ಬಿಜೆಪಿಯಿಂದ ಪಕ್ಷ ಸೇರಲು ಆಹ್ವಾನ ಬಂದಿದ್ದು, ಒಂದು ವಾರದಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸುತ್ತೇನೆ ; ಮಾಜಿ ಶಾಸಕ ಸಿ ಎಚ್.​ ವಿಜಯಶಂಕರ್​

ಕಾಂಗ್ರೆಸ್ ಸೇರಿದ ತೀರ್ಮಾನ ಲೆಕ್ಕವೂ ಹೀಗೆ ಫಲ ಕೊಡಲಿಲ್ಲ. ರಾಜಕಾರಣಿ ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯ ಹೇಳಿ. ಹೀಗಾಗಿ ಬದಲಾವಣೆ ಬಯಸಿ ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿದ್ದೇನೆ 

G Hareeshkumar | news18-kannada
Updated:October 26, 2019, 2:40 PM IST
ಬಿಜೆಪಿಯಿಂದ ಪಕ್ಷ ಸೇರಲು ಆಹ್ವಾನ ಬಂದಿದ್ದು, ಒಂದು ವಾರದಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸುತ್ತೇನೆ ; ಮಾಜಿ ಶಾಸಕ ಸಿ ಎಚ್.​ ವಿಜಯಶಂಕರ್​
ಮಾಜಿ ಶಾಸಕ ಸಿ ಎಚ್​ ವಿಜಯ್​ ಶಂಕರ್​
  • Share this:
ಮೈಸೂರು (ಅ. 26) : ಬಿಜೆಪಿಯಿಂದ ನನಗೆ ಪಕ್ಷ ಸೇರಲು ಆಹ್ವಾನ ಬಂದಿದೆ. ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲು ಅಭಿಮಾನಿಗಳ ಸಭೆ ನಡೆಸಿ, ಇನ್ನೊಂದು ವಾರದಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸುತ್ತೇನೆ ಎಂದು ಮಾಜಿ ಶಾಸಕ ಸಿ ಎಚ್​ ವಿಜಯಶಂಕರ್ ತಿಳಿಸಿದ್ದಾರೆ. 

ಬಿಜೆಪಿ ತಮಗೆ ನೀಡಿರೋ ಆಹ್ವಾನ ಕುರಿತು ಮಾಜಿ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಬದಲಾದ ರಾಜಕೀಯದಲ್ಲಿ ಬದಲಾವಣೆ ನನ್ನ ಪಾಲಿಗೆ ಅಳಿವು - ಉಳಿವಿನ ಪ್ರಶ್ನೆಯಾಗಿದೆ. ರಾಜಕೀಯದಲ್ಲಿ ಎಲ್ಲಾ ಸಂದರ್ಭದಲ್ಲೂ ನಮ್ಮ ಎಲ್ಲಾ ನಿರ್ಧಾರಗಳು ಫಲ ನೀಡುವುದಿಲ್ಲ ಎಂದರು.

ಕಾಂಗ್ರೆಸ್ ಸೇರಿದ ತೀರ್ಮಾನ ಲೆಕ್ಕವೂ ಹೀಗೆ ಫಲ ಕೊಡಲಿಲ್ಲ. ರಾಜಕಾರಣಿ ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯ ಹೇಳಿ. ಹೀಗಾಗಿ ಬದಲಾವಣೆ ಬಯಸಿ ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿದ್ದೇನೆ  ಎಂದು ಹೇಳಿದರು.

ಅಧಿಕಾರ ಕೇಳಲು ಆಗುವುದಿಲ್ಲ ಸಿದ್ದರಾಮಯ್ಯ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ನನಗೆ ಟಿಕೆಟ್ ನೀಡಿದ ಸಿದ್ದರಾಮಯ್ಯಗೆ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ ಎಂದು ಸಿ. ಎಚ್. ವಿಜಯಶಂಕರ್ ಹೇಳಿದರು.

ಇದನ್ನೂ ಓದಿ : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರೂ ಸಿದ್ಧರಾಮಯ್ಯ ನಡವಳಿಕೆ ತಿದ್ದಿಕೊಳ್ಳುತ್ತಿಲ್ಲ ; ವಿಧಾನ ಪರಿಷತ್ ಸದಸ್ಯ ಅರುಣಾ ಶಹಾಪುರ

ಹುಣಸೂರು ಉಪ ಚುನಾವಣೆ ದೃಷ್ಟಿಯಿಂದ ಇಂಥಹ ತೀರ್ಮಾನ ಕೈಗೊಳ್ಳುತ್ತಿಲ್ಲ. ಒಂದು ರಾಷ್ಟ್ರೀಯ ಪಕ್ಷಕ್ಕೆ ಷರತ್ತು ಹಾಕಿ ಸೇರಲು ಆಗಲ್ಲ. ಒಂದು ವಾರದಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರುತ್ತೇನೆ. ಬಿಜೆಪಿ ಸೇರುವ ನಿರ್ಧಾರ ಕೈ ಗೊಂಡರೆ ಕಾಂಗ್ರೆಸ್ ಯಾಕೆ ಬಿಟ್ಟೆ, ಅಲ್ಲಿನ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ವಿವರಿಸುತ್ತೇನೆ ಎಂದರು.

 
First published:October 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ