Bitcoin ಹಗರಣದಲ್ಲಿ ಕಾಂಗ್ರೆಸ್​ನವರು ಇದ್ದರೆ ಅವರನ್ನು ಒದ್ದು ಒಳಗೆ ಹಾಕಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬಿಟ್ ಕಾಯಿನ್ ಪ್ರಕರಣ (Bitcoin Scam) ಸಂಬಂಧ 100 ಪರ್ಸೆಂಟ್ ದಾಖಲೆ (Document ) ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ನಾವು ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರ್ಕಾರದ ಮಂತ್ರಿಗಳು, ಅಧಿಕಾರಿಗಳೇ (Ministers and Officers) ನಮಗೆ ಅದನ್ನು ಒದಗಿಸುತ್ತಿದ್ದಾರೆ ಎಂದರು.

ಡಿಕೆ ಶಿವಕುಮಾರ್​ .

ಡಿಕೆ ಶಿವಕುಮಾರ್​ .

  • Share this:
    ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ಸಂಬಂಧ ತನಿಖೆಗೆ ಇಡಿಗೆ ಬರೆದಿದ್ದೇವೆ ಅಂದ್ರು. ಇಡಿ ತನಿಖೆಗೆ ಕೊಟ್ಟವರು ಯಾರು? ಪಂಚನಾಮೆಗಳಾಗಿವೆ, ಸಾಕ್ಷಿ ಸಿಕ್ಕಿವೆ. ಈಗ ಸರ್ಕಾರ ಏನು ಹೇಳುತ್ತದೆ. ಪ್ರತಿಪಕ್ಷದವರು ಆರೋಪ ಮಾಡುತ್ತೇವೆ. ಹಾಗಾದರೆ ನೀವು ಸುಮ್ಮನೆ ಬರೆಯುತ್ತಿದ್ದೀರಾ? ವಿಷಯ ಇಲ್ಲದಿದ್ರೆ ಯಾಕೆ ಬರೆಯುತ್ತಿದ್ರಿ. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ನಮ್ಮವರ ಮೇಲೂ ಹೇಳಿದ್ರು. ಪೊಲೀಸ್ ಅಧಿಕಾರಿಗಳ ಆಡಿಯೋ ಇದೆ ಅಂತಿದ್ದೀರ. ಟೈಂ ಬರಲಿ ಎಲ್ಲವೂ‌ ಗೊತ್ತಾಗುತ್ತದೆ. ಹೋಂ ಮಿನಿಸ್ಟರ್ ಸುಮ್ಮನೆ ಹೇಳ್ತಾರಾ? ಕಾಂಗ್ರೆಸ್ ನವರಿದ್ದರೆ ಅರೆಸ್ಟ್ ಮಾಡಿ ಒಳಗೆ ಹಾಕ್ಲಿ.  ನಾವೇನಾದ್ರೂ ಅವರನ್ನ ಬೇಡ ಅಂದ್ವಾ? ಯಾಕೆ ಆ ಕೆಲಸ ಮಾಡ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

    ಬಿಟ್ ಕಾಯಿನ್ ಹಗರಣದ ವಿಷಯವಾಗಿ ಸಿಎಂ ಬೊಮ್ಮಾಯಿ ಅವರು ಪಿಎಂ ಜತೆ ಮಾತನಾಡಿದ್ದೀನಿ. ಇದು ಅವಶ್ಯಕತೆ ಇಲ್ಲದ ವಿಚಾರ ಎಂದು ಪ್ರಧಾನಿ ಹೇಳಿದ್ದಾಗಿ ಸಿಎಂ ಹೇಳಿದ್ದಾರೆ. ಬೆಂಕಿ ಇಲ್ಲದೇ ಹೊಗೆಯಾಡುತ್ತಾ..? ಪಿಎಂ ಜತೆ ಮಾತನಾಡಿದ್ದೀನಿ. ಅವರು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆಂದು ಸಿಎಂ ಹೇಳಿದ್ದಾರೆ. ಸಣ್ಣ ವಿಚಾರ ಆಗಿದ್ರೆ ಪ್ರಧಾನಿಗಳ ಬಳಿ ಮಾತನಾಡುವ ಅವಶ್ಯಕತೆ ಏನೀತು? ಹೈ ಲೆವಲ್ ನಲ್ಲಿ ಏನೇನು ನಡೆಯುತ್ತಿದೆ ನಮಗೆ ಗೊತ್ತಿಲ್ವಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.

    ಸೀಜ್ ಮಾಡಿದ 31 ಬಿಟ್ ಕಾಯಿನ್ ಯಾರ ಬಳಿ ಇವೆ. ಪಂಚನಾಮೆ ಯಾವಾಗ ಮಾಡಿದ್ರು. ಎಲ್ಲ ಮಾಹಿತಿ ಜನರಿಗೆ ತಿಳಿಸಲಿ. ಕಾಂಗ್ರೆಸ್ ಅವರು ಇದ್ದಾರೆ ಎಂದು ಹೇಳಿದ್ದಾರೆ. ಮೊದಲು ಅವರನ್ನು ಒದ್ದು ಒಳಗಡೆ ಹಾಕಲಿ. ನಾವು ಎಲ್ಲ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ನಿಮಗೆ ಇರುವ ಸೋರ್ಸ್ ನಮಗೂ ಇರುತ್ತೆ ಎಂದು ಹೇಳಿದರು.

    ಸರ್ಕಾರದ ಮಂತ್ರಿಗಳೇ ಸಾಕ್ಷಿ ಒದಗಿಸುತ್ತಾರೆ

    ಬಿಟ್ ಕಾಯಿನ್ ಪ್ರಕರಣ (Bitcoin Scam) ಸಂಬಂಧ 100 ಪರ್ಸೆಂಟ್ ದಾಖಲೆ (Document ) ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ನಾವು ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರ್ಕಾರದ ಮಂತ್ರಿಗಳು, ಅಧಿಕಾರಿಗಳೇ (Ministers and Officers) ನಮಗೆ ಅದನ್ನು ಒದಗಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಸಾಕಷ್ಟು ಮಾತನಾಡಿದ್ದು, ನಿನ್ನೆ ಕುಮಾರಸ್ವಾಮಿ ಅವರು ಕೂಡ ಹೇಳಿದ್ದಾರೆ. ಸರ್ಕಾರ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಅವರಿಗೆ ಅನುಕೂಲವಾಗುವ ಅಂಶಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಎಂದರು.

    ಇದನ್ನು ಓದಿ: Bitcoin Scam: ಸಿಎಂ ಬದಲಾವಣೆ ಚರ್ಚೆ; ಜಗದೀಶ್ ಶೆಟ್ಟರ್ ದೆಹಲಿಗೆ ಕರೆಸಿಕೊಂಡ ಬಿಜೆಪಿ ಹೈಕಮಾಂಡ್!

    ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣ

    ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೇ ವಿಷಯವಾಗಿ ನೆನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಸಿಎಂ ವಿರುದ್ಧ ಮೂಲ ಬಿಜೆಪಿಗರು ಬಂಡಾಯ ಎದ್ದಿರುವ ಸಂಬಂಧ ವಾರ್ನಿಂಗ್ ನೀಡಲು ಶೆಟ್ಟರ್ ಅವರನ್ನು ಬಿಜೆಪಿ ನಾಯಕರು ದೆಹಲಿಗೆ ಕರೆಸಿಕೊಂಡಿದ್ದಾರೋ ಅಥವಾ ಸಿಎಂ ಬದಲಾವಣೆ ಸಂಬಂಧ ಚರ್ಚೆ ಮಾಡಲು ದೆಹಲಿಗೆ ಕರೆಸಿಕೊಂಡಿದ್ದಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
    Published by:HR Ramesh
    First published: