ಹಾವೇರಿ: ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಶಿಗ್ಗಾಂವಿ (Shiggaon) ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ನಟ ಸುದೀಪ್ (Sudeep) ಸಹ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ನಟ ಸುದೀಪ್, ಕ್ಯಾಂಪೇನಿಂಗ್ ನನಗೇನೂ ಹೊಸದಲ್ಲ. ಇವತ್ತು ಶಿಗ್ಗಾಂವಿಯಿಂದ ಚುನಾವಣಾ ಪ್ರಚಾರ ಆರಂಭ ಮಾಡುತ್ತಿದ್ದೇವೆ. ಪಾದಯಾತ್ರೆ, ರೋಡ್ ಶೋ ಎಲ್ಲಾ ಇರುತ್ತೆ. ಮೇ 7ರವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದರು.
ಯಾರ ಪರ ಮತ್ತು ಹೇಗೆ ಪ್ರಚಾರ ಮಾಡಬೇಕು ಅನ್ನೋದನ್ನ ಸಿಎಂ ಟೀಂ ಬ್ಲ್ಯೂ ಪ್ರಿಂಟ್ ರೆಡಿ ಮಾಡುತ್ತದೆ . ನನಗೆ ಬೇರೆ ಕಡೆಯಿಂದಲೂ ಪ್ರಚಾರ ಕೇಳಿದ್ದರು. ಪ್ರತಿ ಬಾರಿಯೂ ಕೇಳ್ತಾರೆ, ಅದರಂತೆ ಈ ಬಾರಿಯೂ ಕೇಳಿದ್ದಾರೆ. ಆದರೆ ಈ ಸಾರಿ ನಾನು ಇದನ್ನೇ ಆಯ್ಕೆ ಮಾಡಿದ್ದೇನೆ ಎಂದರು.
ಈಗಾಗಲೇ ಯಾಕೆ ಪ್ರಚಾರ ಮಾಡುತ್ತಿದ್ದೇನೆ ಅನ್ನೋ ಕಾರಣನೂ ಹೇಳಿದ್ದೇನೆ. ಸಿಎಂ ಯಾರಿಗೂ ಸೂಚನೆ ಕೊಡ್ತಾರೆ ಅವರಿಗೆ ಪ್ರಚಾರ ಮಾಡ್ತೀನಿ ಎಂದು ತಿಳಿಸಿದರು.
ಅದ್ಧೂರಿ ರೋಡ್ ಶೋ
ಇನ್ನು ಶಿಗ್ಗಾಂವಿಗೆ ಆಗಮಿಸಿದ ಜೆಪಿ ನಡ್ಡಾ ಮತ್ತು ಸುದೀಪ್ ಅವರಿಗೆ ಮೈಸೂರು ಪೇಟ ತೊಡಿಸಿ ಸಿಎಂ ಬರಮಾಡಿಕೊಂಡರು. ಅದ್ಧೂರಿ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ಕಸರತ್ತು
ಜಗದೀಶ್ ಶೆಟ್ಟರ್ ಪಕ್ಷ ತೊರೆದ ಹಿನ್ನೆಲೆ ಸಂಜೆ ಲಿಂಗಾಯತ ನಾಯಕರ ಸಭೆಯನ್ನು ಬಿಜೆಪಿ ಕರೆದಿದೆ. ಶೆಟ್ಟರ್, ಸವದಿ ಬಿಜೆಪಿ ತೊರೆದ ಕಾರಣ ಲಿಂಗಾಯತ ಸಮುದಾಯ ಪಕ್ಷದಿಂದ ದೂರವಾಗುವ ಆತಂಕ ಎದುರಾಗಿದೆ.
ಈ ಹಿನ್ನೆಲೆ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ನಡೆ ಇರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ