ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಲೋಕಸ‌ಭೆ ಚುನಾವಣೆಯಲ್ಲೂ ಕಾಂಗ್ರೆಸ್ ನೊಂದಿಗೆ ಮೈತ್ರಿ ಮುಂದುವರಿಯುತ್ತದೆ.  ನಮಗೆ ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಎನ್ನುವ ಮೂಲಕ ದೇವೇಗೌಡರು ಮತ್ತೆ ಸ್ಪರ್ಧೆ ಕುತೂಹಲ ಕಾಯ್ದಿಟ್ಟುಕೊಂಡರು. 

HR Ramesh | news18
Updated:January 11, 2019, 11:52 AM IST
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ದೇವೇಗೌಡ
HR Ramesh | news18
Updated: January 11, 2019, 11:52 AM IST
ಹಾಸನ: ಇತ್ತೀಚೆಗೆ ಕೇಂದ್ರದ ಜನಪ್ರಿಯತೆ ಕುಗ್ಗುತ್ತಿದೆ, ಈ ಕಾರಣಕ್ಕೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ ಮೀಸಲು ಅಸ್ತ್ರ ಬಳಸಿದೆ. ಚುನಾವಣೆಯಲ್ಲಿ ಗೆಲ್ಲುವ ಭಾವನೆಯಿಂದ ಹೀಗೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮರು ಮಾತನಾಡದೆ ಎಲ್ಲಾ ಪಕ್ಷಗಳವರೂ ಬೆಂಬಲ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ‌ಕೊಟ್ಟಿದ್ದೇವೆ. ಈ‌ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಯಾವ ‌ಪ್ರಧಾನಿ ಅಥವಾ ಸಿಎಂ ಬಗೆಹರಿಸಲು ಆಗಲ್ಲ ಎಂದು ಅವರು ಹೇಳಿದರು.

ಲೋಕಸ‌ಭೆ ಚುನಾವಣೆಯಲ್ಲೂ ಕಾಂಗ್ರೆಸ್ ನೊಂದಿಗೆ ಮೈತ್ರಿ ಮುಂದುವರಿಯುತ್ತದೆ.  ನಮಗೆ ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ, ವೇಣುಗೋಪಾಲ್, ಸಿದ್ದರಾಮಯ್ಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಎನ್ನುವ ಮೂಲಕ ದೇವೇಗೌಡರು ಮತ್ತೆ ಸ್ಪರ್ಧೆ ಕುತೂಹಲ ಕಾಯ್ದಿಟ್ಟುಕೊಂಡರು.

ಇದನ್ನು ಓದಿ:ಕಾಂಗ್ರೆಸ್​ಮುಕ್ತ ಭಾರತದ ಕನಸು ಬಿಟ್ಟು, ಸಮಸ್ಯೆಮುಕ್ತ ಭಾರತದತ್ತ ಬಿಜೆಪಿ ಮನಸ್ಸು ಮಾಡಲಿ; ಎಚ್.ಡಿ.ದೇವೇಗೌಡ

ಸಿಬಿಐ ಆಂತರಿಕ ಕಿತ್ತಾಟ ಹಾಗೂ ನಿರ್ದೇಶಕರ ವರ್ಗಾವಣೆ ಬಗ್ಗೆಯೂ ಮಾತನಾಡಿದ ದೇವೇಗೌಡರು, ಇಬ್ಬರು ಹಿರಿಯ ಅಧಿಕಾರಿಗಳು ಪರಸ್ಪರ ಆಪಾದನೆ ಮಾಡಿಕೊಂಡರು.
ನಂತರ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಇದು ಕೇವಲ ತಾಂತ್ರಿಕ ವಿಚಾರ ಅಷ್ಟೇ. ಸಿಬಿಐ ಸೇರಿ ಅನೇಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಹೊಸದಲ್ಲ. ಇತ್ತೀಚಿನ‌ ದಿನಗಳಲ್ಲಿ ಇದು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸ್ಥಾನಕ್ಕೆ ಸಚಿವ ಎಚ್​.ಡಿ.ರೇವಣ್ಣರ ವಿಶೇಷಾಧಿಕಾರಿ ತಿಪ್ಪೇಸ್ವಾಮಿ ಹೆಸರು ಅಂತಿಮಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡರು, ನನಗೆ ಈ ವಿಚಾರ ಗೊತ್ತಿಲ್ಲ. ಬೆಳಿಗ್ಗೆ ಪತ್ರಿಕೆಗಳಲ್ಲಿ ನೋಡಿದೆ, ಮೂರು ಜನರ ಹೆಸರು ಇದೆ ಅಂತ ಹೇಳಿ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Loading...

 

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...