• Home
  • »
  • News
  • »
  • state
  • »
  • Siddaramaiah: ಮಹಿಳೆಯರನ್ನು ಅಡಿಯಾಳಾಗಿ ನೋಡುವ ಮನುಸ್ಮೃತಿ ಮೇಲೆ ಬಿಜೆಪಿಗೆ ಒಲವು! ಸಿದ್ದರಾಮಯ್ಯ ಆರೋಪ

Siddaramaiah: ಮಹಿಳೆಯರನ್ನು ಅಡಿಯಾಳಾಗಿ ನೋಡುವ ಮನುಸ್ಮೃತಿ ಮೇಲೆ ಬಿಜೆಪಿಗೆ ಒಲವು! ಸಿದ್ದರಾಮಯ್ಯ ಆರೋಪ

ಸಿದ್ದರಾಮಯ್ಯ

ಸಿದ್ದರಾಮಯ್ಯ

"ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ಥಾನಮಾನಗಳು ಇಲ್ಲ. ಇದನ್ನು ಒಪ್ಪಿ, ಸಮಾಜದಲ್ಲಿ ಜಾರಿಗೊಳಿಸಿದವರು ಆರ್​ಎಸ್​ಎಸ್​ ಮತ್ತು ಬಿಜೆಪಿ ಪಕ್ಷ. ಆದರೆ ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಾಗಿದೆ" ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government)  ಬಂದು ಮೂರು ವರ್ಷ ಆಗಿದೆ. ಇಲ್ಲಿಯವರೆಗೆ ಒಂದೇ ಒಂದು ‌ಕಾರ್ಯಕ್ರಮ ಮಹಿಳೆಯರಿಗೆ ರೂಪಿಸಿ, ಜಾರಿ ಮಾಡಲಿಲ್ಲ. ಕಾಂಗ್ರೆಸ್​ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದ ಮೇಲೆ ನಿದ್ರಿಸುತ್ತಿದ್ದ ಸರ್ಕಾರ ದೊಡ್ಡ ಜಾಹೀರಾತನ್ನು ನೀಡಿ ತಾವೇ ಮುಂದೆ ಮಂಡಿಸುವ ಬಜೆಟ್​ನಲ್ಲಿ (Budget) ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳುತ್ತಿದೆ. 2018ರ ಚುನಾವಣಾ (Election) ವೇಳೆ ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು ಅದನ್ನು ಕೂಡ ಈಡೇರಿಸಿಲ್ಲ. ಈ ವರೆಗೆ ಮಲಗಿದ್ದ ರಾಜ್ಯ ಸರ್ಕಾರ ನಾವು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್‌ ನೀಡುತ್ತೇವೆ ಎಂದು ಘೋಷಿಸಿದ ಮೇಲೆ ಮಹಿಳಾ ಮತದಾರರನ್ನು ಸೆಳೆಯಲು ಪುಂಖಾನುಪುಂಖವಾಗಿ ಭರವಸೆಗಳನ್ನು ನೀಡುತ್ತಿದೆ ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ (Siddaramaiah) ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.


ಬಿಜೆಪಿ ಪಕ್ಷ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಇಲ್ಲಿಯವರೆಗೆ ಶೇ.10ರಷ್ಟನ್ನು ಕೂಡ ಈಡೇರಿಸಿಲ್ಲ. ಇನ್ನೂ ಈ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ 21 ಭರವಸೆಗಳನ್ನು ನೀಡಿತ್ತು. ಒಂದೂ ಕೂಡ ಜಾರಿಗೆ ಬಂದಿಲ್ಲ. ಬಿಜೆಪಿ ಯಂಥಾ ವಚನಭ್ರಷ್ಟ ಸರ್ಕಾರ ಯಾವುದೂ ಇಲ್ಲ ಎಂದು ಸಿದ್ಧರಾಮಯ್ಯ ತೆಗಳಿದರು.


ಮಹಿಳೆಯರ ಅಭಿವೃದ್ಧಿಯಿಂದ ದೇಶಾಭಿವೃದ್ಧಿ ಸಾಧ್ಯ


ಬಿಜೆಪಿ ಸಂವಿಧಾನ ಜಾರಿಯಾಗುವ ಮೊದಲಿನಿಂದಲೂ ಮಹಿಳೆಯರ ಪರವಾಗಿ ಇಲ್ಲ. ಇದೇ ಜನ ಮನುಸ್ಮೃತಿಯ ಮೂಲಕ ಮಹಿಳೆಯರನ್ನು ದಮನ ಮಾಡಿದ್ದರು. ಬಾಬಾ ಸಾಹೇಬರು ಸಂವಿಧಾನ ರಚಿಸಿದ ಕಾರಣದಿಂದಲೇ ಇಂದು ಈ ದೇಶದ ಮಹಿಳೆಯರಿಗೆ ಎಲ್ಲಾ ಹಕ್ಕುಗಳು ಸಿಗುತ್ತಿವೆ. ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರು " ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು" ಎಂದು ಹೇಳಿದ್ದರು. ನೆಹರು ಅವರ ಆಡಳಿತದಲ್ಲಿ ಹಿಂದೂ ವಿವಾಹ ಕಾಯ್ದೆ ಜಾರಿಗೆ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಿದರು. 1951ರ ಮಹಿಳಾ ಸಾಕ್ಷರತೆ ಪ್ರಮಾಣ 8.86% ಇದ್ದದ್ದು 2011ರ ಜನಗಣತಿಯ ಪ್ರಕಾರ 65.45% ಗೆ ಹೆಚ್ಚಳವಾಗಲು ಕಾಂಗ್ರೆಸ್‌ ಸರ್ಕಾರ ಕಾರಣ ಎಂದು ಮಾಜಿ ಸಿಎಂ ಹೇಳಿದರು.


ಇದನ್ನೂ ಓದಿ: Siddaramaiah: ನಾನು ಒಂದೇ ಕ್ಷೇತ್ರದಿಂದ ಸ್ಪರ್ಧಿಸ್ತೇನೆ! ದೇವರ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ


ವಿಧಾನಸಭೆ-ಲೋಕಸಭೆಯಲ್ಲೂ 33% ಮೀಸಲಾತಿ


ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ 30% ಮೀಸಲಾತಿ ಪ್ರಮಾಣವನ್ನು 33% ಗೆ ಹೆಚ್ಚಿಸಿದ್ದೇವೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಲಾಯಿತು. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಸಿಗಬೇಕು. ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮೀಸಲಾತಿ ನೀಡಬೇಕು. ನನ್ನ ಪ್ರಕಾರ ಶೇ. 50 ರಷ್ಟನ್ನು ಕೊಡಬೇಕು. 1995ರಲ್ಲಿ ಲೋಕಸಭೆ ಮುಂದೆ ತರಲಾಗಿತ್ತಾದರೂ ಜಾರಿಯಾಗಿಲ್ಲ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಬಿಲ್‌ ಅನ್ನು ಪಾಸ್‌ ಮಾಡುವ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕೆಂಬು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.




ಮನುಸ್ಮೃತಿಯಲ್ಲಿ ಬಿಜೆಪಿ ನಂಬಿಕೆ


ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ಥಾನಮಾನಗಳು ಇಲ್ಲ. ಮಹಿಳೆಯರು ಗಂಡಸರ ಅಡಿಯಾಳಾಗಿ ಇರಬೇಕು ಎಂದು ಇದು ಹೇಳುತ್ತದೆ. ಮನುಸ್ಮೃತಿಯ ಅಧ್ಯಾಯ 5 ನಿಯಮ 48ರ ಪ್ರಕಾರ ಮಹಿಳೆಯೊಬ್ಬಳು ಬಾಲ್ಯದಲ್ಲಿ ತಂದೆ ತಾಯಿಯ ಅಧೀನದಲ್ಲಿ, ನಂತರ ಗಂಡನ ಅಧೀನದಲ್ಲಿ, ನಂತರ ಮಕ್ಕಳ ಅಧೀನದಲ್ಲಿರಬೇಕು ಎಂಬುದನ್ನು ಹೇಳುತ್ತದೆ. ಇದನ್ನು ಒಪ್ಪಿ, ಸಮಾಜದಲ್ಲಿ ಜಾರಿಗೊಳಿಸಿದವರು ಆರ್​ಎಸ್​ಎಸ್​ ಮತ್ತು ಬಿಜೆಪಿ ಪಕ್ಷ. ಆದರೆ ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಾಗಿದೆ. ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳು ಸಿಗಬೇಕು, ಸಮಾನ ಗೌರವ, ಅವಕಾಶಗಳು ಸಿಗಬೇಕು ಎಂದು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ, ಮುಂದೆಯೂ ಇದಕ್ಕೆ ಬದ್ಧವಾಗಿರಲಿದೆ ಎಂದರು.



ಪ್ರತಿಯೊಬ್ಬ ಮಹಿಳೆಯೂ ನಾಯಕಿ

ಕಾಂಗ್ರೆಸ್​ನ ನಾ ನಾಯಕಿ ಕಾರ್ಯಕಮ್ರದಲ್ಲಿ ಪ್ರಿಯಾಂಕ ಗಾಂಧಿ ತಾವೂ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ವ್ಯಂಗ್ಯವಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಪ್ರತಿಕ್ರಿಯೆ, ಪ್ರಿಯಾಂಕರವರೂ ಸ್ವಯಂ ನಾಯಕಿ ಎಂದೂ ಎಲ್ಲಿಯೂ ಘೋಷಿಸಿಕೊಂಡಿದ್ದಾರೆ? ಅವರು ಪ್ರತಿಯೊಬ್ಬ ಮಹಿಳೆಯೂ ನಾಯಕಿ ಎಂದು ಹೇಳಿದ್ದಾರೆ. ಇನ್ನು 25 % ಕಮಿಷನ್ ವಿಚಾರವಾಗಿ ಕೇಳಿದ್ದಕ್ಕೆ, ಅದೂ ಇಡೀ ಜಗತ್ತಿಗೆ ಗೊತ್ತಿರುವ ವಿಚಾರ ನಡೀರಿ ಎಂದು ತೆರಳಿದ್ದಾರೆ.

Published by:Rajesha B
First published: