ರಾಯಚೂರು: ಈ ಬಾರಿಯ ಚುನಾವಣೆಯಲ್ಲಿ (Assembly Election 2023) ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಮುಂದಾಗಿದೆ. 223 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದ ಕಾಂಗ್ರೆಸ್ ಕೆಲವು ಕಡೆ ನಿರೀಕ್ಷಿತ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಅದರಲ್ಲಿ ಒಂದು ಲಿಂಗಸ್ಗೂರು ವಿಧಾನಸಭಾ ಕ್ಷೇತ್ರ (Lingasugur Constituency) ಎಂದು ಹೇಳಲಾಗುತ್ತಿದೆ. ಇದೀಗ ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಎಸ್.ಹೂಲಗೇರಿ (DS Hoolageri) ನಮ್ಮವರಿಂದಲೇ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಹೈಕಮಾಂಡ್ಗೆ ದೂರು ನೀಡುತ್ತೇನೆ ಎಂದು ಡಿ.ಎಸ್.ಹೂಲಿಗೇರಿ ತಿಳಿಸಿದ್ದಾರೆ.
ಎಂಎಲ್ಸಿ ಶರಣಗೌಡ ಬಯ್ಯಾಪೂರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪಮೇಟಿ ಅವರಿಂದ ನನಗೆ ಅನ್ಯಾಯ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ KRPPಗೆ ಮತ ಹಾಕಿ ಎಂದು ಇಬ್ಬರು ಹೇಳಿದ್ದಾರೆ ಅಂತ ಮಾಜಿ ಶಾಸಕ ಹೂಲಿಗೇರಿ ಆರೋಪ ಮಾಡಿದ್ದಾರೆ.
2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಹೂಲಿಗೇರಿ ಆಯ್ಕೆಯಾಗಿದ್ದರು. 2023ರಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ: Chitradurga: ನಾವ್ ಕರೆಂಟ್ ಬಿಲ್ ಕಟ್ಟಲ್ಲ; ಗ್ರಾಮಸ್ಥರ ಪಟ್ಟು; ವಿಡಿಯೋ ವೈರಲ್
ಅಪ್ಪನಿಗೆ ಡಿಸಿಎಂ ಸ್ಥಾನ ಸಿಗಲಿ
ನಮ್ಮ ತಂದೆ ಶಿವಾನಂದ ಪಾಟೀಲ್ (Shivanand Patil) ಅವರಿಗೆ ಡಿಸಿಎಂ ಆಗುವ ಎಲ್ಲ ಅರ್ಹತೆ ಇದೆ. ತಂದೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿರಿಯ ರಾಜಕಾರಣಿಗಳಾಗಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ (Congress High Command) ಮನಸ್ಸು ಮಾಡಿದರೆ ಅದು ಸಾಧ್ಯ. ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಸಂಯುಕ್ತಾ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ