ಬೆಂಗಳೂರು: ಉತ್ತರ ಕರ್ನಾಟಕದ ಜನಜೀವನ ಮತ್ತೆ ಬಾರೀ ಮಳೆಗೆ ಅಸ್ತವ್ಯಸ್ತಗೊಂಡಿದೆ. ಈ ಕುರಿತು ನರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಎಂದು ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ವೀಕ್ಷಣೆ ಹಾಗೂ ಬೆಳಗಾವಿ ಜಿಲ್ಲೆಯ ಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ಮುಗಿಸಿ ಬೆಂಗಳೂರಿಗೆ ಬಂದು ಇಳಿದಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಇದ್ದರೆ, ಈ ಕಡೆ ನಾಯಕತ್ವ ಬದಲಾವಣೆಯ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿತ್ತು. ಬೆಳಗಾವಿಯಿಂದ ನೇರ ಕಾವೇರಿ ನಿವಾಸಕ್ಕೆ ಬಂದ ಬಿಎಸ್ವೈ ಅವರಿಗೆ ಮಾಧ್ಯಮದವರು ಮತ್ತೆ ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಎತ್ತಿದರು.
ಇದುವರೆಗೂ ಬಿಜೆಪಿ ಹೈಕಮಾಂಡ್ನಿಂದ ನನ್ನ ಬದಲಾವಣೆ ಕುರಿತು ಯಾವುದೇ ಸಂದೇಶ ಬಂದಿಲ್ಲ. ಸೋಮವಾರ (ಜುಲೈ 26)ದಂದು ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತೇನೆ. ನಾನು ಯಾವಾಗ ರಾಜೀನಾಮೆ ಕೊಡಬೇಕು ಅಂತ ಇರುತ್ತೋ ಆಗ ಕೊಡುತ್ತೇನೆ. ಇದುವರೆಗೂ ಹೈಕಮಾಂಡ್ ಯಾವುದೇ ಸಂದೇಶ ನೀಡಿಲ್ಲ ಎಂದು ಊಹಾಪೋಹಗಳಿಗೆ ಬಿಎಸ್ವೈ ತೆರೆ ಎಳೆದರು.
ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್ ಬಯಸಿದರೆ ಭಾನುವಾರ ರಾತ್ರಿಯೊಳಗೆ ಸಂದೇಶ ಬರಲಿದೆ ಅನ್ನೋ ವಿಶ್ವಾಸ ಇದೆ ಎಂದು ಬಿಎಸ್ವೈ ಸೋಮವಾರ ನಿಗಧಿಯಾಗಿರುವ ಕಾರ್ಯಕ್ರಮ ಮೊದಲು ಮುಗಿಯಲಿ ಆನಂತರ ಈ ವಿಚಾರವಾಗಿ ಮಾತುಕತೆ ಮಾಡೋಣ, ಯಾವುದೇ ಗೊಂದಲ ಇಲ್ಲ ಎಂದು ಉತ್ತರಿಸಿದರು.
ನಡ್ಡಾ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅವರ ಜೊತೆಗೆ ಅಮಿತ್ ಶಾ ಇದ್ದಾರೆ, ನರೇಂದ್ರ ಮೋದಿಯವರು ಇದ್ದಾರೆ. ನಾಯಕತ್ವ ಬದಲಾವಣೆ ಮಾಡಬೇಕೋ ಬೇಡವೋ ಎಂದು ಅವರು ಹೇಳಲಿದ್ದಾರೆ. ಈ ಕುರಿತು ಯಾವುದೇ ಸಂದೇಶ ಬರದಿದ್ದರೆ ನಾಳೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು ಬಿಎಸ್ವೈ.
ಈ ಸಂದರ್ಭದಲ್ಲಿ ನಾನು ನಮ್ಮ ರಾಜ್ಯದ ಯಾವುದೇ ಸ್ವಾಮೀಜಿಗಳ ಬಗ್ಗೆಯಾಗಲಿ, ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಬಿಜೆಪಿಯಲ್ಲಿ ಇನ್ನೂ ಹತ್ತು, ಹದಿನೈದು ವರ್ ಕೆಲಸ ಮಾಡುತ್ತೇನೆ. ಹೈಕಮಾಂಡ್ ಹೇಳುವುದನ್ನು ಪಾಲಿಸುತ್ತೇನೆ. ಹೈಕಮಾಂಡ್ ಸಂದೇಶ ಇನ್ನೂ ಬಂದಿಲ್ಲ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: Corona: ಕೊರೋನಾ ಅಂಕಿ-ಅಂಶಗಳು; ಕೆಟ್ಟ ದಿನಗಳು ಹತ್ತಿರದಲ್ಲೇ ಇವೆ ಎಂದು ಹೇಳುತ್ತಿವೆಯೇ?
ನಾನು ಕೊನೆಯ ನಿಮಿಷದವರೆಗೂ ಈ ರಾಜ್ಯದ ಜನರ ಸೇವೆ ಮಾಡಬೇಕು ಎಂದು ಕೊಂಡಿರುವೆ. ಆದರೆ ಹೈಕಮಾಂಡ್ ಯಾವಾಗ ರಾಜೀನಾಮೆ ಕೊಡು ಅನ್ನುತ್ತೋ ಆಗ ರಾಜೀನಾಮೆ ಕೊಡುವೆ, ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಆದರೆ ಪರೋಕ್ಷವಾಗಿ ಇನ್ನೂ ಸಿಎಂ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಒಲವು ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ ಹಾಗೂ ಗುಂಪು ಗೂಡುವುದನ್ನು ನಿಯಂತ್ರಿಸಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ