ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇನೆ; ನೂತನ ಶಾಸಕರಿಗೆ ಸಿಎಂ ಬಿಎಸ್​ವೈ ಭರವಸೆ

ಉಪಚುನಾವಣೆಯಲ್ಲಿ ಗೆಲ್ಲುವ ಎಲ್ಲ ಅನರ್ಹರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಎಸ್​ವೈ ಹೇಳಿದ್ದರು. ಅಂತೆಯೇ ಈಗ ಗೆದ್ದ 11 ಅನರ್ಹರಿಗೆ ಸಚಿವ ಸ್ಥಾನ ನೀಡಬೇಕಾದ ದೊಡ್ಡ ಜವಾಬ್ದಾರಿ ಸಿಎಂಗೆ ಇದೆ.

news18-kannada
Updated:December 11, 2019, 10:43 AM IST
ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇನೆ; ನೂತನ ಶಾಸಕರಿಗೆ ಸಿಎಂ ಬಿಎಸ್​ವೈ ಭರವಸೆ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು (ಡಿ.11): ರಾಜ್ಯ ಉಪಚುನಾವಣೆಯಲ್ಲಿ ಗೆದ್ದ 12 ಶಾಸಕರ ಜೊತೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬಂದಿದೆ ಎನ್ನಲಾಗಿದೆ.

ಉಪಚುನಾವಣೆಯಲ್ಲಿ ಗೆಲ್ಲುವ ಎಲ್ಲ ಅನರ್ಹರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಎಸ್​ವೈ ಹೇಳಿದ್ದರು. ಅಂತೆಯೇ ಈಗ ಗೆದ್ದ 11 ಅನರ್ಹರಿಗೆ ಸಚಿವ ಸ್ಥಾನ ನೀಡಬೇಕಾದ ದೊಡ್ಡ ಜವಾಬ್ದಾರಿ ಸಿಎಂಗೆ ಇದೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಉಪಚುನಾವಣೆಯಲ್ಲಿ ಗೆದ್ದಿರುವ ಬೆಳಗಾವಿ ಭಾಗದ ರಮೇಶ್​ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರಿಗೆ ಪ್ರಮುಖ ಸ್ಥಾನ ನೀಡಲೇಬೇಕಿದೆ. ಇನ್ನು, ಉಳಿದ ಶಾಸಕರೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇವರೆಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿಎಸ್​ವೈ ನೀಡಿದ್ದಾರೆ.

“ಸದ್ಯ ಜಾರ್ಖಂಡ್ ನಲ್ಲಿ ಚುನಾವಣೆ ನಡೆಯುತ್ತಿದೆ. ಹೈಕಮಾಂಡ್ ನಾಯಕರು ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಮುಂದಿನ ವಾರ ದೆಹಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ. ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ,” ಎಂದು ಬಿಎಸ್​ವೈ ನೂತನ ಶಾಸಕರಿಗೆ ಹೇಳಿದ್ದಾರೆ.

17 ಜನರೂ ಒಟ್ಡಿಗಿದ್ದೇವೆ:

ಸಿಎಂ ಜೊತೆ ಮಾತುಕತೆ ಮುಗಿಸಿ ಹೊರ ಬಂದ ನಂತರ ಎಸ್.ಟಿ. ಸೋಮಶೇಖರ್ ಮಾತನಾಡಿದ್ದಾರೆ. “ನಾವೆಲ್ಲರೂ ಒಟ್ಟಿಗೆ ಸಿಎಂ ಭೇಟಿ ಮಾಡಿದ್ದೇವೆ. ಸಿಎಂಗೆ ಅಭಿನಂದನೆ ಹೇಳಿದ್ದೇವೆ. ಮುನಿರತ್ನ ವಿಚಾರ ಬಗೆಹರಿಸಲು ಹೇಳಿದ್ದೇವೆ. ನಾವು ಶೀಘ್ರವೇ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುತ್ತೇವೆ. ಎಲ್ಲ 17 ಜನರೂ ಒಟ್ಡಿಗಿದ್ದೇವೆ. ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾವ್ಯಾರೂ ಖಾತೆ, ಸಚಿವ ಸ್ಥಾನ ಕೇಳಿಲ್ಲ. ಸಿಎಂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ,” ಎಂದರು.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ