನೋ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ
- News18 Kannada
- Last Updated: November 19, 2019, 6:26 PM IST
ಬೆಂಗಳೂರು: ಉಪಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದೇವೆ. ಒಂದು ಕ್ಷೇತ್ರ ದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ. ಅನರ್ಹರನ್ನು ಆಯ್ಕೆ ಮಾಡುವ ಬಗ್ಗೆ ಜನರಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಮೊದಲಿನಿಂದಲೂ ಬೆಳಗಾವಿ ದಳದ ಭದ್ರಕೋಟೆ. ಈ ಚುನಾವಣೆಯಿಂದ ಅಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಎಚ್ಡಿಕೆ, ಚುನಾವಣಾ ಉಸ್ತುವಾರಿ ಹಾಗೂ ಚುನಾವಣಾ ಪ್ರಚಾರ ಕುರಿತು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬೆಳಗಾವಿ ಭಾಗದಲ್ಲಿ ಮತ ಪರಿವರ್ತನೆ ಮಾಡುವ ನಾಯಕರ ಕೊರತೆ ಇತ್ತು. ಆದರೆ ಇದೀಗ ಆ ಕೊರತೆ ಇಲ್ಲ ಎಂದರು.
ಇವತ್ತು ಬೆಳಿಗ್ಗೆಯಿಂದ ನಾನು ಪಡೆದ ಮಾಹಿತಿ ಪ್ರಕಾರ ಸಾಕಷ್ಟು ದೊಡ್ಡ ಮಠಾಧೀಶರು ಒತ್ತಡ ಹೇರಿದ್ದಾರೆ ಅನ್ನೋದು ಗೊತ್ತಿದೆ. ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಿವಾಚಾರ್ಯ ಶ್ರೀಗಳಿಗೆ ನಾನೇ ಕರೆ ಮಾಡಿ ಮನವಿ ಮಾಡಿದ್ದೇನೆ. ಚುನಾವಣೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದೇನೆ. ನಿಮ್ಮ ಪೀಠಕ್ಕೆ ಅಗೌರವ ಉಂಟಾಗಬಾರದು ಅನ್ನೋ ಕಾರಣಕ್ಕೆ ಕಣದಿಂದ ಹಿಂದೆ ಸರಿಯೋದು ಸೂಕ್ತ ಅಂತಾ ನನ್ನ ಅಭಿಪ್ರಾಯ ಹೇಳಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.ಹಿರೇಕೆರೂರು ಬಿಜೆಪಿ ಅಭ್ಯರ್ಥಿಯ ತಳಮಳ ನೋಡಿದ್ದೇನೆ. ಎರಡು ಬಾರಿ ನನ್ನನ್ನ ಆ ಅಭ್ಯರ್ಥಿ ಮುಖ್ಯಮಂತ್ರಿ ಮಾಡಿದ್ದಾರಂತೆ. ಯಾರಿಗೆ ಬೇಕಾದ್ರೂ , ಯಾವಾಗಲಾದರೂ ಇವರು ಕಾಲಿಗೆ ಬೀಳುತ್ತಾರೆ. ಅನರ್ಹರು ಚುನಾವಣೆಯಲ್ಲಿ ಗೆದ್ದರೆ ಅದು ಪ್ರಜಾಪ್ರಭುತ್ವದ ಅಣಕು ಪ್ರದರ್ಶನ ಆಗುತ್ತದೆ. ಮುಂದೆ ಇಂತಹವರು ಏನೂ ಮಾಡಿದರೂ ನಡೆಯುತ್ತೆ ಅನ್ನೋ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ಹುಣಸೂರಿನಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಿದೆ. ಅಥಣಿಯಲ್ಲಿ ನಮ್ಮ ಅಭ್ಯರ್ಥಿ ಮೂಲತಃ ಜೆಡಿಎಸ್ನವರೇ. ಸವದಿಯವರೂ ನಮ್ಮ ಅಭ್ಯರ್ಥಿ ಮೇಲೆ ಒತ್ತಡ ಹಾಕಬಹುದು. ಅಥಣಿಗೂ ಹಾಗೂ ಹಿರೇಕೆರೂರಿನ ಪರಿಸ್ಥಿತಿಗೂ ವ್ಯತ್ಯಾಸವಿದೆ ಎಂದರು.
ಇದನ್ನು ಓದಿ: ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಕೆಪಿ ಬಚ್ಚೇಗೌಡ ನಾಮಪತ್ರ ತಿರಸ್ಕಾರ
ಈ ಚುನಾವಣೆಯಲ್ಲಿ ಜೆಡಿಎಸ್ 14 ಕ್ಷೇತ್ರ ಗಳನ್ನೂ ಗಂಭೀರವಾಗಿ ಪರಿಗಣಿಸಿದೆ. ಹಿರೇಕೆರೂರಿನಲ್ಲಿ ಸ್ಚಲ್ಪ ಬದಲಾವಣೆಯಾಗಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಒಟ್ಟಾಗಿ ಹೋಗೋದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಿದೆ. ಕೆಲವರು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿದವರು, ಈಗ ಮೈತ್ರಿ ಇಲ್ಲದಿದ್ದರೂ, ನಮ್ಮ ಅಭ್ಯರ್ಥಿಗಳನ್ನು ಸೋಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲದಿದ್ದರೂ ಪರವಾಗಿಲ್ಲ ಜೆಡಿಎಸ್ ಮಾತ್ರ ಗೆಲ್ಲಬಾರದು ಅನ್ನೋ ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್ಡಿಕೆ ಗಂಭೀರ ಆರೋಪ ಮಾಡಿದರು.ಹೊಸಕೋಟೆಯಲ್ಲಿ ಈಗಾಗಲೇ ಅಲ್ಲಿನ ಜನ ತೀರ್ಮಾನ ಮಾಡಿದ್ದಾರೆ. ಅವಶ್ಯಕತೆ ಬಿದ್ರೆ ಶರತ್ ಬಚ್ಚೇಗೌಡ ಪರವಾಗಿ ಪ್ರಚಾರ ಮಾಡುತ್ತೇನೆ. ಕೆ ಆರ್ ಪೇಟೆ ಪ್ರಕರಣದಲ್ಲಿ ಅವರೇ ಸಿಂಪತಿ ಗಿಟ್ಟಿಸಿಕೊಳ್ಳಲು ಹೀಗೆ ಮಾಡಿರಬಹುದು. ಯಾರೋ ಕಿಡಿಗೇಡಿಗಳು ಮಾಡಿರಬಹುದು, ಮಂಡ್ಯದಲ್ಲಿ ಹೇಗಾಯ್ತು ಆ ರೀತಿ ಮಾಡಲು ಹೊರಟಿದ್ದಾರೆ. ಆದರೆ ಮಂಡ್ಯ ಜನಕ್ಕೂ ಗೊತ್ತಾಗಿದೆ ಈಗ. ಆ ರೀತಿ ಈ ಬಾರಿ ನಡೆಯಲ್ಲ. ಹಣದ ಮದದಲ್ಲಿ ಸುಧಾಕರ್ ಸವಾಲು ಹಾಕಿದ್ದಾರೆ. ಹಣದಿಂದ ಮತ ಕೊಂಡುಕೊಳ್ಳುತ್ತೇನೆ ಅಂತಾರೆ. ಯಾವ ರೀತಿ ಅವರು ಹಣ ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅವರ ದುರಹಂಕಾರಕ್ಕೆ ಚುನಾವಣೆ ನಂತರ ಉತ್ತರ ನೀಡುತ್ತೇನೆ ಎಂದು ಅನರ್ಹ ಶಾಸಕರಿಗೆ ಎಚ್ಡಿಕೆ ತಿರುಗೇಟು ನೀಡಿದರು.