ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೆ ಮತ್ತೆ ಆಪರೇಷನ್ ಕಮಲ?; ಜೆಡಿಎಸ್ ವರಿಷ್ಠರಿಗೆ ಲಿಂಬಾವಳಿ ಶಾಕ್

ಒಂದೊಮ್ಮೆ ಬಿಜೆಪಿ ಮತ್ತೆ ಆಪರೇಷನ್​ ಕಮಲಕ್ಕೆ ಮುಂದಾದರೆ, ಜೆಡಿಎಸ್​ನ ಕೆಲ ಶಾಸಕರು ಬಿಜೆಪಿ ಸೇರುವುದು ಹೌದು ಎನ್ನುತ್ತಿವೆ ಮೂಲಗಳು. ಹೀಗಾದಲ್ಲಿ ಜೆಡಿಎಸ್​ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಕುಸಿಯಲಿದೆ

Rajesh Duggumane | news18-kannada
Updated:November 25, 2019, 1:48 PM IST
ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೆ ಮತ್ತೆ ಆಪರೇಷನ್ ಕಮಲ?; ಜೆಡಿಎಸ್ ವರಿಷ್ಠರಿಗೆ ಲಿಂಬಾವಳಿ ಶಾಕ್
ಅರವಿಂದ ಲಿಂಬಾವಳಿ
  • Share this:
ಬೆಂಗಳೂರು (ನ.25): ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳ ಪೈಕಿ ಹದಿನೈದೂ ಕ್ಷೇತ್ರಗಳನ್ನು ಗೆಲ್ಲುವ ಭರವಸೆಯಲ್ಲಿ ಬಿಜೆಪಿ ಇದೆ. ಒಂದೊಮ್ಮೆ 7ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಸರ್ಕಾರ ಪತನವಾಗಲಿದೆ. ಒಂದೊಮ್ಮೆ ಹೀಗಾದಲ್ಲಿ ಬಿಜೆಪಿ ಮತ್ತೆ ಆಪರೇಷನ್​ ಕಮಲದ ಮೊರೆ ಹೋಗಲಿದೆ ಎನ್ನುವ ಸೂಚನೆಯನ್ನು ಶಾಸಕ ಅರವಿಂದ ಲಿಂಬಾವಳಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಲಿಂಬಾವಳಿ, ಜೆಡಿಎಸ್​ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನುವ ಗುಟ್ಟು ಬಿಚ್ಚಿದ್ದಾರೆ. "ಜೆಡಿಎಸ್​​ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಫಲಿತಾಂಶ ಬಂದ ಬಳಿಕ ರಾಜಕೀಯ ಧ್ರುವೀಕರಣ ಆಗಲಿದೆ," ಎಂದರು. ಈ ಮೂಲಕ ಮತ್ತೆ ಆಪರೇಷನ್​ ಕಮಲ ನಡೆಯಲಿದೆ ಎನ್ನುವ ಸೂಚನೆ ನೀಡಿದರು.

ಬಿಜೆಪಿ ಸಂಪಕರ್ದಲ್ಲಿರುವ ಶಾಸಕರು ಯಾರು? ಎನ್ನುವ ಗುಟ್ಟನ್ನು ಲಿಂಬಾವಳಿ ಬಿಟ್ಟುಕೊಟ್ಟಿಲ್ಲ. “ನಮ್ಮ ಸಂಪಕರ್ದಲ್ಲಿರುವ ಯಾವ ಯಾವ ಶಾಸಕರಿದ್ದಾರೆ? ಎಷ್ಟು ಜನ ಇದ್ದಾರೆ? ಎಂಬುದು ರಿಸಲ್ಟ್​ ಬಂದ ನಂತರ ತಿಳಿಯಲಿದೆ,”  ಎಂದರು ಅವರು.

ಜೆಡಿಎಸ್ ವರಿಷ್ಠರಿಗೆ ಟೆನ್ಶನ್​:

ಲಿಂಬಾವಳಿ ಹೇಳಿಕೆ ನಂತರ ಜೆಡಿಎಸ್​ ವಲಯದಲ್ಲಿ ಟೆನ್ಶನ್​ ಆರಂಭವಾಗಿದೆ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಹಕರಿಸಿದ ಅನರ್ಹ ಶಾಸಕರಿಗೆ ಈಗ ಬಿಜೆಪಿ ಟಿಕೆಟ್​ ನೀಡಿದೆ. ಅಲ್ಲದೆ, ಗೆದ್ದರೆ ಸಚಿವರನ್ನಾಗಿ ಮಾಡುವ ಭರವಸೆಯನ್ನೂ ನೀಡಿದೆ. ಹೀಗಾಗಿ ವಿಪಕ್ಷ ಶಾಸಕರಿಗೆ ಒಂದು ಭರವಸೆ ಬಂದಿದೆ.

ಒಂದೊಮ್ಮೆ ಬಿಜೆಪಿ ಮತ್ತೆ ಆಪರೇಷನ್​ ಕಮಲಕ್ಕೆ ಮುಂದಾದರೆ, ಜೆಡಿಎಸ್​ನ ಕೆಲ ಶಾಸಕರು ಬಿಜೆಪಿ ಸೇರುವುದು ಹೌದು ಎನ್ನುತ್ತಿವೆ ಮೂಲಗಳು. ಹೀಗಾದಲ್ಲಿ ಜೆಡಿಎಸ್​ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಕುಸಿಯಲಿದೆ.

ಎಚ್​ಡಿಕೆಗೆ ಟಾಂಗ್​ಸರ್ಕಾರ ಕಾಪಾಡುತ್ತೇನೆಎನ್ನುವ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಅರವಿಂದ್ ಲಿಂಬಾವಳಿ ಟಾಂಗ್​ ನೀಡಿದ್ದಾರೆ. "ರಾಜಕೀಯ ಧ್ರುವೀಕರಣ ಆಗುವಾಗ ಜೆಡಿಎಸ್ ಶಾಸಕರು ಬಿಜೆಪಿಗೆ ಬರುವ ಮನಸ್ಸು ಮಾಡಿದ್ದಾರೆ. ಇದೀಗ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ ಅಷ್ಟೇ," ಎಂದಿದ್ದಾರೆ ಅವರು.

(ವರದಿ: ಕೃಷ್ಣ ಜಿವಿ)

 
First published: November 25, 2019, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading