Idgah Ground: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಮಾಡುವಂತಿಲ್ಲ, ಜಮೀರ್​ ವಿವಾದ

ಈಗಾಗಲೇ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಈ ವೇಳೆ ಶಾಸಕ ಜಮೀರ್ ಮತ್ತೆ ಈದ್ಗಾ ಮೈದಾನ ನಮ್ಮದೇ ಅನ್ನೋ ಥರಾ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಸ್ವಲ್ಪ ತಣ್ಣಗಾಗಿದ್ದ ವಿವಾದವನ್ನು ಮತ್ತೆ ಸೃಷ್ಟಿ ಮಾಡಿದ್ದಾರೆ.

ಜಮೀರ್ ಅಹ್ಮದ್ ಖಾನ್

ಜಮೀರ್ ಅಹ್ಮದ್ ಖಾನ್

  • Share this:
ಈದ್ಗಾ ಮೈದಾನ (Idgah Ground) ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ನಿನ್ನೆಯಷ್ಟೇ ಈದ್ಗಾ ಮೈದಾನ ಸರ್ಕಾರದ ಆಸ್ತಿ ಅಂತಾ ಬಿಬಿಎಂಪಿ (BBMP) ಘೋಷಿಸಿತ್ತು. ಇದರ ನಡುವೆ ಈಗ ಸ್ವಾತಂತ್ರ್ಯೋತ್ಸವ (Independence Day) ಹತ್ತಿರ ಬರುತ್ತಿದ್ದಂತೆ ಮತ್ತೆ ವಿವಾದ ಜೋರಾಗ್ತಿದೆ. ಈ ಮೈದಾನದಲ್ಲಿ ಧ್ವಜಾರೋಹಣ (Flag Hoisting) ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಇಂದು ಚಾಮರಾಜಪೇಟೆ ಶಾಸಕ ಜಮೀರ್ ಮತ್ತೆ ವಿವಾದದ (Controversy) ಕಿಡಿ ಹೊತ್ತಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ (Festival) ಆಚರಣೆಗೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹಾಗಾಗಿ ಮೈದಾನ ಕದನಕ್ಕೆ ಮತ್ತೆ ಜೀವ ಬಂದಿದ್ದು ಇದು ನಾಗರಿಕ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಮೈದಾನದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಶಾಸಕ ಜಮೀರ್​ ಅಹ್ಮದ್ ಮತ್ತೆ ಈದ್ಗಾ ಮೈದಾನ ನಮ್ಮದೇ ಅನ್ನೋ ಥರಾ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಸ್ವಲ್ಪ ತಣ್ಣಗಾಗಿದ್ದ ವಿವಾದವನ್ನು ಮತ್ತೆ ಸೃಷ್ಟಿ ಮಾಡಿದ್ದಾರೆ.

ಗಣೇಶನ ಹಬ್ಬಕ್ಕಿಲ್ಲ ಅವಕಾಶ!

ಈದ್ಗಾ ಮೈದಾನದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜಾರೋಹಣ ಮಾಡಬಹುದು. ಜನವರಿ 26ರಂದು ಗಣರಾಜ್ಯೋತ್ಸವ ವೇಳೆ ತ್ರಿವರ್ಣ ಧ್ವಜಾರೋಹಣ, ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡ ಧ್ವಜಾರೋಹಣಕ್ಕೆ ಮಾತ್ರ ಅವಕಾಶ ಇದೆ. ಆದರೆ ಗಣೇಶನ ಹಬ್ಬ ಆಚರಣೆಗೆ ಯಾವುದೇ ಅವಕಾಶ ಇಲ್ಲ ಎಂದಿದ್ದಾರೆ.

Edga Controversy MLA Zameer ahmed say Ganesh Festival cannot be celebrate in ground
ಈದ್ಗಾ ಮೈದಾನ


ಇದನ್ನೂ ಓದಿ: ಭಾರತದ ಧ್ವಜ ಮೊದಲು ಹೇಗಿತ್ತು, ನಂತರ ಹೇಗೆ ಬದಲಾಯಿತು? ಇತಿಹಾಸ ಇಲ್ಲಿದೆ

ಬಾ ಬಾಸು ಒಟ್ಟಿಗೆ ಹಾರಿಸೋಣ!

ಈದ್ಗಾ ಮೈದಾನದಲ್ಲಿ ಸ್ಥಳ ಪರಿಶೀಲನೆ ವೇಳೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ ಮತ್ತು ಶಾಸಕ ಜಮೀರ್ ಅಹ್ಮದ್ ಮುಖಾಮುಖಿಯಾದರು. ಆಗ ಒಕ್ಕೂಟ ವೇದಿಕೆ‌ ಮುಖಂಡರು, ನಾವು ಆಸಗ್ಟ್ 15ರಂದು ಬಾವುಟ ಹಾರಿಸ್ತೇವೆ ಅಂದರು. ಆಗ ಜಮೀರ್, ಬಾ ಬಾಸ್ ನಾವು-ನೀವು ಎಲ್ಲರೂ ಒಟ್ಟಾಗಿ ಧ್ವಜ ಹಾರಿಸೋಣ ಎಂದು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋದರು.

ಎಲ್ಲದಕ್ಕೂ ಅನುಮತಿ ಬೇಕು!

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಈದ್ಗಾ ಮೈದಾನದಲ್ಲಿ ಇನ್ಮುಂದೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಸಾಮೂಹಿಕ ನಮಾಜ್, ಗಣೇಶ ಹಬ್ಬ ಆಚರಣೆ, ರಾಷ್ಟ್ರಧ್ವಜ ಹಾರಿಸೋದಕ್ಕೂ ಕಂದಾಯ ಇಲಾಖೆ ಅನುಮತಿ ಬೇಕೇ ಬೇಕು. ಕಂದಾಯ ಇಲಾಖೆ ಅನುಮತಿ ಕೊಟ್ಟರೆ ಮಾತ್ರ ಈದ್ಗಾ ಮೈದಾನದಲ್ಲಿ ಯಾವುದೇ ಚಟುವಟಿಕೆ ನಡೆಸಬಹುದು ಅಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಡಾಕ್ಟರ್, ಮಗಳು ನಿಗೂಢ ಸಾವು

ಗಣೇಶ ಹಬ್ಬಕ್ಕೂ ಅನುಮತಿ ಕೊಡಿ

ಹಿಂದೂ ಜನಜಾಗೃತಿ ವೇದಿಕೆಯ ಮುಖಂಡ ಮೋಹನ್ ಗೌಡ ಪ್ರತಿಕ್ರಿಯೆ ನೀಡಿ, ಗಣೇಶ ಉತ್ಸವ, ಹಿಂದೂ ಹಬ್ಬ, ಕಾರ್ಯಕ್ರಮಗಳಿಗೂ ಅವಕಾಶ ಕೊಡಿ ಅಂತಾ ಸರ್ಕಾರದ ಬಳಿ ಅನುಮತಿ ಕೇಳ್ತೇವೆ. ಈ ಹಿಂದೆ ಬಿಬಿಎಂಪಿಯ ಅನುಮತಿ ಕೇಳಿದ್ದೇವೆ. ಇದೀಗ ಕಂದಾಯ ಇಲಾಖೆಗೂ ಪತ್ರ ಬರೆದು ಮನವಿ ಮಾಡಿಕೊಳ್ತೇವೆ ಅಂದರು.

ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತು ಎಂದು ಈಗಾಗಲೇ ಬಿಬಿಎಂಪಿ ಹೇಳಿದೆ. ಆದ್ರೆ ಇದು ನಮ್ಮ ಸ್ವತ್ತು ಎಂದು ರಾಜ್ಯ ವಕ್ಫ್‌ ಬೋರ್ಡ್‌ ವಾದಿಸುತ್ತಿದೆ. ಇಷ್ಟಾದ್ರೂ ಇದು ಕಾನೂನು ವಿಚಾರವಾಗಿದ್ದು, ಅದನ್ನು ವಕ್ಫ್‌ ಬೋರ್ಡ್‌ ತೀರ್ಮಾನಿಸುತ್ತದೆ ಎಂದು ಜಮೀರ್ ಹೇಳಿದ್ದಾರೆ.

ಇನ್ನು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗುತ್ತಿದೆ. ಈ ಪರಿಪಾಠವನ್ನು ಪ್ರತಿ ವರ್ಷ ಮುಂದುವರೆಸಲಾಗುವುದು ಎಂದು ಜಮೀರ್ ಹೇಳಿದ್ದಾರೆ. ಹಾಗಾಗಿ ಮೈದಾನದ ಬಳಿ ಭದ್ರತೆ ಹೆಚ್ಚಿಸಲಾಗಿದೆ.
Published by:Thara Kemmara
First published: