ಹುಣಸೂರು ಚುನಾವಣಾ ಪ್ರಚಾರಕ್ಕೆ ಜಿ.ಟಿ.ದೇವೇಗೌಡರನ್ನು ನಾನು ಕರೆತರುತ್ತೇನೆ; ಪ್ರಜ್ವಲ್ ರೇವಣ್ಣ

ವಿಶ್ವನಾಥ್ ವೈಯಕ್ತಿಕ ಅನುಕೂಲಕ್ಕಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ರಾಜಕಾರಣ ಚುನಾವಣೆಯಲ್ಲಿ ಕಿಚ್ಚು ತೋರಿಸಿ, ಗೆದ್ದು ಬಂದ ಮೇಲೆ ಮಾತನಾಡೋಣ.  ಒಳ್ಳೆತನ, ಕೆಟ್ಟತನವನ್ನು ದೇವರು ನೋಡುಕೊಳ್ಳುತ್ತಾನೆ‌ ಎಂದು ಹೇಳಿದರು.

HR Ramesh | news18-kannada
Updated:November 22, 2019, 6:25 PM IST
ಹುಣಸೂರು ಚುನಾವಣಾ ಪ್ರಚಾರಕ್ಕೆ ಜಿ.ಟಿ.ದೇವೇಗೌಡರನ್ನು ನಾನು ಕರೆತರುತ್ತೇನೆ; ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಇದ್ದಾರೆ.
  • Share this:
ಹುಣಸೂರು: ಎಲ್ಲಾ ಸಮಾಜದ ನಾಯಕರು, ಮುಖಂಡರನ್ನು ಭೇಟಿ ಮಾಡುತ್ತೇನೆ‌. ಅಸಮಾಧಾನಗೊಂಡಿರುವವರ ಮನವೊಲಿಸುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಹುಣಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ಚುನಾವಣೆಗೆ ಎಲ್ಲಾ ರೀತಿಯ ಕಾರ್ಯತಂತ್ರ ಮಾಡಲಾಗುವುದು. ನಾಳೆಯಿಂದ ಅಧಿಕೃತ ಪ್ರಚಾರ ಮಾಡುತ್ತೇನೆ. ಹುಣಸೂರಿಗೆ ನಾನೇ ಉಸ್ತುವಾರಿ. ಇಲ್ಲಿ ಜಾಸ್ತಿ ಸಮಯ ಇದ್ದು, ಪಕ್ಷದ ಅಭ್ಯರ್ಥಿ ಸೋಮಶೇಖರ್ ಪರ ಪ್ರಚಾರ ಮಾಡುತ್ತೇನೆ. ಜೊತೆಗೆ ಕೆ.ಆರ್ ಪೇಟೆ ಯಶವಂತಪುರಕ್ಕೂ ಹೋಗುತ್ತೇನೆ. ಹೈಕಮಾಂಡ್ ಸೂಚಿಸಿದ ಕಡೆ ಹೋಗುತ್ತೇನೆ ಎಂದು ಹೇಳಿದರು.

ಶಾಸಕ ಜಿಟಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಅವರು ಆಗಲೇ ನನ್ನನ್ನು ಭೇಟಿ ಮಾಡಿದ್ದಾರೆ. ಜಿಟಿಡಿ ಸಂಪೂರ್ಣವಾಗಿ ನಮಗೆ ಆಶೀರ್ವಾದ ಮಾಡಿದ್ದಾರೆ.  ಬೆಂಬಲಿಗರಿಗೂ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಹೇಳಿದ್ದಾರೆ. ಜಿಟಿಡಿಯನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತೇನೆ. ವಿಶ್ವನಾಥ್ ವೈಯಕ್ತಿಕ ಅನುಕೂಲಕ್ಕಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ರಾಜಕಾರಣ ಚುನಾವಣೆಯಲ್ಲಿ ಕಿಚ್ಚು ತೋರಿಸಿ, ಗೆದ್ದು ಬಂದ ಮೇಲೆ ಮಾತನಾಡೋಣ.  ಒಳ್ಳೆತನ, ಕೆಟ್ಟತನವನ್ನು ದೇವರು ನೋಡುಕೊಳ್ಳುತ್ತಾನೆ‌ ಎಂದು ಹೇಳಿದರು.

ಇದನ್ನು ಓದಿ: ಜನರಿಗೆ ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಗೊತ್ತಿದೆ, ಹೀಗಾಗಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ; ಆರ್.ಅಶೋಕ್ ಭವಿಷ್ಯ

First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ