ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal), ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ (Madarasa) ಸಂಪೂರ್ಣ ಬಂದ್ ಮಾಡ್ತೀವಿ ಎಂದು ಹೇಳಿದ್ದಾರೆ. ಇವತ್ತು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಕಾರಣ ಶಿವಾಜಿ ಮಹಾರಾಜರು.ಇಲ್ಲವಾದ್ರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅಭಯ್ ಪಾಟೀಲ್ ಅಜರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು. ಬೆಳಗಾವಿ ಜಿಲ್ಲೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಪಾದಾರ್ಪಣೆ ಮಾಡಿದ ಪುಣ್ಯಭೂಮಿ ಎಂದು ಹೇಳಿದರು.
ಇದೇ ವೇದಿಕೆಯ ಮೇಲಿದ್ದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಶರ್ಮಾ ಅವರನ್ನು ಕೊಂಡಾಡಿದ ಯತ್ನಾಳ್, ಅಸ್ಸಾಂ ಹಿಂದೂಸ್ತಾನ್ ಬಿಟ್ಟು ಹೋಗುವ ವಾತಾವರಣ ಇತ್ತು. ಅಸ್ಸಾಂನಲ್ಲಿ ಹಿಂದೂಗಳು ಜೀವನ ಮಾಡಲು ಹಿಮಂತ್ ಬಿಸ್ವಾ ಶರ್ಮಾ ಅವರಿಂದ ಸಾಧ್ಯವಾಗಿದೆ ಎಂದರು.
ನಾನು ಶಿವಾಜಿ ಸಂತಾನ
ನನಗೊಬ್ಬರು ಶಿವಾಜಿ ಮಹಾರಾಜರ ಬಗ್ಗೆ ಮಾತನಾಡ್ತಿಯಾ ಅವರಿಗೆ ಹುಟ್ಟಿದಿಯಾ ಅಂದ್ರು.ಹೌದು ನಾನು ಶಿವಾಜಿ ಸಂತಾನ, ಟಿಪ್ಪು ಸುಲ್ತಾನ್ ಕಾ ಸಂತಾನ ಅಲ್ಲ ಎಂದಿದ್ದೆ. ಈ ದೇಶದ ಅನ್ನ ತಿಂದು ನೀರು ಕುಡಿದು ಪಾಕಿಸ್ತಾನ ಪರ ಮಾತನಾಡೋ ತಾಯಗಂಡರು ಈ ದೇಶದಲ್ಲಿದ್ದಾರೆ. ನಿಮಗೆ ಪಾಕಿಸ್ತಾನ ಮೇಲೆ ಇಚ್ಚೆ ಇದ್ರೆ ಹೋಗಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ರೀತಿ ಕರ್ನಾಟಕದಲ್ಲಿ ಮದರಸಾ ಬಂದ್ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಕಂಪ್ಲೀಟ್ ಮದರಸಾ ಬಂದ್ ಮಾಡಲಾಗುವುದು. ಹಿಂದೂಗಳಿಗೆ ಇರೋದು ಭಾರತ ಒಂದೇ. ಬೆಳವಡಿ ಮಲ್ಲಮ್ಮ ತಂಗಿ ಅಂತಾ ಸ್ವೀಕಾರ ಮಾಡಿ ಅಚರ ಬಳಿ ರಾಖಿ ಕಟ್ಟಿಸಿಕೊಂಡ ಇತಿಹಾಸ ಬೆಳಗಾವಿಯಲ್ಲಿದೆ.
ಶಿವಾಜಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಲ್ಲ
ಈ ದೇಶದಲ್ಲಿರುವ ನಾಲಾಯಕ್ ಬುದ್ಧಿಜೀವಿಗಳು ಔರಂಗಜೇಬಗೆ ಹುಟ್ಟಿದ ಹಾಗೇ ಬರೆದಿದ್ದಾರೆ. ಮಹಾರಾಣಾ ಪ್ರತಾಪ್ 108 ಕೆಜಿ ಆಯುಧ ಹಿಡಿದು ಯುದ್ಧಕ್ಕೆ ಬರುತ್ತಿದ್ದರು. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಹೇಳ್ತಾರೆ. ಲಕ್ಷಾಂತರ ಮಹಿಳೆಯರ ಮೇಲೆ ಟಿಪ್ಪು ಸುಲ್ತಾನ್ ಅತ್ಯಾಚಾರ ಮಾಡಿದ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ಮಾಡಿಲ್ಲ. ಹಾಗೇನಾದರೂ ಆದ್ರೆ ಅವರ ಕೈಯನ್ನು ಕತ್ತರಿಸುತ್ತಿದ್ದರು ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ
ಇದೇ ವೇಳೆ ಮಾತನಾಡಿದ ಅಸ್ಸಾ ಸಿಎಂ ಶರ್ಮಾ, ಕರ್ನಾಟಕದ ಬೆಳಗಾವಿ, ಬಳ್ಳಾರಿ, ಕೊಪ್ಪಳ ಭಾಗದಲ್ಲಿ ಓಡಾಡಿದ್ದೇನೆ. ವಾತಾವರಣ ಚನ್ನಾಗಿದೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ನನ್ನ ರಾಜಕೀಯ ಅನುಭವದ ಪ್ರಕಾರ ಬಿಜೆಪಿ ಗೆಲುವು ಸಾಧಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Basanagowda Patil Yatnal: ಬಿಜೆಪಿ ಭಿನ್ನಮತದ ಬೆಂಕಿಗೆ ತುಪ್ಪ ಸುರಿದ್ರಾ ಸಚಿವ ಕಾರಜೋಳ?
ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿಮಂತ್ ಬಿಸ್ವಾ ಶರ್ಮಾ, ಇಲ್ಲಿಗೆ ಬಂದು ಏನ್ ಮಾಡುತ್ತಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಹೇಳುತ್ತಾರೆ. ಇಲ್ಲಿ ಬಂದು ಸಭೆ ಮಾಡಲು ಬಿಜೆಪಿ ಸರ್ಕಾರ ನಿಮಗೆ ಅನುಮತಿ ನೀಡುತ್ತದೆ.ಇದರ ಅರ್ಥ ಭಾರತದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಟಾಂಗ್ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಉಚಿತ ವಿದ್ಯುತ್, ಮಹಿಳೆಯರಿಗೆ 2 ಸಾವಿರ ಗ್ಯಾರಂಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಶರ್ಮಾ, ಕಾಂಗ್ರೆಸ್ ಸರ್ಕಾರ ಇದ್ದಾಗ ಎನ್ ಮಾಡಿದ್ರಿ ಹೇಳಿ. ಯಾರ ಮೇಲೆ ಭರವಸೆ ಇಲ್ಲವೇ ಅದರ ಗ್ಯಾರಂಟಿ ನೀಡಲಾಗುತ್ತದೆ. ಯಾವುದು ಒಳ್ಳೆಯದು ಇದೆ ಅದರ ಗ್ಯಾರಂಟಿ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ