Congress ಇಟಾಲಿಯನ್ ಶಿಕ್ಷಣ ನೀತಿ ತಂದ್ರೆ ಅದನ್ನ ನಾಗ್ಪುರ ನೀತಿಯಾಗಿ ಬದಲಿಸುತ್ತೇವೆ: BC Nagesh

ಶ್ರೀನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರ ಪಠ್ಯವನ್ನು ತೆಗೆದು ಹಾಕಿಲ್ಲ. ವಿವಾದ ಸೃಷ್ಟಿಸಲು ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ರಾಜ್ಯದಲ್ಲಿ ಪಠ್ಯಕ್ರಮ (State Syllabus) ಬದಲಾವಣೆ ಬಗ್ಗೆ ವಿವಾದ ಸೃಷ್ಟಿಸಿಯಾಗಿದ್ದು, ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿಪಕ್ಷಗಳು, ಎಡಪಂಥೀಯರು ಮತ್ತು ಬುದ್ಧಿಜೀವಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ಈ ಎಲ್ಲದರ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Primary and secondary education minister BC Nagesh) ಸ್ಪಷ್ಟಪಡಿಸಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿರುವ ಸಚಿವರು, ‘ಇಟಾಲಿಯನ್ ಶಿಕ್ಷಣ ನೀತಿ’ಯನ್ನು ತರಲು ಕಾಂಗ್ರೆಸ್ (Congress) ಮುಂದಾದ್ರೆ ಅದನ್ನು ನಾವು ಖಂಡಿತವಾಗಿ ನಾಗ್ಪುರ ಶಿಕ್ಷಣ ನೀತಿಗೆ ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಪಠ್ಯಕ್ರಮದಲ್ಲಿ ಆಗುತ್ತಿರುವ ಬದಲಾವಣೆಗಳ ಹಿಂದಿನ ಕಾರಣವನ್ನು ಸಚಿವರು ವಿವರಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಡಾ.ಕೇಶವ ಬಲಿರಾಂ ಹೆಡಗೇವಾರ್, ಸ್ವಾತಂತ್ರ್ಯ ಹೋರಾಟಗಾರರಾದ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಅನೇಕರ ಕೊಡುಗೆಗಳ ಪಠ್ಯ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಲೂಟಿ ಮಾಡಿದ ವಿದೇಶಿಯರನ್ನು ವೈಭವೀಕರಣ ಬೇಕಿಲ್ಲ. ಮಕ್ಕಳಿಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಬೇಕಿದೆ ಎಂದು ಹೇಳಿದರು.

ದೇಶದ ಬಗ್ಗೆ ಓದಲು ಪ್ರೇರಣೆ

ನಾವು ನಮ್ಮ ವಿದ್ಯಾರ್ಥಿಗಳಲ್ಲಿ ಭಾರತೀಯ ಸಾಂಸ್ಕೃತಿಕ ಇತಿಹಾಸ, ರಾಷ್ಟ್ರೀಯತೆ ಮತ್ತು ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾದ ನಮ್ಮ ಮಹಾನ್ ದೇಶದ ಬಗ್ಗೆ ಓದುವ ಮತ್ತು ಜ್ಞಾನವನ್ನು ಪಡೆಯುವ ಅಗತ್ಯತೆಯ ವಿವಿಧ ಅಂಶಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ. ವಿದ್ಯಾರ್ಥಿಯು ತಮ್ಮ ಪಠ್ಯಗಳ ಮೂಲಕ ನಮ್ಮ ದೇಶದ ಬಗ್ಗೆ ಹೆಚ್ಚು ಓದಲು ಪ್ರೇರೇಪಿಸಬೇಕು ಎಂದು ಹೇಳುತ್ತಾರೆ ಬಿ.ಸಿ.ನಾಗೇಶ್.

ಇದನ್ನೂ ಓದಿ:  MLC Election; ಲಕ್ಷ್ಮಣ ಸವದಿಗೆ ಜಾಕ್ ಪಾಟ್: ಬಿಜೆಪಿ ಪಟ್ಟಿ ರಿಲೀಸ್

ಕಾಂಗ್ರೆಸ್ ವಿರುದ್ಧ ಬಿ.ಸಿ.ನಾಗೇಶ್ ವಾಗ್ದಾಳಿ

ಈ ಹಿಂದಿನ ಊಳಿಗಮಾನ್ಯ ಪದ್ಧತಿಯನ್ನು ಬದಲಾಯಿಸುವ ಸಮಯ ಬಂದಿದೆ. ಶಾಲಾ ಪಠ್ಯ ಪುಸ್ತಕಗಳಿಂದ ಶ್ರೀನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರ ಪಠ್ಯವನ್ನು ತೆಗೆದು ಹಾಕಿಲ್ಲ. ವಿವಾದ ಸೃಷ್ಟಿಸಲು ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶವನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ರಾಷ್ಟ್ರವಾದಿ ಸಿದ್ಧಾಂತಗಳನ್ನು ಸಮಾಧಿ ಮಾಡಿದ್ದು, ಮಕ್ಕಳು ಈಗ ಅವುಗಳನ್ನು ತೆರೆದುಕೊಳ್ಳುವ ಅಗತ್ಯವಿದೆ. ಆರೆಸ್ಸೆಸ್ ನಾಯಕರ ಭಾಷಣಗಳು ರಾಷ್ಟ್ರೀಯತೆ ಮತ್ತು ದೇಶಕ್ಕಾಗಿ ಹೆಮ್ಮೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಲವು ಕವಿಗಳ ಪಠ್ಯವನ್ನು ತೆಗೆದು ಹಾಕಿದಾಗ ಯಾರೂ ಮಾತನಾಡಲಿಲ್ಲ ಯಾಕೆ ಎಂದು ಬಿ.ಸಿ.ನಾಗೇಶ್ ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ ಪಿ.ಲಂಕೇಶ್, ಎನ್.ಆರ್.ರಾವ್ ಮತ್ತು ಸಾರಾ ಅಬೂಬಕರ್ ಅವರ ಪಠ್ಯ ತೆಗೆದುಕುರಿತು ಪ್ರತಿಕ್ರಿಯಿಸಲು ಸಚಿವರು ಹಿಂದೇಟು ಹಾಕಿದರು.

ಶಿಕ್ಷಣದ ಕೇಸರಿಕರಣ: ಡಿಕೆಶಿ ಆರೋಪ

ಹೆಡಗೇವಾರ ಅವರ ಭಾಷಣ, ಭಗವದ್ಗೀತೆ ಪರಿಚಯಿಸುವ ಮೂಲಕ ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಟಿಪ್ಪು ಸುಲ್ತಾನ್, ಶ್ರೀ ನಾರಾಯಣ್ ಗುರುಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದು ಹಾಕುವ ಮೂಲಕ ಶಿಕ್ಷಣವನ್ನ ಕೇಸರಿಕರಣಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಮಿಸ್ಸಿಂಗ್

10ನೇ ತರಗತಿ ಪುಸ್ತಕದಲ್ಲಿ ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಬಗ್ಗೆ ಒಂದೇ ಒಂದು ಲೈನ್ ಇಲ್ಲ. ಆದರೆ ಟಿಪ್ಪು ಬಗ್ಗೆ ಐದು ಪುಟ ಪ್ರಕಟಿಸಿದ್ದಾರೆ. ಇದ್ಯಾಕೆ ಹೀಗೆ? ಎಂದು ಪ್ರಶ್ನಿಸಿದ ಅವರು ಹಿಂದಿನ ಸರ್ಕಾರ ಮಕ್ಕಳ ತಲೆಯಲ್ಲಿ ಹಿಂದು ಮುಸ್ಲಿಂ ವರ್ಗ ಬೇಧ ಮಾಡಿದೆ. ಹಿಂದೂ ನಾಯಕರು ಇದ್ದರೆ ತೆಗೆದು ಹಾಕುವ ಕೆಲಸ ಮಾಡಿದ್ದಾರೆ. ಹಿಂದೂ ಮಹಾಸಾಗರ ಎಂದರೂ ಇವರು ಸಹಿಸಲ್ಲ. ಇಂಡಿಯನ್ ಓಷನ್ ಎಂದೇ ಹೇಳಲಾಗಿದೆ. ಮಕ್ಕಳ‌ ಕತೆಗಳನ್ನು ತೆಗೆದು ಹಾಕಿದ್ರು?

ಕೆಂಪೇಗೌಡರಿಲ್ಲದೇ ಬೆಂಗಳೂರಿನ ಚರಿತ್ರೆ ಹೇಳೋದು ಹೇಗೆ?

ಕೆಂಪೇಗೌಡರ ಪಠ್ಯವನ್ನೇ ತೆಗೆಯಲಾಗಿತ್ತು. ಕೆಂಪೇಗೌಡರ ಕುರಿತು ಒಂದೇ ಒಂದು ಲೈನ್ ಇಲ್ಲ. ಬೆಂಗಳೂರು ಪರಿಚಯ ಮಾಡಬೇಕೆಂದ್ರೆ ಕೆಂಪೇಗೌಡ ಇತಿಹಾಸ ಅವಶ್ಯವಿಲ್ಲವೇ? ಎಂದು ಬಳಸಿದ ಅವರು ಮಕ್ಕಳ ಕಥೆಗಳನ್ನು ಸಹ ಪಠ್ಯದಿಂದ ತೆಗೆಯಲಾಗಿತ್ತು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  DK Shivakumar Vs Siddaramaiah: ಮುಯ್ಯಿಗೆ ಮುಯ್ಯಿ: ಸಿದ್ದರಾಮಯ್ಯಗೆ ಡಿಕೆಶಿ ಚೆಕ್ ಮೇಟ್ ಕೊಟ್ಟಿದ್ದು ಹೇಗೆ ಗೊತ್ತಾ?

ಸಿಂಧೂ ಸಂಸ್ಕೃತಿ ಬದಲು ನೆಹರು ತನ್ನ ಮಗಳಿಗೆ ಪತ್ರ ಬರೆದ ಪಠ್ಯ ಸೇರಿಸಿದ್ದರು. ಸಿಂದೂ ಸಂಸ್ಕೃತಿ ಬಿಜೆಪಿ ಸಂಸ್ಕೃತಿಯೇ? ಎಂದು ಪ್ರಶ್ನಿಸಿದ್ದಾರೆ.
Published by:Mahmadrafik K
First published: