ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಐಎಎಸ್​​ ಅಧಿಕಾರಿ ಬಿ ಶರತ್​ ಸಂಕಷ್ಟದಲ್ಲಿ

ಐಎಎಸ್​​ ಅಧಿಕಾರಿ ಬಿ. ಶರತ್​ ಅವರು ಸಿಎಟಿ ಮುಂದೆ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ವಾದ ಆಲಿಸಿದ ಬಳಿಕ ಪೀಠ ವಿಚಾರಣೆಯನ್ನು ಡಿ. 22ಕ್ಕೆ ಮುಂದೂಡಿದೆ

ಐಎಎಸ್​​ ಅಧಿಕಾರಿ ಬಿ ಶರತ್​

ಐಎಎಸ್​​ ಅಧಿಕಾರಿ ಬಿ ಶರತ್​

  • Share this:
ಮೈಸೂರು(ಡಿಸೆಂಬರ್​. 18): ತಿಂಗಳೊಳಗಾಗಿ ತಮ್ಮನ್ನು ವರ್ಗಾಮಾಡಿದ ಆದೇಶ ಪ್ರಶ್ನಿಸಿ ಐಎಎಸ್​ ಅಧಿಕಾರಿ ಬಿ. ಶರತ್ ಸಿಎಟಿ ಮೊರೆ ಹೋಗಿದ್ದ ಶರತ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿ ಶರತ್​ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿದ ಕ್ರಮವನ್ನು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಈ ಕುರಿತು ಸರ್ಕಾರದ ಪರ ಅಡ್ವೊಕೇಟ್​ ಜನರಲ್​ ಪ್ರಭುಲಿಂಗ ನಾವದಗಿ ಅವರು ಐಎಎಸ್​ ಅಧಿಕಾರಿ ಬಿ. ಶರತ್​ ವಿರುದ್ಧ 10 ಪುಟಗಳ ಅಫಿಡವಿಟ್​ ಸಲ್ಲಿಸಿದೆ. ಈ ಅಫಿಡವಿಟ್​ನಲ್ಲಿ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ತಮ್ಮಗೆ ಸ್ಥಳ ನಿಯೋಜಿಸಲಾಗಿಲ್ಲ ಎಂಬ ಅವರ ಆರೋಪಕ್ಕೆ ಉತ್ತರಿಸಿರುವ ರಾಜ್ಯ ಸರ್ಕಾರ ಅಧಿಕಾರಿಯನ್ನು ರೇಷ್ಮೆ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಆದರೆ, ಮೂರು ತಿಂಗಳಿನಿಂದಲೂ ಅವರು ಅಧಿಕಾರ ಸ್ವೀಕರಿಸಿಲ್ಲ ಎಂದು ಆರೋಪ ಮಾಡಿದೆ.

ಅಷ್ಟೇ ಅಲ್ಲದೇ ಭಾರತೀಯ ಚುನಾವಣಾ ಆಯೋಗ ಬಿ. ಶರತ್​ ಅವರನ್ನು ಬಿಹಾರ ಚುನಾವಣೆ ವೀಕ್ಷಕರಾಗಿ ನಿಯೋಜಿಸಿತ್ತು. ಆ ಕರ್ತವ್ಯಕ್ಕೂ ಅವರು ಹಾಜರಾಗಿಲ್ಲ. ಸಾರ್ವಜನಿಕ ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಶರತ್ ಅವರು​ ಅನಾರೋಗ್ಯ ಎಂದು ಗೈರಾಗಿದ್ದು, ಇದಕ್ಕೆ ಸರಿಯಾದ ದಾಖಲೆಗಳನ್ನು ನೀಡದೇ ರಜೆ ಮೇಲೆ ಇರುತ್ತಾರೆ. ನಿಯೋಜಿತ ಕರ್ತವ್ಯಕ್ಕೆ ಹಾಜರಾಗಲು ಅನಾರೋಗ್ಯದ ವಿವಿಧ ನೆಪ ಹೇಳುತ್ತಾರೆ. ಇದು ಕಾನೂನಿಗೆ ವಿರುದ್ಧವಾದ ನಡೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ನವೆಂಬರ್​ 25ರಂದು ಅಧಿಕಾರಿ ಬಿ ಶರತ್​ಗೆ ಶೋಕಾಸ್​ ನೋಟಿಸ್​ ಸಹ ನೀಡಿದೆ.

ಇದನ್ನೂ ಓದಿ : ಇನ್ನು ಮುಂದೆ ಬಿಡಿಎ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಬದಲಾಗಿ `ಕಿರು ಅರಣ್ಯ’

ಈ ನೋಟಿಸ್​ಗೆ ಏಳು ದಿನದ ಒಳಗಎ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಈ ರೀತಿ ವರ್ತನೆ ತೋರುವವರು ಮೈಸೂರಿನಂತಹ ಸೂಕ್ಷ್ಮ ಪ್ರದೇಶಕ್ಕೆ ಜಿಲ್ಲಾಧಿಕಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಈ ಎಲ್ಲಾ ಕಾರಣದಿಂದ ಬಿ. ಶರತ್​ ಅವರು ಸಿಎಟಿ ಮುಂದೆ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ವಾದ ಆಲಿಸಿದ ಬಳಿಕ ಪೀಠ ವಿಚಾರಣೆಯನ್ನು ಡಿ. 22ಕ್ಕೆ ಮುಂದೂಡಿದೆ
Published by:G Hareeshkumar
First published: