news18-kannada Updated:February 17, 2020, 2:46 PM IST
ಜಿ.ಟಿ. ದೇವೇಗೌಡ
ಬೆಂಗಳೂರು: ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಲೆಕ್ಕಿಸದೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮತ ಚಲಾಯಿಸಿದ್ದರು.
ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣಕ್ಕೆ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಶಾಸಕರು ಮತ ಹಾಕದಂತೆ ಪಕ್ಷ ಸೂಚನೆ ನೀಡಿತ್ತು. ಆದರೆ, ಈ ಸೂಚನೆಯನ್ನು ಮೀರಿ ಜಿ.ಟಿ.ದೇವೇಗೌಡ ಅವರು ಇಂದು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಈ ವೇಳೆ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಿರಲಿಲ್ಲ. ಬಳಿಕ ಜಿಟಿಡಿ ನಡೆ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಪಕ್ಷ ನನಗೆ ಇಂತಹವರಿಗೆ ಮತ ಹಾಕಿ ಎಂದು ಹೇಳಿಲ್ಲ, ವಿಪ್ ಜಾರಿ ಮಾಡಿ ಇಂತಹವರಿಗೆ ಮತ ಹಾಕಿ ಎಂದು ಸಹ ಹೇಳಿಲ್ಲ. ನನಗೆ ಯಾವ ಸೂಚನೆಯೂ ಪಕ್ಷದಿಂದ ಬಂದಿರಲಿಲ್ಲ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ಸಹಕಾರಿ ನಾಯಕ ಲಕ್ಷ್ಮಣ ಸವದಿಗೆ ಮತ ಹಾಕಿದ್ದೇನೆ ಎಂದು ನೇರವಾಗಿ ಹೇಳಿದರು.
ಜಿಟಿಡಿ, ಇಲ್ಲಿರುತ್ತಾರೋ, ಅಲ್ಲಿರುತ್ತಾರೋ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಟಿಡಿ, ನಾನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕನಾಗಿ ಕ್ಷೇತ್ರದಲ್ಲಿ ಇದ್ದೇನೆ. ನಾನು ಪಕ್ಷಕ್ಕೆ ಅಗೌರವ ತರುವ ರೀತಿ ನಡೆದುಕೊಂಡಿಲ್ಲ ಎಂದು ಹೇಳಿದರು.
ಇದನ್ನು ಓದಿ: ಜೆಡಿಎಸ್ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಪರಿಷತ್ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಮತದಾನ; ಎಚ್ಡಿ ಕುಮಾರಸ್ವಾಮಿ
First published:
February 17, 2020, 2:43 PM IST