Eshwarappa: ನಿನ್ನ ನಾಲಿಗೆ ಕಟ್ ಮಾಡ್ತೀನಿ, ಮಾಜಿ ಸಚಿವ ಈಶ್ವರಪ್ಪಗೆ ಬೆದರಿಕೆ ಪತ್ರ! ದೂರು ದಾಖಲು

ಮಾಜಿ ಸಚಿವ, ಶಾಸಕ ಕೆ.ಎಸ್‌ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ಬಂದಿದೆ. ‘ನಿನ್ನ ನಾಲಿಗೆ ಕಟ್‌ ಮಾಡುತ್ತೇನೆ ಹುಷಾರ್‌’ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕರು ದೂರು ನೀಡಿದ್ದಾರೆ.

ಕೆ ಎಸ್ ಈಶ್ವರಪ್ಪಗೆ ಬೆದರಿಕೆ ಕರೆ

ಕೆ ಎಸ್ ಈಶ್ವರಪ್ಪಗೆ ಬೆದರಿಕೆ ಕರೆ

  • Share this:
ಮಾಜಿ ಸಚಿವ, ಶಾಸಕ ಕೆ.ಎಸ್‌ ಈಶ್ವರಪ್ಪ (Eshwarappa) ಅವರಿಗೆ ಬೆದರಿಕೆ ಪತ್ರ ಬಂದಿದೆ. ‘ನಿನ್ನ ನಾಲಿಗೆ ಕಟ್‌ ಮಾಡುತ್ತೇನೆ ಹುಷಾರ್‌’ (Tongue cut) ಎಂದು ಅನಾಮಧೇಯ ಬೆದರಿಕೆ ಪತ್ರದಲ್ಲಿ ()  ಬರೆಯಲಾಗಿದೆ. ಈಶ್ವರಪ್ಪ ಅವರ ಶಿವಮೊಗ್ಗದ ಮಲ್ಲೇಶ್ವರ ನಗರದ ಮುಖ್ಯ ರಸ್ತೆಯಲ್ಲಿರುವ ಮನೆಗೆ ಈ ಪತ್ರ ಬಂದಿದೆ. ಕೆಎಸ್ ಈಶ್ವರಪ್ಪಗೆ ಕೈ ಬರಹದಲ್ಲಿ (Hand writing) ಬಂದಿರುವ ಪತ್ರದಲ್ಲಿ ಈ ರೀತಿ ಬರೆಯಲಾಗಿದೆ. ‘ಮುಸ್ಲಿಂ ಗೂಂಡಾಗಳೇ ಅಂತಾ ಹೇಳಿದ ಕಳ್ಳ ಈಶ್ವರಪ್ಪ ಲೇ ನಿನಗೆ ಒಂದು ವಿಷಯ. ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್ (Tipu Sultan) ಬಗ್ಗೆ ನಿನ್ನ ಬಾಯಿಂದ ಬಂದ ಮುಸ್ಲಿಂ ಗೂಂಡಾ ಅಂತಾ ಹೇಳಿದ್ದೀಯಲ್ಲ, ಹುಷಾರ್ ಮಗನೇ ಬಾಲ ಬಿಚ್ಚಬೇಡ.’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಟಿಪ್ಪು ವಿವಾದ, ಈದ್ಗಾ ಮೈದಾನ ವಿವಾದದ ನಡುವೆ ಈಗ ಮಾಜಿ ಸಚಿವ, ಶಾಸಕ ಕೆ.ಎಸ್‌ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ಬಂದಿದೆ. ‘ನಿನ್ನ ನಾಲಿಗೆ ಕಟ್‌ ಮಾಡುತ್ತೇನೆ ಹುಷಾರ್‌’ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕರು ದೂರು ನೀಡಿದ್ದಾರೆ.

I will cut your tongue a threatening letter to former minister Eshwarappa complaint lodged
ಕೆ ಎಸ್ ಈಶ್ವರಪ್ಪ


ಬೆದರಿಕೆ ಪತ್ರದಲ್ಲಿ ಏನಿದೆ?
ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಕೈ ಬರಹದಲ್ಲಿ ಪತ್ರದಲ್ಲಿ ಬರೆಯಲಾಗಿದೆ. ‘ಮುಸ್ಲಿಂ ಗೂಂಡಾಗಳೇ ಅಂತಾ ಹೇಳಿದ ಕಳ್ಳ ಈಶ್ವರಪ್ಪ ಲೇ ನಿನಗೆ ಒಂದು ವಿಷಯ ನೆನಪಿರಲಿ. ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್ ಬಗ್ಗೆ ನಿನ್ನ ಬಾಯಿಂದ ಬಂದ ಮುಸ್ಲಿಂ ಗೂಂಡಾ ಅಂತಾ ಹೇಳಿದ್ದೀಯಲ್ಲ.. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿನ ಕಟ್ಟಡ ಕಟ್ಟಲಿಕ್ಕೆ ನಿನಗೆ ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು. ಆದರೆ ನಿನಗೆ ಮುಸ್ಲಿಂರು ಬೇಡ. ಮಗನೆ ನಿನಗೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್ ಮಗನೇ ಬಾಲ ಬಿಚ್ಚಬೇಡ.’ ಎಂದು ಪತ್ರದಲ್ಲಿ ಬರೆಯಲಾಗಿದೆ.

I will cut your tongue a threatening letter to former minister Eshwarappa complaint lodged
ಈಶ್ವರಪ್ಪಗೆ ಬಂದ ಬೆದರಿಕೆ ಪತ್ರ


ಹೇಡಿಗಳು ಅನಾಮಧೇಯ ಪತ್ರ ಬರೆದಿದ್ದಾರೆ: ಈಶ್ವರಪ್ಪ
ಬೆದರಿಕೆ ಪತ್ರ ಸಂಬಂಧ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಯಾರೋ ಹೇಡಿಗಳು ಅನಾಮಧೇಯ ಪತ್ರ ಬರೆದಿದ್ದಾರೆ. ಇಂಥ ಗೊಡ್ಡು ಬೆದರಿಕೆ, ಹೇಡಿಗಳ ಪತ್ರಕ್ಕೆ ಎಂದೂ ಹೆದರಲ್ಲ, ಬೆದರಲ್ಲ. ಆದರೂ ಒಬ್ಬ ಶಾಸಕನಾಗಿದ್ದರಿಂದ ಯಾರು ಪತ್ರ ಬರೆದ ಹೇಡಿಯಿದ್ದಾನೋ ಆತನ ವಿರುದ್ದ ದೂರು ನೀಡಿದ್ದೇನೆ ಎಂದರು.

ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ 40% ಕಮಿಷನ್ ತೂಗುಕತ್ತಿ; ಮುನಿರತ್ನ ವಿರುದ್ಧ ಆರೋಪ, ದಾಖಲೆ ಕೊಡಿ ಅಂತಾ ಸಚಿವರ ಸವಾಲ್

ಅನಾಮಧೇಯ ಪತ್ರದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ. ತನಿಖೆ ಮಾಡಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ' ಎಂದು ಈಶ್ವರಪ್ಪ ತಿಳಿಸಿದ್ದಾರೆ.

ನಾನು ಹೇಳಿದ್ದರಲ್ಲಿ ತಪ್ಪೇನಿದೆ?

ಈ ಪತ್ರ ನಮ್ಮ ರಾಜ್ಯದಿಂದಲೇ ಬಂದಿದೆ. ಈ ಹಿಂದೆಯೂ ದುಬೈನಿಂದ ಬೆದರಿಕೆ ಕರೆ ಬಂದಿತ್ತು. ಮುಸಲ್ಮಾನರೆಲ್ಲರಿಗೂ ನಾನು ಏನೂ ಹೇಳಿಲ್ಲ. ಆದರೆ, ಮುಸಲ್ಮಾನ್ ಗೂಂಡಾಗಳಿಗೆ ಗೂಂಡಾ ಎಂದು ಕರೆದಿದ್ದೆನೆ. ಇದರಲ್ಲಿ ತಪ್ಪೇನಿದೆ ಅಂತಾ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಬೆದರಿಕೆ ಪತ್ರ ಸಂಬಂಧ ದೂರು

ಇದೀಗ ಮುಸ್ಲಿಂ ಗೂಂಡಾಗಳು ಎಂಬ ಪದ ಬಳಸಿದ್ದಕ್ಕೆ ಅನಾಮಧೇಯ ಬೆದರಿಕೆ ಪತ್ರವೊಂದು ಕೆಎಸ್‌ ಈಶ್ವರಪ್ಪ ಮನೆಗೆ ಬಂದಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸದ್ಯ ಪತ್ರ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಇದನ್ನು ಪರಿಶೀಲಿಸಿ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಆಪ್ತನ ಮನೆ ಮೇಲೆ ಇಡಿ ದಾಳಿ, ಎರಡು ಎಕೆ-47 ರೈಫಲ್ ಪತ್ತೆ

ಈಶ್ವರಪ್ಪ ಏನು ಹೇಳಿದ್ದರು?

ಕರ್ನಾಟಕದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ. ನಾನು ಎಲ್ಲಾ ಮುಸ್ಲಿಮರೂ ಗೂಂಡಾಗಳು ಎಂದು ಹೇಳುವುದಿಲ್ಲ. ಆದರೆ ಯಾರೋ ನಾಲ್ಕೈದು ದುಷ್ಕರ್ಮಿಗಳು ಮಾಡುತ್ತಿರುವ ಕೆಲಸವನ್ನು ಸಮಾಜ ಖಂಡಿಸಬೇಕಿತ್ತು. ಆ ಕೆಲಸವನ್ನು ಮುಸ್ಲಿಂ ಸಮಾಜದ ಪ್ರಮುಖರು ಮಾಡಬೇಕು ಎಂದಿದ್ದರು.
Published by:Thara Kemmara
First published: