HOME » NEWS » State » IBM INDIA PRIVATE LIMITED EMPLOYEE USE ABUSING WORDS TO KANNADA LANGUAGE RMD

ಐಬಿಎಂ ನೌಕರನಿಂದ ಕನ್ನಡ ಭಾಷೆಗೆ ಅಶ್ಲೀಲ ಬೈಗುಳ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಕನ್ನಡಡಿಗರು ಈ ವಿಚಾರದ ಸಾಕಷ್ಟು ಆಕ್ರೋಶ ಹೊರಹಾಕಿದ್ದಾರೆ. ದುರಹಂಕಾರ ಮೆರೆಯುತ್ತಿರುವ ಇಂತಹ ನಾಡ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎನ್ನುತ್ತಿದ್ದಾರೆ. 

Rajesh Duggumane | news18-kannada
Updated:September 19, 2019, 10:29 AM IST
ಐಬಿಎಂ ನೌಕರನಿಂದ ಕನ್ನಡ ಭಾಷೆಗೆ ಅಶ್ಲೀಲ ಬೈಗುಳ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
ಕನ್ನಡಕ್ಕೆ ಅಶ್ಲೀಶಲ ಶಬ್ದ ಬಳಕೆ ಮಾಡಿದ ವ್ಯಕ್ತಿ
  • Share this:
ಬೆಂಗಳೂರು (ಸೆ.19): ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎನ್ನುವ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.  ‘ದೇಶದಲ್ಲಿ ಬಹುತೇಕರು ಹಿಂದಿಯನ್ನೇ ಮಾತನಾಡುತ್ತಾರೆ. ಹೀಗಾಗಿ ಹಿಂದಿ ರಾಷ್ಟ್ರೀಯ ಭಾಷೆಯಾದರೆ ಯಾವುದೇ ಅಭ್ಯಂತರವಿಲ್ಲ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಹೀಗೆ ಮಾಡಿದರೆ ಸ್ಥಳೀಯ ಭಾಷೆಗಳು ಮಾನ್ಯತೆ ಕಳೆದುಕೊಳ್ಳುತ್ತವೆ’ ಎಂದು ವಾದಿಸಿದ್ದಾರೆ. ಈ ಚರ್ಚೆಗಳ ನಡುವೆ ಕನ್ನಡಕ್ಕೆ ಅವಮಾನ ಮಾಡುವ ಪ್ರಕರಣಗಳು ಎಗ್ಗಿಲ್ಲದೆ ಸಾಗಿದೆ.

ಕರ್ನಾಟಕದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ಒಂದು ಕಡೆ ಆಂದೋಲನಗಳು ನಡೆಯುತ್ತಿವೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ, ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕು ಎಂದು ಅನೇಕರು ಪ್ರಯತ್ನಿಸುತ್ತಿದ್ದಾರೆ.

ಬೇರೆ ರಾಜ್ಯದಿಂದ ಬಂದ ಅನೇಕರು ಕನ್ನಡ ಕಲಿಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಿಂದಿಯನ್ನು ಹೊಗಳುವ ಭರದಲ್ಲಿ ಕನ್ನಡ ಭಾಷೆಯನ್ನು ತೆಗಳುತ್ತಿದ್ದಾರೆ. ಇದೇ ರೀತಿಯ ಪ್ರಕರಣವೊಂದು ಈಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಒಡಿಶಾ ಮೂಲದ ಸ್ಮೃತಿರಂಜನ್​ ಹೆಸರಿನ ವ್ಯಕ್ತಿ ಬೆಂಗಳೂರಿನ ಐಬಿಎಂ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ, “ನಾನು ಹಿಂದಿ ಮಾತನಾಡುವುದರಲ್ಲಿ ಖುಷಿ ಕಾಣುತ್ತಿದ್ದೇನೆ. ನನ್ನ ಸುತ್ತಲೂ ಇರುವವರಿಗೂ ಅದು ಹಿತಕರವಾಗಿದೆ,” ಎಂದು ಹೇಳುತ್ತಾ ಕನ್ನಡದ ಬಗ್ಗೆ ಅಶ್ಲೀಲ ಶಬ್ದಗಳ ಬಳಕೆ ಮಾಡಿದ್ದಾನೆ.ಕನ್ನಡಿಗರು ಈ ವಿಚಾರದ ಸಾಕಷ್ಟು ಆಕ್ರೋಶ ಹೊರ ಹಾಕಿದ್ದಾರೆ. ದುರಹಂಕಾರ ಮೆರೆಯುತ್ತಿರುವ ಇಂತಹ ನಾಡ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎನ್ನುತ್ತಿದ್ದಾರೆ.

First published: September 19, 2019, 10:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories