ಬೆಂಗಳೂರು: ಎರಡು ಬಾರಿ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಆಗಿರುವ ಜಗದೀಶ್ ಶೆಟ್ಟರ್ (Former CM Jagadish Shettar) ಯಾಕೆ ಕಾಂಗ್ರೆಸ್ (Congress) ಸೇರಿದರು ಅನ್ನೋ ಚರ್ಚೆಗಳು ನಡೆಯುತ್ತಿವೆ. ಆದ್ರೆ ನಾನು ಕಳೆದ ಆರು ತಿಂಗಳಿನಿಂದ ಅನುಭವಿಸಿದ ವೇದನೆ ಯಾರಿಗೂ ಗೊತ್ತಿಲ್ಲ. 1994ರಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಾ 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾ ಬಂದಿದ್ದೇನೆ. ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿಗಳು ನಡೆದಿವೆ. ಟಿಕೆಟ್ ಸಿಗಲ್ಲ ಎಂದು ಹೇಳಿದಾಗ ಒಬ್ಬ ಹಿರಿಯ ನಾಯಕನಾದ ನನಗೆ ಟಿಕೆಟ್ ನೀಡಲ್ಲ ಎಂದು ಆಘಾತ ಆಯ್ತು. ಆದ್ರೆ ಪಕ್ಷ ನನ್ನನ್ನು ಕಡೆಗಣನೆ ಮಾಡಲಾಯ್ತು ಎಂದು ತಿಳಿಯುತ್ತಿಲ್ಲ ಎಂದರು.
ಟಿಕೆಟ್ ಬಿಡುಗಡೆ ಸಂದರ್ಭದಲ್ಲಿ ಟಿಕೆಟ್ ಕೊಡಲ್ಲ ಎಂದು ಹೇಳಿದರು. ಇದನ್ನು 15 ದಿನದ ಮುಂಚೆಯೇ ಹೇಳಬೇಕಿತ್ತು. ಪಕ್ಷದ ಈ ನಡೆಯಿಂದ ನನಗೆ ಬೇಜಾರು ಆಯ್ತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದು, ಕಟ್ಟಿ ಬೆಳೆಸಿದ ಪಕ್ಷದಿಂದ ನನ್ನ ಒತ್ತಾಯದಿಂದ ಹೊರಗೆ ಹಾಕಲಾಯ್ತು. ಆದ್ದರಿಂದ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದರು.
ಬಿಎಸ್ವೈ ನಂತ್ರ ನಾನೇ ಸೀನಿಯರ್ ಲೀಡರ್
ಇಂದು ಬಿಜೆಪಿ ಕೆಲವು ವ್ಯಕ್ತಿಗಳತ್ತ ಕೇಂದ್ರಿಕೃತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಠರ ಗಮನಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ. ಯಡಿಯೂರಪ್ಪ ನಂತರ ನಾನೇ ಸೀನಿಯರ್ ಲೀಡರ್. ಬಹುಶಃ ಇದನ್ನ ಸಹಿಸಿಕೊಳ್ಳಲು ಕೆಲವರಿಗೆ ಆಗಿಲ್ಲ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಪಕ್ಷದ ಸೀನಿಯರ್ ಲೀಡರ್. ನನ್ನನ್ನು ಪಕ್ಷದಿಂದ ಗೌರವಯುತವಾಗಿ ಕಳುಹಿಸಿ ಕೊಡಿ ಎಂದು ಕೇಳಿಕೊಂಡೆ. ಆದ್ರೆ ಪಕ್ಷ ಹಾಗೇ ಮಾಡಲಿಲ್ಲ. ಬೆಳಗ್ಗೆ ಫೋನ್ ಮಾಡಿ ನಿಮಗೆ ಟಿಕೆಟ್ ಇಲ್ಲ ಹೇಳಿದ್ದರಿಂದ ಬೇಸರ ಆಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ