ಐಎಎಸ್ ಅಧಿಕಾರಿ ಮಣಿವಣ್ಣನ್ ಎತ್ತಂಗಡಿ; ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ BringBackCaptain ಹ್ಯಾಷ್‌ಟ್ಯಾಗ್

IAS Officer Captain P. Manivannan: ಬಡವರ ಪರ ಕೆಲಸ ಮಾಡುವುದು ನಿಮ್ಮ ಸರ್ಕಾರದ ಅಡಿಯಲ್ಲಿ ಅಪರಾಧವೇ? ಯಾವುದೇ ಕಾರ್ಮಿಕನು ಹಸಿವಿನಿಂದ ಬಳಲಬಾರದು ಅಥವಾ ತನ್ನ ಕೆಲಸವನ್ನು ಕಳೆದುಕೊಳ್ಳಬಾರದೆಂದು ಮಣಿವಣ್ಣನ್‌ರವರು ಕೆಲಸ ಮಾಡಿದ್ದಾರೆ. ಅವರನ್ನು ವಾಪಸ್‌ ಕರೆತನ್ನಿ ಎಂಬ ಸಂದೇಶ ಕೂಡ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ.

MAshok Kumar | news18-kannada
Updated:May 12, 2020, 3:35 PM IST
ಐಎಎಸ್ ಅಧಿಕಾರಿ ಮಣಿವಣ್ಣನ್ ಎತ್ತಂಗಡಿ; ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ BringBackCaptain ಹ್ಯಾಷ್‌ಟ್ಯಾಗ್
ಐಎಎಸ್ ಅಧಿಕಾರಿ ಮಣಿವಣ್ಣನ್ ಮತ್ತು ಸಿಎಂ ಬಿಎಸ್‌ವೈ.
  • Share this:
ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್’ ರವರ ಏಕಾಏಕಿ ವರ್ಗಾವಣೆ ವಿರುದ್ಧ ರಾಜ್ಯಾದ್ಯಂತ ಪ್ರತಿರೋಧ ಭುಗಿಲೆದ್ದಿದೆ. ಕಾರ್ಮಿಕ ಸಂಘಟನೆಗಳು ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಿಗೆ ಟ್ವಿಟ್ಟರ್‌ನಲ್ಲಿ ಮಣಿವಣ್ಣನ್‌ರವರನ್ನು ವಾಪಸ್ ಕರೆತನ್ನಿ #BringBackCaptain ಎಂಬ ಹ್ಯಾಷ್‌‌‌ಟ್ಯಾಗ್‌ ಇದೀಗ ಟ್ರೆಂಡ್‌ ಆಗುತ್ತಿದೆ.

ಮಣಿವಣ್ಣನ್ ಕಾರ್ಮಿಕ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರು. ಲಾಕ್‌ಡೌನ್ ನಡುವೆ ಪ್ರತಿದಿನ 1.30 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. 80 ಸಾವಿರ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸಿದ್ದರು. ವೆಬ್‌ಸೈಟಿನಲ್ಲಿ ಪ್ರತಿದಿನ ಏನು ನಡೀತಿದೆ? ಎಂಬುದನ್ನು ಅಪ್ಡೇಟ್ ಮಾಡುತ್ತಿದ್ದರು. ಅಲ್ಲದೆ, ಕೊರೊನಾ ವಾರಿಯರ್ಸ್ ಟೀಮ್ ಮಾಡಿ ಕೊರೊನಾ ತಡೆಗಟ್ಟೋ ಕೆಲಸಕ್ಕೆ ಉಚಿತವಾಗಿ ಸೇವೆ ಪಡೆಯುತ್ತಿದ್ದರು.

ಆದರೆ, ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಪರವಾಗಿ ಇಷ್ಟು ಉತ್ತಮ ಕೆಲಸ ಮಾಡಿದರೂ ಸಹ ಕೈಗಾರಿಕೋದ್ಯಮಿಗಳ ಲಾಬಿಗೆ ಮಣಿದಿದ್ದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪಿ. ಮಣಿವಣ್ಣನ್ ಅವರನ್ನು ನಿನ್ನೆ ರಾತ್ರಿ ಏಕಾಏಕಿ ವರ್ಗಾವಣೆ ಮಾಡಿ ಆದೇಶಿಸಿದ್ದರು. ಅಲ್ಲದೆ, ಆ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್‌ ರಾವ್ ಅವರನ್ನು ತಂದು ಕೂರಿಸಿದ್ದರು.

ರಾಜ್ಯ ಸರ್ಕಾರದ ಈ ನಡೆ ಸಾಮಾನ್ಯವಾಗಿ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆ ನಡುವೆ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅನೇಕರು ಸಿಎಂ ಯಡಿಯೂರಪ್ಪ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಟೀಕಿಸುತ್ತಿದ್ದಾರೆ."ಪ್ರೀತಿಯ ಬಿ.ಎಸ್‌ ಯಡಿಯೂರಪ್ಪನವರೆ, ಶ್ರೀಮಂತ ಕೈಗಾರಿಕೋದ್ಯಮಿಗಳ ಒತ್ತಡಗಳಿಗೆ ನೀವು ಏಕೆ ಬಲಿಯಾಗುತ್ತೀರಿ? ರಾಜ್ಯದ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನೇಕೆ ಶಿಕ್ಷಿಸುತ್ತೀರಿ?

ಬಡವರ ಪರ ಕೆಲಸ ಮಾಡುವುದು ನಿಮ್ಮ ಸರ್ಕಾರದ ಅಡಿಯಲ್ಲಿ ಅಪರಾಧವೇ? ಯಾವುದೇ ಕಾರ್ಮಿಕನು ಹಸಿವಿನಿಂದ ಬಳಲಬಾರದು ಅಥವಾ ತನ್ನ ಕೆಲಸವನ್ನು ಕಳೆದುಕೊಳ್ಳಬಾರದೆಂದು ಮಣಿವಣ್ಣನ್‌ರವರು ಕೆಲಸ ಮಾಡಿದ್ದಾರೆ. ಅವರನ್ನು ವಾಪಸ್‌ ಕರೆತನ್ನಿ" ಎಂಬ ಸಂದೇಶ ಕೂಡ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ.ಇದೇ ಸಂದರ್ಭದಲ್ಲಿ ವರ್ಗಾವಣೆಯ ವಿರುದ್ಧ ಹೈಕೋರ್ಟ್‌‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹಲವರು ಚರ್ಚೆ ನಡೆಸುತ್ತಿದ್ದಾರೆ.

ಮಣಿವಣ್ಣನ್‌ರವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆನ್‌ಲೈನ್‌ ಪಿಟಿಷನ್‌ ಆರಂಭಿಸಿದ್ದು ಈಗಾಗಲೇ 2000 ಕ್ಕೂ ಹೆಚ್ಚು ಜನರು ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಣಿವಣ್ಣನ್‌ ಅವರನ್ನು ಉಳಿಸಿಕೊಳ್ಳಲು ಸಚಿವ ಹೆಬ್ಬಾರ್‌ ವಿಫಲ ಯತ್ನ; ಉದ್ಯಮಿಗಳು ಲಾಬಿಗೆ ಮಣಿದರಾ ಸಿಎಂ?
First published: May 12, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading