ಡಿಕೆಶಿಯಿಂದಲೇ ಕಾಂಗ್ರೆಸ್ ಪಕ್ಷ ಬಿಡ್ತಾರಂತೆ ರಮೇಶ್​ ಜಾರಕಿಹೊಳಿ!; ಮೈತ್ರಿ ನಾಯಕರಿಗೆ ಮತ್ತೊಂದು ತಲೆನೋವು

ಜಾರಕಿಹೊಳಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿರುವುದು ಒಂದೆಡೆಯಾದರೆ, ಡಿಕೆಶಿ ಅವರಿಂದಾಗಿಯೇ ನಾನು ಪಕ್ಷ ಬಿಡಲಿದ್ದೇನೆ ಎಂದು ಹೇಳಿರುವುದರಿಂದ ಮೈತ್ರಿ ನಾಯಕರಿಗೆ ಡಬಲ್​ ಟೆನ್ಷನ್​ ತಂದಿಟ್ಟಿದೆ. ಹೀಗಾಗಿ, ರಮೇಶ್​ ಜಾರಕಿಹೊಳಿ ಆಪರೇಷನ್​ ಕಮಲಕ್ಕೆ ದಾಳವಾಗಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

sushma chakre | news18
Updated:December 20, 2018, 9:13 AM IST
ಡಿಕೆಶಿಯಿಂದಲೇ ಕಾಂಗ್ರೆಸ್ ಪಕ್ಷ ಬಿಡ್ತಾರಂತೆ ರಮೇಶ್​ ಜಾರಕಿಹೊಳಿ!; ಮೈತ್ರಿ ನಾಯಕರಿಗೆ ಮತ್ತೊಂದು ತಲೆನೋವು
ರಮೇಶ್​-ಹೆಚ್ಡಿಕೆ-ಸತೀಶ್​
 • News18
 • Last Updated: December 20, 2018, 9:13 AM IST
 • Share this:
ಚಿದಾನಂದ ಪಟೇಲ್

ಬೆಳಗಾವಿ (ಡಿ. 20): ಬಿಜೆಪಿ ನಾಯಕರ ಜೊತೆಗೆ ನಿನ್ನೆ ಔತಣಕೂಟದಲ್ಲಿ ಕಾಣಿಸಿಕೊಂಡಿರುವ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿ ಮೈತ್ರಿ ಸರ್ಕಾರದ ನಾಯಕರಿಗೆ ನುಂಗಲಾರದ ತುತ್ತಾಗಿದ್ದಾರೆ. ಇದರ ಜೊತೆಗೆ ಕೈ ನಾಯಕರಿಗೆ ಜಾರಕಿಹೊಳಿ ಇನ್ನೊಂದು ಶಾಕ್​ ನೀಡಿದ್ದಾರೆ.

ಕಾಂಗ್ರೆಸ್​ನ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ರಮೇಶ್​ ಜಾರಕಿಹೊಳಿ ಖುದ್ದು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ 'ಡಿ.ಕೆ. ಶಿವಕುಮಾರ್​ ಅವರಿಂದಾಗಿಯೇ ನಾನು ಪಕ್ಷ ಬಿಡಲಿದ್ದೇನೆ' ಎಂದು ನೇರವಾಗಿ ಹೇಳಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಇದರಿಂದಾಗಿ ಸಿಎಂ ಹೆಚ್ಡಿಕೆ, ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ಅವರಿಗೆ ತಲೆಬಿಸಿ ಶುರುವಾಗಿದೆ. ಜಾರಕಿಹೊಳಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿರುವುದು ಒಂದೆಡೆಯಾದರೆ, ಡಿಕೆಶಿ ಅವರಿಂದಾಗಿಯೇ ನಾನು ಪಕ್ಷ ಬಿಡಲಿದ್ದೇನೆ ಎಂದು ಹೇಳಿರುವುದರಿಂದ ಮೈತ್ರಿ ನಾಯಕರಿಗೆ ಡಬಲ್​ ಟೆನ್ಷನ್​ ತಂದಿಟ್ಟಿದೆ. ಹೀಗಾಗಿ, ರಮೇಶ್​ ಜಾರಕಿಹೊಳಿ ಆಪರೇಷನ್​ ಕಮಲಕ್ಕೆ ದಾಳವಾಗಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ; ಸಿದ್ದರಾಮಯ್ಯ ಬಳಿ ಅಸಮಾಧಾನ ಹೊರಹಾಕಿದ ರಮೇಶ್​ ಜಾರಕಿಹೊಳಿ

ಒಂದೆಡೆ ಸಂಪುಟ ವಿಸ್ತರಣೆಯ ತಲೆಬಿಸಿ, ಇನ್ನೊಂದೆಡೆ ರಮೇಶ್​ ಜಾರಕಿಹೊಳಿ ನೀಡಿರುವ ಶಾಕ್​ನಿಂದ ಮೈತ್ರಿ ಸರ್ಕಾರದ ನಾಯಕರು ಕಂಗೆಟ್ಟಿದ್ದಾರೆ. ಇನ್ನೇನು ಎರಡೇ ದಿನದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ರಮೇಶ್​ ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಡಬೇಕೇ ಅಥವಾ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೇ ಎಂಬ ಗೊಂದಲಗಳು ಕಾಂಗ್ರೆಸ್​ ನಾಯಕರನ್ನು ಕಾಡುತ್ತಿವೆ.

ರಮೇಶ್​ ಜಾರಕಿಹೊಳಿ ಅವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಮತ್ತು ಕೈಬಿಡುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಯಲ್ಲಿದೆ ಎನ್ನಲಾಗಿದೆ. ರಮೇಶ್​ ಜಾರಕಿಹೊಳಿ ಬಗ್ಗೆ ರಾಹುಲ್​ ಗಾಂಧಿ ಅವರ ಜೊತೆಗೆ ಚರ್ಚೆ ಮಾಡಲು ರಾಜ್ಯ ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ. ಒಂದುವೇಳೆ ರಮೇಶ್​ ಜಾರಕಿಹೊಳಿ ಅವರನ್ನು ಕೈಬಿಡಲು ರಾಹುಲ್ ಗಾಂಧಿ ಸೂಚಿಸಿದರೆ ಅವರ ಸಹೋದರ ಸತೀಶ್​ ಜಾರಕಿಹೊಳಿಗೆ ಈ ಬಾರಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸತೀಶ್​ ಜಾರಕಿಹೊಳಿ ಅವರ ಪರವಾಗಿ ನಿನ್ನೆ ಬ್ಯಾಟಿಂಗ್​ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಚಿವ ರಮೇಶ್​ ಜಾರಕಿಹೊಳಿ, ರಾಜೀನಾಮೆ ಸಾಧ್ಯತೆ?ಖಾತೆ ಬದಲಾವಣೆಯ ನಿರ್ಧಾರ?:

ಡಿ. 22ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಈಗಾಗಲೇ ಸಚಿವ ಸ್ಥಾನಕ್ಕೆ ಲಾಬಿಗಳು ಶುರುವಾಗಿವೆ. ಒಂದುವೇಳೆ ರಮೇಶ್​ ಜಾರಕಿಹೊಳಿಯವರನ್ನು ಕೈಬಿಟ್ಟು ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿದರೂ ಮೈತ್ರಿ ಸರ್ಕಾರಕ್ಕೆ ಕಂಠಕವಾಗುವ ಸಾಧ್ಯತೆಯಿದೆ. ರಮೇಶ್​ ಜಾರಕಿಹೊಳಿ ಬಿಜೆಪಿ ಜೊತೆ ಕೈಜೋಡಿಸಿ ಆಪರೇಷನ್​ ಕಮಲ ನಡೆಸಲು ಮುಂದಾದರೆ ಕಾಂಗ್ರೆಸ್​ನ ಏಳೆಂಟು ಅತೃಪ್ತ ಶಾಸಕರು ಅವರ ಜೊತೆ ಹೋಗುವ ಭಯ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್ಡಿಕೆಯನ್ನು ಕಾಡುತ್ತಿದೆ. ಹೀಗಾಗಿ, ರಮೇಶ್​ ಜಾರಕಿಹೊಳಿ ಮನವೊಲಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಔತಣಕೂಟದಲ್ಲಿ ಕಾಣಿಸಿಕೊಂಡ 'ಕೈ' ನಾಯಕ'; ಮತ್ತೆ ಶುರುವಾಗುತ್ತಾ ಆಪರೇಷನ್​ ಕಮಲ?

ಬಿಜೆಪಿ ಜೊತೆಗೆ ಕೈಜೋಡಿಸದಂತೆ ಮಾಡಲು ರಮೇಶ್​ ಜಾರಕಿಹೊಳಿಗೆ ಮುಂಬಡ್ತಿ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂಬ ಸುದ್ದಿಗಳೂ ಕೇಳಿಬಂದಿವೆ. ಪೌರಾಡಳಿತ ಖಾತೆಯ ಬದಲು ಪ್ರಭಾವಿ ಖಾತೆ ನೀಡುವ ಮೂಲಕ ರಮೇಶ್​ ಜಾರಕಿಹೊಳಿ ಬಿಜೆಪಿ ಸೇರದಂತೆ ಮಾಡಲು ಚಿಂತಿಸಲಾಗಿದೆ. ಅವರಿಗೆ ನಗರಾಭಿವೃದ್ಧಿ ಖಾತೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ.  ರಮೇಶ್​ ಜಾರಕಿಹೊಳಿ ಖಾತೆ ಬದಲಾವಣೆ ಬಗ್ಗೆ ಕೂಡ ರಾಹುಲ್ ಗಾಂಧಿ ಜೊತೆಗೆ ಪ್ರಸ್ತಾಪಿಸಲು ರಾಜ್ಯ ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಶುರುವಾಯ್ತು ಲಾಬಿ:

ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಶುರುವಾಗಿದ್ದು, ನ್ಯೂಸ್ 18 ಕನ್ನಡಕ್ಕೆ ಈ ಬಗ್ಗೆ ಕೆಲವು ಮಹತ್ವದ ಮಾಹಿತಿ ಸಿಕ್ಕಿದೆ. ಸಚಿವಾಕಾಂಕ್ಷಿಗಳ ಲಾಬಿ ಕುರಿತು ಮಾಹಿತಿ ಸಿಕ್ಕಿದ್ದು, ಮಾಜಿ ಸಚಿವ ರಾಮಲಿಂಗಾರೆಡ್ಡಿ ಭಾರೀ ಲಾಬಿ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.  ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್ ಮೂಲಕ‌ ರಾಮಲಿಂಗಾರೆಡ್ಡಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಉಳಿದಂತೆ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಮೂಲಕ ಹೆಚ್.ಕೆ‌‌ ಪಾಟೀಲ್ ಲಾಬಿ ನಡೆಸಿದ್ದಾರೆ. ಹೈದರಾಬಾದ್​ ಕರ್ನಾಟಕ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮೂಲಕ ರಹೀಂಖಾನ್ ತಮ್ಮ ಬೇಡಿಕೆಯಿಟ್ಟಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ, ದೆಹಲಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಿಎಂ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಮೂಲಕ ಇ. ತುಕಾರಾಂ, ಡಿಸಿಎಂ ಪರಮೇಶ್ವರ್​ ಮೂಲಕ ಎಸ್.ಟಿ. ಸೋಮಶೇಖರ್, ರಾಜಸ್ಥಾನ‌ ಡಿಸಿಎಂ ಸಚಿನ್ ಪೈಲಟ್, ಗುಲಾಂ ನಬಿ ಆಜಾದ್ ಮೂಲಕಎಂ. ಕೃಷ್ಣಪ್ಪ, ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್​ ಮೂಲಕ ಎಂ.ಬಿ‌. ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಸಿ.ಎಸ್​. ಶಿವಳ್ಳಿ, ಆರ್​. ಧರ್ಮಸೇನಾ ಹಾಗೂ ಬಿ.ಸಿ‌ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ತಮ್ಮ ತಂದೆ ಕೆ.ಹೆಚ್.ಮುನಿಯಪ್ಪರಿಂದಲೇ  ರೂಪಾ ಶಶಿಧರ್ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

First published:December 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,128

   
 • Total Confirmed

  1,677,664

  +74,012
 • Cured/Discharged

  372,939

   
 • Total DEATHS

  101,597

  +5,905
Data Source: Johns Hopkins University, U.S. (www.jhu.edu)
Hospitals & Testing centres