ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಎನ್ಡಿಎ ನ ಒಂದು ಭಾಗ. ಸ್ವಾಭಾವಿಕವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪ್ರಮುಖ ಪಕ್ಷ. ಅದರ ಜೊತೆ ಬಿಜೆಪಿ ಕೈ ಜೋಡಿಸಿದೆ. ಲೋಕಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ಸ್ಪರ್ಧೆ ಮಾಡಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಮತ್ತೆ ಎಐಎಡಿಎಂಕೆ ತಮಿಳುನಾಡಿನಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಭವಿಷ್ಯ ನುಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಬರೋದಿಲ್ಲ. ವಂಶಪಾರಂಪರ್ಯ ನಮ್ಮ ಪಕ್ಷದಲ್ಲಿ ಇಲ್ಲ. ಕಾಂಗ್ರೆಸ್ ಗೆ ಮಾಲೀಕರು ಅಂದರೆ ನೆಹರು ಕುಟುಂಬ. ಜೆಡಿಎಸ್ ಗೆ ಮಾಲೀಕರು ಅಂದರೆ ದೇವೇಗೌಡರ ಕುಟುಂಬ. ಆದರೆ ರಾಜ್ಯದಲ್ಲಿ ಬಿಜೆಪಿಗೆ ಮಾಲೀಕರು ಅಂದರೆ ಕಾರ್ಯಕರ್ತರ ಕುಟುಂಬ. ಲೀಡರ್ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ. ಆದರೆ ಮಾಲೀಕರು ಅಂದರೆ ಪಕ್ಷದ ಕಾರ್ಯಕರ್ತರು ಮಾತ್ರ. ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಪಕ್ಷದಲ್ಲಿ ಸೆಂಟ್ರಲ್ ಬೋರ್ಡ್. ಉತ್ತರಾಧಿಕಾರಿ ಪ್ರವೃತ್ತಿ ನಮ್ಮ ಪಾರ್ಟಿಯಲ್ಲಿ ಬೆಳೆದು ಬಂದಿಲ್ಲ. ಪಕ್ಷದ ನಿರ್ಣಯದ ಮೇಲೆ ಫ್ಯಾಮಿಲಿ ಪ್ರಭಾವ ಬೀರೋದಿಲ್ಲ. ಬಿಜೆಪಿಯಲ್ಲಿ ಕೇಂದ್ರ ಮಟ್ಟದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಪಾರ್ಲಿಮೆಂಟರಿ ಬೋರ್ಡ್, ರಾಜ್ಯದಲ್ಕಿ ಕೋರ್ ಕಮಿಟಿ ಇದೆ ಎಂದು ಹೇಳಿದರು.
ಇದನ್ನು ಓದಿ: ಗುವಾಹಟಿ ಐಐಟಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಹಪಾಠಿ ಬಂಧನ, ನಾಲ್ವರ ವಿಚಾರಣೆ
ಸಿಎಂ ಬಿಎಸ್ವೈ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಅವರು ದೂರು ನೀಡಿರುವ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ಈಶ್ವರಪ್ಪ ದೂರಿನ ಬಗ್ಗೆ ನಾನು ಇಲ್ಲಿ ಚರ್ಚೆ ಮಾಡಲ್ಲ. ಪಕ್ಷದ ವೇದಿಕೆಯಲ್ಲೇ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈಶ್ವರಪ್ಪ ನನಗೆ ಇದುವರೆಗೂ ಪತ್ರ ಬರೆದಿರೋದು ಗೊತ್ತಿಲ್ಲ. ಆದರೆ ಫೋನ್ ಮಾಡಿದ್ದರು. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡೋದಾಗಿ ಹೇಳಿದ್ದೇನೆ. ನಾನು ರಾಜ್ಯ ರಾಜಕಾರಣ ಬಿಟ್ಟು, ಪಕ್ಷದ ಸಂಘಟನೆ ಕಡೆ ಗಮನ ಕೊಟ್ಟಿದ್ದೇನೆ. ನಾನು ಇದರ ಬಗ್ಗೆ ಎಲ್ಲಿ ಚರ್ಚೆ ಮಾಡಬೇಕೋ ಅಲ್ಲೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ