ಬಿಜೆಪಿ - ಕೆಜೆಪಿ ಆಗಲಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಎಲ್ಲಿ ಸಿಎಂ ಆಗುತ್ತಿದ್ದರು : ಸಚಿವ ಈಶ್ವರಪ್ಪ

ರಾತ್ರಿ ಕನಸು ಕಂಡ ತಿರುಕ ಬೆಳಿಗ್ಗೆ ಎದ್ದು ಮತ್ತೆ ಮುರುಕಲು ತಟ್ಟೆ ತೆಗೆದುಕೊಂಡು ಭಿಕ್ಷೆ ಬೇಡಲು ತೆರಳುತ್ತಾರೆ. ಅದೇ ರೀತಿ, ಸಿದ್ಧರಾಮಯ್ಯನವರು ಕನಸು ಕಾಣುತ್ತಿದ್ದಾರೆ.ನಮ್ಮ ಮತಗಳ ವಿಭಜನೆಯಿಂದಾಗಿ ಅವರು ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದ್ದಾರೆ.

G Hareeshkumar | news18-kannada
Updated:October 24, 2019, 2:46 PM IST
ಬಿಜೆಪಿ - ಕೆಜೆಪಿ ಆಗಲಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಎಲ್ಲಿ ಸಿಎಂ ಆಗುತ್ತಿದ್ದರು : ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಶಿವಮೊಗ್ಗ(ಅ.24): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿ ಕೆಜೆಪಿ ಆಗಲಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಎಲ್ಲಿ ಸಿಎಂ ಆಗುತ್ತಿದ್ದರು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ರಾತ್ರಿ ಕನಸು ಕಂಡ ತಿರುಕ ಬೆಳಿಗ್ಗೆ ಎದ್ದು ಮತ್ತೆ ಮುರುಕಲು ತಟ್ಟೆ ತೆಗೆದುಕೊಂಡು ಭಿಕ್ಷೆ ಬೇಡಲು ತೆರಳುತ್ತಾರೆ. ಅದೇ ರೀತಿ, ಸಿದ್ಧರಾಮಯ್ಯನವರು ಕನಸು ಕಾಣುತ್ತಿದ್ದಾರೆ. ನಮ್ಮ ಮತಗಳ ವಿಭಜನೆಯಿಂದಾಗಿ ಅವರು ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದ್ದಾರೆ.

ಏನು ಸಾಧನೆ ಮಾಡದೇ ಹಿಂದುಳಿದವರಿಗೆ, ದಲಿತರಿಗೆ ಉದ್ದಾರ ಮಾಡಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. 5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ 78 ಸ್ಥಾನ ಗಳಿಸಿ ಸೋಲು ಕಂಡಿದ್ದಾರೆ. ಸ್ವತಃ ಸಿದ್ಧರಾಮಯ್ಯ, ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಇದನ್ನ ಮೊದಲು  ಅರಿತುಕೊಳ್ಳಲಿ ಎಂದರು.

ಇದನ್ನೂ ಓದಿ : ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ನಿಜ ತಿಳಿಯಲಿ; ನಾನೇ ಅವರಿಗೆ ಆತ್ಮಾಹುತಿ ಪುಸ್ತಕ ನೀಡುತ್ತೇನೆ: ಸಿಟಿ ರವಿ

ನರೇಂದ್ರ ಮೋದಿ ಯವರು ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾರೆ ಅಂದರೆ, ಅವರು ಜನಪರವಾದ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ ಅದಕ್ಕೆ ಆಗಿದ್ದಾರೆ.  ಆದರೆ, ಒಳ್ಳೆಯ ಕೆಲಸ ಮಾಡಿದ್ದರೆ, ಸಿದ್ಧರಾಮಯ್ಯ ಮತ್ತೆ 2ನೇ ಬಾರಿಗೆ ಸಿ.ಎಂ. ಆಗಬೇಕಿತ್ತಲ್ಲ ಅಂತಾ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗದವರ ಶಾಪ ನಿಮ್ಮ ಮೇಲಿದೆ.  ಹೀಗಾಗಿ ಯಾವುದೇ ಕಾರಣಕ್ಕೂ ನೀವು ಮತ್ತೆ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದಾರೆ.

ಹಣ ಬಿಡುಗಡೆಯಲ್ಲಿ ರಾಜಕೀಯ ಮಾಡಿಲ್ಲ

ನೆರೆ ಸಂಬಂಧಿಸಿದಂತೆ, ಸಿದ್ಧರಾಮಯ್ಯ, ವಿಪಕ್ಷ ನಾಯಕನಾಗಿ ಪತ್ರ ಬರೆಯಲಿ ಇದರಲ್ಲೇನು ತಪ್ಪಿಲ್ಲ. ಆದರೆ, ನೆರೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ ಬಿಡುಗಡೆಯಾಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ, ಹಣ ಬಿಡುಗಡೆ ಆಗುತ್ತದೆ. ಇದರಲ್ಲಿ ರಾಜಕೀಯವೇನು ಇಲ್ಲ. ಸಿದ್ಧರಾಮಯ್ಯನವರು, ಆರ್ಥಿಕ ಮಂತ್ರಿಯಾಗಿದ್ದವರು, ಅನೇಕ ಬಾರಿ ಬಜೆಟ್ ಮಂಡನೆ ಮಾಡಿರುವ ಅವರು ಅರಿತುಕೊಳ್ಳಲಿ. ಕೇಂದ್ರ ನೀತಿ, ನಿಯಮದಂತೆ, ಬಿಡುಗಡೆ ಮಾಡುವುದನ್ನು ತಪ್ಪು ಸರಿ ಎಂದು ನೊಡಿಕೊಂಡು ಹೇಳಲಿ, ಕೇವಲ ರಾಜಕೀಯಕ್ಕೊಸ್ಕರ ಟೀಕೆ ಮಾಡುವುದನ್ನು ಸಿದ್ಧರಾಮಯ್ಯನವರು ಬಿಡಲಿ ಎಂದು ಸಚಿವ ಈಶ್ವರಪ್ಪ ಸಲಹೆ ನೀಡಿದ್ದಾರೆ.
First published: October 24, 2019, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading