• Home
  • »
  • News
  • »
  • state
  • »
  • Pratap Simha: ಗುಂಬಜ್​ ಮಾದರಿ ಬಸ್​ ನಿಲ್ದಾಣವನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ- ಸಂಸದ ಪ್ರತಾಪ್ ಸಿಂಹ

Pratap Simha: ಗುಂಬಜ್​ ಮಾದರಿ ಬಸ್​ ನಿಲ್ದಾಣವನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ- ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ

ಮೈಸೂರಿನಲ್ಲಿ ಟಿಪ್ಪು ನಾಮಾವಶೇಷ ಮಾಡುತ್ತೇನೆ. ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕುತ್ತೇನೆ ಎಂದು ಪ್ರತಾಪ್​ ಸಿಂಹ ಗುಡುಗಿದ್ದರು.

  • News18 Kannada
  • Last Updated :
  • Karnataka, India
  • Share this:

ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರುತ್ತಿದೆ. ಈ ಹೊತ್ತಿನಲ್ಲಿ ರಾಜಕೀಯ ಚರ್ಚೆಗಳು (Political Discussion)  ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘರ್ಷಗಳಿಗೆ ಆಸ್ಪದ ನೀಡುವ ಮುನ್ಸೂಚನೆ ದೊರಕುತ್ತಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳು ನಾಟಕ ಬಿಡುಗಡೆಯಾಗಿದ್ದು, ಇದರ ವಿರುದ್ಧ ಶಾಸಕ ತನ್ವೀರ್ ಸೇಠ್ (Tanveer Sait) ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದರ ಜತೆಯಲ್ಲೇ ಗುಂಬಜ್ ಮಾದರಿಯ ವಿನ್ಯಾಸ ಒಳಗೊಂಡ ಬಸ್ ನಿಲ್ದಾಣಗಳು ವಿಕೃತಗೊಂಡಿವೆ.


ಟಿಪ್ಪು ನಿಜ ಕನಸುಗಳು ನಾಟಕ


ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ಟಿಪ್ಪು ನಿಜ ಕನಸುಗಳು ನಾಟಕವನ್ನು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಲೋಕಾರ್ಪಣೆ ಮಾಡಿದ್ದಾರೆ. ಮೈಸೂರು ರಂಗಾಯಣದಲ್ಲಿ ಬೆಂಗಳೂರಿನ ಅಯೋಧ್ಯ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಟಿಪ್ಪು ಬಗ್ಗೆ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ, ಮೈಸೂರು ಒಡೆಯರ್ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ಟಿಪ್ಪು ಪರ್ಷಿಯನ್ ಜಾರಿಗೆ ತರುವ ಮೂಲಕ ಕನ್ನಡ ವಿರೋಧಿ ಆಡಳಿತ ನಡೆಸಿದ ಎಂದು ಪ್ರತಿಪಾದಿಸಿದ್ದಾರೆ.


ಸಾಮಾಜಿಕ ಹೋರಾಟಗಾರ ವಾದಿರಾಜ್, ಟಿಪ್ಪು ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದ್ರು ಮದಕರಿ ನಾಯಕನನ್ನು ಸೋಲಿಸಿ ಗ್ರಾಮದೇವತೆಗಳಾದ ಉಚ್ಚಂಗಿದೇವಿ, ಉತ್ಸವಾಂಬಿಕೆ, ಏಕನಾಥೇಶ್ವರಿ ದೇವಾಲಯ ಧ್ವಂಸ ಮಾಡಿದ. ಚಿತ್ರದುರ್ಗದ ಜುಮ್ಮಾ ಮಸೀದಿಗೆ ಹಿಂದೂ ದೇವಾಲಯದ ಗೋಪುರದ ಕಲ್ಲು ಬಳಸಿ ಮೆಟ್ಟಿಲು ಕಟ್ಟಿಸಿದ ಎಂದು ಆರೋಪಿಸಿದರು.


ಟಿಪ್ಪು ಯಾವ ಸೀಮೆ ಹುಲಿ


ಸಂಸದ ಪ್ರತಾಪ್ ಸಿಂಹ ಮಾತನಾಡಿ, ಟಿಪ್ಪು ಯಾವ ಸೀಮೆ ಹುಲಿ, ಬರಿಗೈನಲ್ಲಿ ಹುಲಿ ಕೊಂದಿದ್ದು ಯಾವಾಗ ? ಟಿಪ್ಪು ಯುದ್ದವನ್ನೇ ಮಾಡಿಲ್ಲ ಹೀಗೆ ತೀವ್ರವಾಗಿ ದಾಳಿ ನಡೆಸಿದ್ರು. ಮೈಸೂರಿನಲ್ಲಿ ಟಿಪ್ಪು ನಾಮಾವಶೇಷ ಮಾಡುತ್ತೇನೆ. ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕುತ್ತೇನೆ ಎಂದು ಗುಡುಗಿದ್ದರು.


i changed the name of tipu express on purpose says mp pratap simha
ಸಂಸದ ಪ್ರತಾಪ್​ ಸಿಂಹ


ಗುಂಬಜ್ ಮಾದರಿಯ ಬಸ್ ನಿಲ್ದಾಣ ಬದಲಾವಣೆ


ಇದರ ಬೆನ್ನಲ್ಲೇ ರಾತ್ರೋರಾತ್ರಿ ಗುಂಬಜ್ ಮಾದರಿಯ ವಿನ್ಯಾಸ ಒಳಗೊಂಡಿದ್ದ ಬಸ್ ನಿಲ್ದಾಣಗಳ ಸ್ವರೂಪವೇ ಬದಲಾಗಿದೆ. ನಾಲ್ಕೈದು ತಿಂಗಳ ಹಿಂದೆ ಮೈಸೂರು- ಊಟಿ ಹೆದ್ದಾರಿ, ಜೆ.ಪಿ.ನಗರದಲ್ಲಿ ಬಸ್ ಶೆಲ್ಟರ್ ನಿರ್ಮಾಣವಾಗಿತ್ತು. ಪ್ರತಾಪ್ ಸಿಂಹ ಭಾಷಣದ ಬೆನ್ನಲ್ಲೇ ಗೋಲಾಕಾರದ ಮೇಲೆ ಕಳಶ ಸಿಕ್ಕಿಸಲಾಗಿದೆ. ಪರಿಣಾಮ ಅತ್ತ ಗುಂಬಜ್ ಮಾದರಿಯೂ ಇಲ್ಲ, ಇತ್ತ ಹಿಂದೂ ಗೋಪುರದ ಮಾದರಿಯೂ ಇಲ್ಲದಂತಾಗಿ ಬಸ್ ನಿಲ್ದಾಣವೇ ವಿಕೃತವಾಗಿ ಕಾಣಿಸುತ್ತಿದೆ.


ಪಿಎಎಲ್ ಮೂಲಕ ತಡೆಯಾಜ್ಞೆ- ತನ್ವೀರ್​


ಇನ್ನು ಟಿಪ್ಪು ಪುಸ್ತಕ ವಿಚಾರ ಕಾನೂನಾತ್ಮಕ ಹೋರಾಟವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಪುಸ್ತಕ ಬಿಡುಗಡೆಯಾಗಲಿ ಎಂದಿದ್ದ ಶಾಸಕ ತನ್ವಿರ್ ಸೇಠ್, ಇದೀಗ ನವೆಂಬರ್ 20ರಿಂದ ಪ್ರಾರಂಭವಾಗಬೇಕಿದ್ದ ಟಿಪ್ಪು ನಿಜ ಕನಸು ನಾಟಕಕ್ಕೆ ಪಿಎಎಲ್ ಮೂಲಕ ತಡೆಯಾಜ್ಞೆ ತರುವುದಾಗಿ ಹೇಳಿದ್ದಾರೆ. ಕೋರ್ಟ್ ಅವರೊಬ್ಬರಿಗೇ ಇಲ್ಲ. ನಾನೂ ಕಾನೂನು ಹೋರಾಟ ಮಾಡುತ್ತೇನೆ ಎಂದು ಕರ್ತೃ ಅಡ್ಡಂಡ ಕಾರ್ಯಪ್ಪ ತಿರುಗೇಟು ಕೊಟ್ಟಿದ್ದಾರೆ.


ಟಿಪ್ಪು ಸುಲ್ತಾನ್ 100 ಅಡಿ ಪ್ರತಿಮೆ, ಟಿಪ್ಪು ನಿಜ ಕನಸು ನಾಟಕ, ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೀಗೆ ಮೂರು ವಿಚಾರಗಳು ಏಕಕಾಲಕ್ಕೆ ಚರ್ಚೆಗೆ ಬಂದಿವೆ. ಪ್ರತಿಮೆ ಹಾಗೂ ನಾಟಕದಿಂದ ರಾಜಕೀಯ ಲಾಭ ಪಡೆಯಲು ಬಿಜೆಪಿ- ಕಾಂಗ್ರೆಸ್ ಚರ್ಚೆ ಮುಂದುವರಿಸಬಹುದು.


ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ​!


ಆದರೆ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳು ಇರೋದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ. ಬಿಜೆಪಿಯ ಎಸ್.ಎ.ರಾಮದಾಸ್ ಸ್ಥಳೀಯ ಶಾಸಕರು. ಹೀಗಾಗಿ ಬಸ್ ನಿಲ್ದಾಣ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ನಡುವೆ ಒಳಜಗಳಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.

Published by:ಪಾವನ ಎಚ್ ಎಸ್
First published: