HOME » NEWS » State » I WILL BE A STONE FOR THOSE WHO CLIMB THE THIRD FLOOR OF THE VIDHANA SOUDHA SAYS KPCC PRESIDENT DK SHIVAKUMAR RH

ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ. ನನ್ನನ್ನು ಚಪ್ಪಡಿ ಎಂದು ತಿಳಿದುಕೊಂಡು ನಮ್ಮ ಶಾಸಕರು ವಿಧಾನಸೌಧದ ಮೂರನೇ ಮಹಡಿಗೆ ಹೋಗಲಿ ಎಂದ ಡಿಕೆಶಿ, ಕೊರೋನಾದ ಬಳಿಕ ಕಾಂಗ್ರೆಸ್ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂದರು.

news18-kannada
Updated:July 2, 2020, 3:36 PM IST
ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು; 16 ಸಾವಿರ ಜಾಗಗಳಲ್ಲಿ ಲಕ್ಷಾಂತರ ಜನರು ಪದಗ್ರಹಣ ಕಾರ್ಯಕ್ರಮ ನೋಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ. ಇದು ಪಕ್ಷದ ಕಾರ್ಯಕ್ರಮ. ಇಡೀ ವಿಶ್ವವೇ ಕಾರ್ಯಕ್ರಮ ನೋಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾನು ದೊಡ್ಡ ವಿದ್ಯಾವಂತ ಅಲ್ಲ, ನನಗೆ ಇರುವ ತಿಳಿವಳಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಕಾರ್ಯಕರ್ತರು ಆಶೀರ್ವದಿಸಿದ್ದಾರೆ. ಇದು ನನಗೆ ದೊಡ್ಡ ಜವಾಬ್ದಾರಿ. ಅವರ ನಂಬಿಕೆ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಜನರ ಭಾವನೆ ಅರಿತು ಕೆಲಸ ಮಾಡುತ್ತೇವೆ. ವಿಧಾನಸೌಧ ಚಪ್ಪಡಿ ಕಲ್ಲಿನಂತೆ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಇದನ್ನು ಓದಿ: DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು

ನನಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶಕ್ತಿ ತುಂಬಿದ್ದಾರೆ. ಇದು ದೊಡ್ಡ ಜವಾಬ್ದಾರಿ ಆಗಿ ಸ್ವೀಕರಿಸಿದ್ದೇನೆ. ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ. ನನ್ನನ್ನು ಚಪ್ಪಡಿ ಎಂದು ತಿಳಿದುಕೊಂಡು ನಮ್ಮ ಶಾಸಕರು ವಿಧಾನಸೌಧದ ಮೂರನೇ ಮಹಡಿಗೆ ಹೋಗಲಿ ಎಂದ ಡಿಕೆಶಿ, ಕೊರೋನಾದ ಬಳಿಕ ಕಾಂಗ್ರೆಸ್ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂದರು.
First published: July 2, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories