CT Ravi ಮುಖ್ಯಮಂತ್ರಿ ಆದ್ರೆ ಒಳ್ಳೆಯದು: ಕೆಎಸ್ ಈಶ್ವರಪ್ಪ

ಈಶ್ವರಪ್ಪ ಮತ್ತು ಸಿ ಟಿ ರವಿ

ಈಶ್ವರಪ್ಪ ಮತ್ತು ಸಿ ಟಿ ರವಿ

Karnataka Next CM? ಸಿಟಿ ರವಿ ಮುಖ್ಯಮಂತ್ರಿ ಆದರೆ ಒಳ್ಳೆಯದು ಅನಿಸ್ತು ಅದಕ್ಕೆ ಹೇಳಿದ್ದೇನೆ. ಆದರೆ ಈ ತೀರ್ಮಾನವನ್ನು ಶಾಸಕರು ಮತ್ತು ಕೇಂದ್ರ ನಾಯಕರು ಕುಳಿತು ಮಾಡುತ್ತಾರೆ ಎಂದರು.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi, BJP MLA) ಮುಖ್ಯಮಂತ್ರಿ ಆದ್ರೆ ಒಳ್ಳೆಯದು ಎಂದು ಮಾಜಿ ಸಚಿವ ಕೆಎಸ್ ಈಶ್ವಪ್ಪ (Former Minister KS Eshwarappa) ಅಭಿಪ್ರಾಯಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ  ಮಾತನಾಡಿದ ಕೆಎಸ್ ಈಶ್ವರಪ್ಪ, ಎಲ್ಲಾ ಒಕ್ಕಲಿಗರು (Okkaliga) ನನ್ನ ಹಿಂದೆ ನಿಲ್ಲಿ ನಾನು ಸಿಎಂ ಆಗ್ತೀನಿ ಎಂದು ಡಿಕೆ ಶಿವಕುಮಾರ್ (DK Shivakumar) ಹೇಳುತ್ತಾರೆ. ಎಲ್ಲಾ ಕುರುಬರು ನನ್ನ ಹಿಂದೆ ಬನ್ನಿ ನಾ ಮುಖ್ಯಮಂತ್ರಿ ಆಗ್ತೀನಿ ಎಂದು ಸಿದ್ದರಾಮಯ್ಯ (Siddaramaiah) ಹೇಳುತ್ತಾರೆ. ಇಂತಹ ಜಾತಿವಾದಿಗಳು ಮುಖ್ಯಮಂತ್ರಿ ಆಗಬೇಕೊ? ಸಿಟಿ ರವಿ ಅಂತಹ ರಾಷ್ಟ್ರೀಯವಾದಿ ಯುವಕ ಆಗಬೇಕೋ ಎಂದು ಪ್ರಶ್ನೆ ಮಾಡಿದರು.


ಸಿ.ಟಿ.ರವಿ ಜೀವನದಲ್ಲಿ ಎಂದೆಂದೂ ಜಾತಿವಾದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅಂತಹ ರಾಷ್ಟ್ರೀಯವಾದಿ ಹಿಂದುತ್ವವಾದಿ ಎಷ್ಟು ಹೋರಾಟ ಮಾಡಿದರು‌.ಅವರ ಜಿಲ್ಲೆಯಲ್ಲಿ ದತ್ತಮಾಲಾ ಹೋರಾಟ ಮಾಡಿ ಸುಪ್ರೀಂ ಕೋರ್ಟ್​​​ನಲ್ಲಿ ಯಶಸ್ವಿಯಾಗಿ ಬಂದು ಹಿಂದುತ್ವದ ನಾಯಕ ಅಂತ ತೋರಿಸಿ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಆ ಭಾಗದ ಎಲ್ಲರ ಅಭಿಪ್ರಾಯ ಸಿ.ಟಿ.ರವಿ ಅಂತಹ ಯುವಕ ಮುಖ್ಯಮಂತ್ರಿ ಆದರೆ ಒಳ್ಳೆಯದು ಅಂತಿದೆ ಎಂದರು.


ನನಗೂ ಹಾಗೆ ಅನಿಸ್ತು ಅದಕ್ಕೆ ಸಿಟಿ ರವಿ ಮುಖ್ಯಮಂತ್ರಿ ಆದರೆ ಒಳ್ಳೆಯದು ಅನಿಸ್ತು ಅದಕ್ಕೆ ಹೇಳಿದ್ದೇನೆ. ಆದರೆ ಈ ತೀರ್ಮಾನವನ್ನು ಶಾಸಕರು ಮತ್ತು ಕೇಂದ್ರ ನಾಯಕರು ಕುಳಿತು ಮಾಡುತ್ತಾರೆ ಎಂದರು.


ಇದನ್ನೂ ಓದಿ:  Sandalwood Stars: ಕನ್ನಡದ ಸ್ಟಾರ್‌ ನಟರು ಎಲೆಕ್ಷನ್ ಪ್ರಚಾರ ಮಾಡುವುದರ ಹಿಂದಿನ ಕಾರಣವೇನು ಗೊತ್ತೇ?


ಸುಪ್ರೀಂ ತೀರ್ಪನ್ನು ಅರ್ಥ ಮಾಡಿಕೊಳ್ಳದಷ್ಟು ಸಿದ್ದರಾಮಯ್ಯ ದಡ್ಡರಾದ್ರಲ್ಲ ಅಂತಾ ಬೇಜಾರಿದೆ ಎಂದು ವ್ಯಂಗ್ಯ ಮಾಡಿದ ಈಶ್ವರಪ್ಪ, ಸುಪ್ರೀಂ ಧರ್ಮಧಾರಿತ ಮೀಸಲಾತಿಯನ್ನು ಬೆಂಬಲ ಕೊಡಲ್ಲ. ಸಂವಿಧಾನದಲ್ಲಿನೇ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ಇರಕೂಡದು ಅಂದಿದ್ದಾರೆ. ಕಾಂಗ್ರೆಸ್ ಮುಸ್ಲಿಮರನ್ನು ತೃಪ್ತಿ ಪಡಿಸಲು ಶೇ.4 ಮೀಸಲಾತಿ ಇಟ್ಟರು. ಧರ್ಮಾಧಾರಿತ ಮೀಸಲಾತಿ ತೆಗೆದು ಶೇ.2ರಷ್ಟು ಮೀಸಲಾತಿ ಒಕ್ಕಲಿಗರಿಗೆ, ಲಿಂಗಾಯತರಿಗೆ ನೀಡಲಾಗಿದೆ ಎಂದರು.


top videos



    ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ಕೊಟ್ಟಿದೆ. ಜಡ್ಜ್ ಮೆಂಟ್ ಕೊಟ್ಟಿಲ್ಲ, ರದ್ದು ಮಾಡಿಲ್ಲ. ಇದನ್ನು ನಾವು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡುತ್ತೇವೆ ಎಂದು ತಿಳಿದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು