ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮೊಮ್ಮಗ ಧವನ್ ರಾಕೇಶ್ (Dhawan Rakesh) ಸಿದ್ದರಾಮನಹುಂಡಿಯಲ್ಲಿ (Siddaramanahundi) ನ್ಯೂಸ್ 18 ಜೊತೆ ಮಾತನಾಡಿದ್ದು, ರಾಜಕೀಯ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿರಲು ತಂದೆ ರಾಕೇಶ್ (Rakesh Siddaramaiah) ಅವರಿಗೆ ತುಂಬಾ ಆಸೆ ಇತ್ತು. ಆದರೆ ಅವರು ತೀರಿಕೊಂಡ್ರು, ನಾನು ಅವರ ಕನಸನ್ನು ನನಸು ಮಾಡುತ್ತೇನೆ ಎಂದು ಹೇಳಿದರು. ನಮ್ಮಪ್ಪ ರಾಕೇಶ್ ಅವರ ರಕ್ತವೇ ನಂದು. ನನಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ನಾನು ಇವಾಗ ಸೆಕೆಂಡ್ ಪಿಯುಸಿ ಓದುತ್ತಿದ್ದೇನೆ. ಮುಂದೆ ತಾತನ ರೀತಿ ಲಾ (Law) ಮಾಡಿ ರಾಜಕೀಯಕ್ಕೆ ಬರ್ತೀನಿ ಎಂದು ಹೇಳಿದರು.
ರಾಜಕೀಯದ ಬಗ್ಗೆ ನಾನು ತಾತನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ನಮ್ಮ ತಾತ ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿ ಆಗಬೇಕು. ಕಳೆದ ಬಾರಿ ನಮ್ಮ ಚಿಕ್ಕಪ್ಪ ಯತೀಂದ್ರ ಅವರು ಇಲ್ಲಿ ಸ್ಪರ್ಧೆ ಮಾಡಿದ್ದರು. ಈ ಬಾರಿ ನಮ್ಮ ತಾತ ಇಲ್ಲಿ ಸ್ಪರ್ಧೆ ಮಾಡ್ತಿದ್ದಾರೆ. ತಾತ ಇಲ್ಲಿ ಗೆಲ್ಲುತ್ತಾರೆ ಎಂದು ಧವನ್ ವಿಶ್ವಾಸ ವ್ಯಕ್ತಪಡಿಸಿದರು.
ತಾತನ ಗೆಲ್ಲಿಸಲು ಕೆಲಸ ಮಾಡುತ್ತೇನೆ
ಸದ್ಯ ತಾತನ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ತಾತನ ಗೆಲ್ಲಿಸಲು ಕ್ಷೇತ್ರದ ಜನರ ಜೊತೆ ಸೇರಿ ಕೆಲಸ ಮಾಡುತ್ತೇನೆ ಎಂದು ಧವನ್ ಹೇಳಿದ್ದಾರೆ.
ಸಿದ್ದರಾಮಯ್ಯ ಇಲ್ಲಿ ಗೆಲ್ಲೋದು
ನಮ್ಮಣ್ಣನೇ ಇಲ್ಲಿ ಗೆಲ್ಲೋದು. ಸೋಮಣ್ಣ ಅಲ್ಲ, ಯಾರೇ ಇಲ್ಲಿಗೆ ಬಂದರು ನಮ್ಣಣ್ಣನೇ ಗೆಲ್ತಾನೆ. ನಮ್ಮಣ್ಣ ರಾಜ್ಯದಲ್ಲಿ ಜನರಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾನೆ. ಕ್ಷೇತ್ರದ ಜನರಿಗೂ ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾನೆ. ಕ್ಷೇತ್ರದ ಜನರು ಅವನನ್ನು ಗೆಲ್ಲಿಸ್ತಾರೆ ಎಂದು ಸಿದ್ದರಾಮಯ್ಯ ಸೋದರ ಸಿದ್ದೇಗೌಡರು ಹೇಳಿದ್ದಾರೆ.
ನಮ್ಮಣ್ಣನಿಗೆ ಇದು ಕೊನೆಯ ಚುನಾವಣೆ. ಆ ಮೇಲೆ ಅವನ ಮಗ, ಮೊಮ್ಮಗ ಬೇರೆ ಯಾರಾದರೂ ನಿಲ್ತಾರೆ. ಕೊನೆ ಚುನಾವಣೆ ಗೆಲ್ತಾನೆ, ಕಳೆದ ಚುನಾವಣೆಗಳಲ್ಲಿ ಇಲ್ಲಿ ನಿಂತು ವಿರೋಧ ಪಕ್ಷದ ನಾಯನಾಗಿದ್ದಾನೆ, ಮುಖ್ಯಮಂತ್ರಿ ಆಗಿದ್ದಾನೆ.
ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ
ಇಂದು ಮಧ್ಯಾಹ್ನ 2 ಗಂಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸಿದ್ದರಾಮನ ಹುಂಡಿ ಮತ್ತು ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ
ಬೆಳಗ್ಗೆ 10.30ಕ್ಕೆ ಉತ್ತನಹಳ್ಳಿ, ಬೆಳಗ್ಗೆ 11ಕ್ಕೆ ನಂಜನಗೂಡಿನ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ನಂಜನಗೂಡಿನ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಂಜೆ 5ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ