ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ; ಅನರ್ಹ ಶಾಸಕ ಎಂಟಿಬಿ ನಾಗರಾಜ್​

ಇಂದು ಡಾಲರ್ಸ್​​ ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ‌ಭೇಟಿ ಮಾಡಿದ ಅನರ್ಹ ಶಾಸಕ ಎಂಟಿಬಿ‌ ನಾಗರಾಜ್ ಬಳಿಕೆ ಮಾಧ್ಯಮದ ಜೊತೆ ಮಾತನಾಡಿದರು. ಈ ವೇಳೆ ಅವರು ಹೊಸಕೋಟೆ ಉಪ ಚುನಾವವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.

Rajesh Duggumane | news18-kannada
Updated:September 10, 2019, 8:49 PM IST
ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ; ಅನರ್ಹ ಶಾಸಕ ಎಂಟಿಬಿ ನಾಗರಾಜ್​
ಎಂಟಿಬಿ ನಾಗರಾಜ್​​
  • Share this:
ಬೆಂಗಳೂರು (ಸೆ.10): ರಾಜಕೀಯ ನಿವೃತ್ತಿ ಪಡೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುತ್ತಾ ಬರುತ್ತಿದ್ದ ಎಂಟಿಬಿ ನಾಗರಾಜ್​ ಈಗ ಯು ಟರ್ನ್​​ ತೆಗೆದುಕೊಂಡಿದ್ದಾರೆ. ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಮತ್ತೆ ನಾನೇ ಸ್ಪರ್ಧೆ ಮಾಡುತ್ತೇ ಎಂದು ಅವರು ಹೇಳಿದ್ದಾರೆ. ಈ ಮೂಲಕ ರಾಜಕೀಯ ಗುಡ್​ಬೈ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಡಾಲರ್ಸ್​​ ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ‌ಭೇಟಿ ಮಾಡಿದ ಅನರ್ಹ ಶಾಸಕ ಎಂಟಿಬಿ‌ ನಾಗರಾಜ್ ಬಳಿಕೆ ಮಾಧ್ಯಮದ ಜೊತೆ ಮಾತನಾಡಿದರು. ಈ ವೇಳೆ ಅವರು ಹೊಸಕೋಟೆ ಉಪ ಚುನಾವವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.

“ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ನಾನೇ ಚುನಾವಣೆಗೆ ನಿಲ್ಲುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಕೋರ್ಟ್ ನಿಂದ ತೀರ್ಪು ಬರಲಿಲ್ಲ ಎಂದರೆ ನನ್ನ‌‌ ಮಗನನ್ನು ನಿಲ್ಲಿಸುತ್ತೇನೆ,” ಎಂದು ಕಡ್ಡಿ ಮುರಿದಂತೆ ಹೇಳಿದರು.

ಹಾಗಿದ್ದರೆ ಎಂಟಿಬಿ ಯಾವ ಕ್ಷೇತ್ರದಿಂದ ನಿಲ್ಲುತ್ತಾರೆ? ಈ ಬಗ್ಗೆ ಅವರಿನ್ನೂ ನಿರ್ಧಾರ ಮಾಡಿಲ್ಲವಂತೆ. “ಯಾವ ಪಕ್ಷದಿಂದ ನಿಲ್ಲಬೇಕು ಎನ್ನುವುದನ್ನು ನಾನಿನ್ನೂ ಯೋಚಿಸಿಲ್ಲ. ನಿರ್ಧಾರವಾದ ನಂತರ ಆ ಬಗ್ಗೆ ನಿಮಗೆ ತಿಳಿಸುತ್ತೇನೆ,” ಎಂದು ಎಂಟಿಬಿ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಎಂಟಿಬಿ ನಾಗರಾಜ್ ಟೀಕೆಗೆ ನಾನು ಹೆಚ್ಚಿನ ಮಹತ್ವ ಕೊಡಲ್ಲ; ಸಿದ್ದರಾಮಯ್ಯ ಸ್ಪಷ್ಟನೆ!

“ರಾಜಕೀಯದಲ್ಲಿ ಸಾಕಷ್ಟು ಅನುಭವಿಸಿದ್ದೇನೆ. ಕಾರ್ಯಕರ್ತರ ಜತೆ ಚರ್ಚಿಸುತ್ತೇನೆ. ಅವರ ಸಲಹೆಯಂತೆ ನಡೆದುಕೊಳ್ಳುತ್ತೇನೆ. ನನಗೆ ಇದು ಸಾಕಾಗಿದೆ. ಈ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆ," ಎಂದು ಹೇಳಿದ್ದರು.

ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಅತೃಪ್ತರು, ತಮ್ಮ ಶಾಸಕ ಸ್ಥಾನವನ್ನು ಉಳಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹಿಂದಿನ ಸ್ಪೀಕರ್​​​ ರಮೇಶ್​​ ಕುಮಾರ್​​​ ಅನರ್ಹ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ತೀರ್ಪು 16ಕ್ಕೆ ಹೊರ ಬೀಳುವ ಸಾಧ್ಯತೆ ಇದೆ.
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ