ನಾನು ಗೃಹ ಸಚಿವನಾಗಿದ್ದೆ, ಇಂಟೆಲಿಜೆಂಟ್ಸ್ ನಮ್ಮ ವ್ಯಾಪ್ತಿಗೆ ಬರಲ್ಲ; ಫೋನ್ ಕದ್ದಾಲಿಕೆ ಪ್ರಕರಣದಿಂದ ನುಣುಚಿಕೊಂಡ ಜಿ. ಪರಮೇಶ್ವರ್

ಫೋನ್ ಟ್ಯಾಪಿಂಗ್ ವಿಚಾರ ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗೆ ಒಳಗಾಗಿದೆ. ಎಲ್ಲಾ ಪಕ್ಷದ ನಾಯಕರು ಈ ಪ್ರಕರಣದ ಕುರಿತು ಸಿಬಿಐ ತನಿಖೆ ಆಗಲಿ ಎಂದು ಒಕ್ಕೊರಳಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಇದೀಗ ಚೆಂಡು ಆಡಳಿತರೂಢ ಸರ್ಕಾರದ ಮುಂದಿದ್ದು ಸಿಎಂ ಯಡಿಯೂರಪ್ಪ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದರ ಕುರಿತು  ಭಾರೀ ಕುತೂಹಲ ಮನೆಮಾಡಿದೆ.

news18
Updated:August 16, 2019, 2:06 PM IST
ನಾನು ಗೃಹ ಸಚಿವನಾಗಿದ್ದೆ, ಇಂಟೆಲಿಜೆಂಟ್ಸ್ ನಮ್ಮ ವ್ಯಾಪ್ತಿಗೆ ಬರಲ್ಲ; ಫೋನ್ ಕದ್ದಾಲಿಕೆ ಪ್ರಕರಣದಿಂದ ನುಣುಚಿಕೊಂಡ ಜಿ. ಪರಮೇಶ್ವರ್
ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​.
  • News18
  • Last Updated: August 16, 2019, 2:06 PM IST
  • Share this:
ಬೆಂಗಳೂರು (ಆಗಸ್ಟ್.16); ನಾನು ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೆ, ಆದರೆ ಫೋನ್ ಟ್ಯಾಪಿಂಗ್ ವಿಚಾರ ಗೃಹ ಇಲಾಖೆಗೆ ಬರಲ್ಲ ಇದು ಇಂಟೆಲಿಜೆನ್ಸ್ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು. ನಾನು ಗೃಹ ಇಲಾಖೆ ಸಚಿವನಾಗಿದ್ದಾಗ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ಮಾಜಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಫೋನ್ ಕದ್ದಾಲಿಕೆ ವಿಚಾರದಿಂದ ನುಣುಚಿಕೊಂಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೂರೂ ಪಕ್ಷದ ಪ್ರಮುಖ ನಾಯಕರ ಫೋನ್ ಕರೆಗಳನ್ನು ಕದ್ದಾಲಿಸಲಾಗಿತ್ತು ಎಂಬ ವಿಚಾರ ಇದೀಗ ರಾಜ್ಯದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ಗೃಹ ಇಲಾಖೆ ಮತ್ತು ಇಂಟೆಲಿಜೆನ್ಸ್ ಬೇರೆ ಬೇರೆ. ಸಾಮಾನ್ಯವಾಗಿ ಭಯೋತ್ಪಾದಕರು ಹಾಗೂ ಕ್ರಿಮಿನಲ್​ಗಳ ಚಲನವಲನಗಳನ್ನು ತಿಳಿದುಕೊಳ್ಳಲು ಇಂಟೆಲಿಜೆನ್ಸ್ ಇಲಾಖೆ ಅಧಿಕಾರಿಗಳು ಫೋನ್ ಟ್ಯಾಪಿಂಗ್ ಮಾಡುವುದು ವಾಡಿಕೆ.

ಇದು ಸಿಎಂ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಯಾವುದೇ ವ್ಯಕ್ತಿಯ ಫೋನ್ ಟ್ಯಾಪ್ ಮಾಡುವ ಮೊದಲು ಗೃಹ ಇಲಾಖೆ ಅನುಮತಿ ಪಡೆದು ಟ್ಯಾಪ್ ಮಾಡುತ್ತಾರೆ. ಆದರೆ, ನಾನು ಗೃಹ ಮಂತ್ರಿಯಾಗಿದ್ದಾಗ ಈ ಕುರಿತ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಇದೀಗ ಈ ಕುರಿತು ಎಲ್ಲೆಡೆ ಅನುಮಾನ ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕುರಿತು ತನಿಖೆಗೆ ಆದೇಶಿಸಲಿ. ತನಿಖೆ ನಡೆಸಿದರೆ ಯಾರು? ಯಾವ ಕಾರಣಕ್ಕೆ ಫೋನ್ ಟ್ಯಾಪ್ ಮಾಡಿಸಿದ್ದರು ಎಂಬುದು ಗೊತ್ತಾಗಲಿದೆ” ಎಂದು ಅವರು ತಿಳಿಸಿದ್ದಾರೆ.

ಫೋನ್ ಟ್ಯಾಪಿಂಗ್ ವಿಚಾರ ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗೆ ಒಳಗಾಗಿದೆ. ಎಲ್ಲಾ ಪಕ್ಷದ ನಾಯಕರು ಈ ಪ್ರಕರಣದ ಕುರಿತು ಸಿಬಿಐ ತನಿಖೆ ಆಗಲಿ ಎಂದು ಒಕ್ಕೊರಳಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಇದೀಗ ಚೆಂಡು ಆಡಳಿತರೂಢ ಸರ್ಕಾರದ ಮುಂದಿದ್ದು ಸಿಎಂ ಯಡಿಯೂರಪ್ಪ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದರ ಕುರಿತು  ಭಾರೀ ಕುತೂಹಲ ಮನೆಮಾಡಿದೆ.

ಇದನ್ನೂ ಓದಿ : ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ಮಾಡಲು ಇಲ್ಲಿ ಕ್ಲಿಕ್ಮಾಡಿ

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...