ಜೀವ ಕೊಟ್ಟಾದರೂ ರೈತರನ್ನು ಕಾಪಾಡುತ್ತೇನೆ: ಸಿಎಂ ಭರವಸೆ

news18
Updated:July 12, 2018, 7:39 PM IST
ಜೀವ ಕೊಟ್ಟಾದರೂ ರೈತರನ್ನು ಕಾಪಾಡುತ್ತೇನೆ: ಸಿಎಂ ಭರವಸೆ
news18
Updated: July 12, 2018, 7:39 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 12): ಸಹಕಾರಿ ಸಂಘಗಳಲ್ಲಿರುವ ರೈತರ 1 ಲಕ್ಷ ರೂ.ವರೆಗಿನ ಚಾಲ್ತಿಸಾಲ ಮನ್ನಾ ಮಾಡುವುದಾಗಿ ಸಿಎಂ ಸದನದಲ್ಲಿ ಇಂದು ಘೋಷಿಸುವ ಮೂಲಕ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 10,700 ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಂತಾಗಿದೆ.

ಅನ್ನ ಭಾಗ್ಯ ಯೋಜನೆಯಲ್ಲಿ ನೀಡಲಾಗುವ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಲಾಗಿತ್ತು. ಆದರೆ, ಈ ಬಗ್ಗೆ ಮರುಪರಿಶೀಲಿಸಿರುವ ಸರ್ಕಾರ 7 ಕೆಜಿ ಅಕ್ಕಿಯನ್ನೇ ಮುಂದುವರಿಸುವುದಾಗಿ ಸಿಎಂ ಸದನದಲ್ಲಿ ತಿಳಿಸಿದ್ದಾರೆ.

ಬಿಜೆಪಿಯವರು ರೈತರಿಗಾಗಿ ರಕ್ತ ಬೇಕಾದರೂ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನಾವು ಜೀವ ಕೊಟ್ಟಾದರೂ ರೈತರ ಪ್ರಾಣವನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...