ಅಹ್ಮದ್ ಪಟೇಲ್ ಕಾಂಗ್ರೆಸ್ ಗೆ ಕರೆ ತಂದಿದ್ದರಿಂದ ಸಿಎಂ ಆದೆ ; ಭಾವುಕರಾದ ಸಿದ್ಧರಾಮಯ್ಯ
ಬೇರೆ ಬೇರೆ ಪಕ್ಷಗಳ ನಾಯಕರನ್ನು ಹೊಂದಾಣಿಸುವ ಕೆಲಸ ಅಹ್ಮದ್ ಪಟೇಲ್ ಮಾಡುತ್ತಿದ್ದರು. ಪಕ್ಷದಲ್ಲಿ ಏನೇ ಬಂದರೂ ಎಲ್ಲವನ್ನೂ ಸಹಿಸಿಕೊಂಡು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದರು
ಬೆಂಗಳೂರು(ನವೆಂಬರ್. 25): ನಾನು ಕಾಂಗ್ರೆಸ್ ಸೇರಲು ಮೂಲ ಕಾರಣ ಅಹ್ಮದ್ ಪಟೇಲ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಅವರು ಇಂದು ನಿಧನ ಹೊಂದಿದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಿಂದ ಹೊರ ಬಂದು ನನ್ನದೆ ಅಹಿಂದ ಪಕ್ಷ ಕಟ್ಟಿಕೊಂಡಿದ್ದೆ. ಬೆಂಗಳೂರಿನ ಪಿರಾನ್ ಎನ್ನುವರು ನನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದರು ಎಂದರು. ಜಾತ್ಯಾತೀತ ತತ್ವಗಳ ಮೇಲೆ ನಂಬಿಕೆ ಇಟ್ಟುಕೊಂಡ ಅವರು, ಕೋಮುವಾದಿಗಳ ವಿರುದ್ಧ ಹೋರಾಡಬೇಕು ಅಂದಿದ್ದರು. ಸೋನಿಯಾ ಗಾಂಧಿ ಕೂಡ ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿದರು. ನಾನು ಪಕ್ಷ ಸೇರಿದ್ದರಿಂದ ನಾನು ಸಿಎಂ ಆಗುವುದಕ್ಕೆ ಸಾಧ್ಯವಾಯಿತು. ನನ್ನ ಅಹಿಂದ ಪಕ್ಷವೇನೂ ಅಧಿಕಾರಕ್ಜೆ ಬರುತ್ತಿರಲಿಲ್ಲ. ಅಹ್ಮದ್ ಪಟೇಲ್ ನನ್ನ ಕಾಂಗ್ರೆಸ್ ಸೇರಿಸಿದ್ದರಿಂದ ಸಿಎಂ ಆಗುವಂತಾಯ್ತು ಎಂದು ತಿಳಿಸಿದರು.
ನಾನು ಅವತ್ತು ಹಾಕಿದ್ದು ಎರಡೇ ಷರತ್ತು ಹಾಕಿದ್ದೆ, ಒಂದು ಸೋನಿಯಾ ಗಾಂಧಿ ಬೆಂಗಳೂರಿಗೆ ಬಂದು ಸ್ವಾಗತಿಸಬೇಕು, ಇನ್ನೊಂದು ನನ್ನ ಜೊತೆ ಇದ್ದ ಏಳೆಂಟು ಜನರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದೆ ಅದಕ್ಕೆ ಅವರು ಒಪ್ಪಿದ್ದರು. ನಿಜವಾದ ರಾಜಕೀಯ ಚಾಣಕ್ಯ ಅಂದ್ರೆ ಅದು ಅಹ್ಮದ್ ಪಟೇಲ್. ಅವರ ಸ್ಥಾನ ತುಂಬುವಂಥವರು ಬೇರೆ ಯಾರೂ ಕಾಣಿಸುತ್ತಿಲ್ಲ ಎಂದು ಹೇಳಿದರು.
ಅಹ್ಮದ್ ಪಟೇಲ್ ಸಾವಿನಿಂದ ಅಪಾರ ನಷ್ಟವಾಗಿದೆ, ಕಾಂಗ್ರೆಸ್ ಒಗ್ಗಟ್ಡು ಐಕ್ಯತೆಗೆ ಆಧಾರ ಸ್ಥಂಭವಾಗಿದ್ದರು. ಯಾವುದೇ ರಾಜಕೀಯ ಸಮಸ್ಯೆಗಳಿದ್ದರೂ ಚಾಕ ಚಕ್ಯತೆಯಿಂದ ಚತುರತೆಯಿಂದ ಬಗೆಹರಿಸುತ್ತಿದ್ದರು. ಕಾಂಗ್ರೆಸ್ ಗಟ್ಟಿಯಾಗಿ ಒಗ್ಗಟ್ಟು ಕಾಪಾಡಿಕೊಂಡು ಬಂದಿದ್ರೆ ಅದಕ್ಕೆ ಅಹ್ಮದ್ ಪಟೇಲ್ ಪಾತ್ರ ದೊಡ್ಡದಾಗಿತ್ತು ಎಂದರು.
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಹ್ಮದ್ ಪಟೇಲ್ ರಲ್ಲಿ ಮೆಚ್ಚಿಕೊಳ್ಳುವಂತ ಬಹಳಷ್ಡು ಗುಣಗಳಿದ್ದವು. ಅವರೊಬ್ಬ ಅತ್ತುತ್ತಮ ಕೇಳುಗರಾಗಿದ್ದು, ತಾವು ಏನು ಹೇಳಬೇಕೋ ಅದನ್ನು ಕೊನೆಗೆ ಹೇಳುತ್ತಿದ್ದರು. ಧಾರ್ಮಿಕತೆ, ಸೆಕ್ಯುಲರ್ ತತ್ವ ಎರಡನ್ನೂ ತೂಗಿಸಿಕೊಂಡು ಹೋಗುತ್ತಿದ್ದರು.
ಬೇರೆ ಬೇರೆ ಪಕ್ಷಗಳ ನಾಯಕರನ್ನು ಹೊಂದಾಣಿಸುವ ಕೆಲಸ ಅಹ್ಮದ್ ಪಟೇಲ್ ಮಾಡುತ್ತಿದ್ದರು. ಪಕ್ಷದಲ್ಲಿ ಏನೇ ಬಂದರೂ ಎಲ್ಲವನ್ನೂ ಸಹಿಸಿಕೊಂಡು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದರು ಎಂದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ