Sumalatha Ambareesh: ‘ಅಂಬರೀಶ್ ತೋರಿಸಿದ ದಾರಿಯಲ್ಲೇ ಸಾಗ್ತಿದ್ದೇನೆ’, ಸಿಕ್ಕವರಿಗೆಲ್ಲಾ ಉತ್ತರ ಕೊಟ್ರೆ ನನ್ನ ಗೌರವಕ್ಕೇ ಧಕ್ಕೆ !

Sumalatha Ambareesh: ನನ್ನ ವಿರುದ್ಧ ಅನೇಕರು ನಾನಾ ಬಗೆಯಲ್ಲಿ ಈ ಹಿಂದೆಯೂ ಮಾತನಾಡಿದ್ದಾರೆ, ಈಗಲೂ ಮಾತನಾಡುತ್ತಿದ್ದಾರೆ ಬಹುಶಃ ಮುಂದೆಯೂ ಮಾತನಾಡುತ್ತಾರೆ. ಅದು ಅವರ ಸಂಸ್ಕಾರವನ್ನು ತೋರಿಸುತ್ತದೆ. ನನ್ನ ಸಂಸ್ಕಾರ ಅದಲ್ಲ, ಎಲ್ಲರ ಮಾತಿಗೂ ಪ್ರತಿಕ್ರಿಯಿಸೋದು, ಎಲ್ಲದಕ್ಕೂ ಉತ್ತರ ಕೊಡೋದು ನನ್ನ ಕೆಲಸ ಅಲ್ಲ. ಅದು ನನ್ನ ಡಿಗ್ನಿಟಿಗೆ, ನನ್ನ ಗೌರವಕ್ಕೆ ಧಕ್ಕೆ ತರುವಂಥಾ ಕೆಲಸ

ಸುಮಲತಾ - ಅಂಬರೀಶ್

ಸುಮಲತಾ - ಅಂಬರೀಶ್

  • Share this:
Sumalatha Ambareesh: ಕಳೆದ ಕೆಲವು ದಿನಗಳಿಂದ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಮಾತಿನ ಸಮರ ನಡೆಯುತ್ತಿರುವುದು ಗೊತ್ತೇ ಇದೆ. ಸದ್ಯಕ್ಕೆ ಇದೆಲ್ಲವೂ ಸ್ವಲ್ಪ ತಣ್ಣಗಾದಂತೆ ಕಂಡರೂ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ನಡೆಯುತ್ತಿದೆ ಎನಿಸತ್ತಿದೆ. ಆದ್ರೆ ಈಗ ಕೆಲ ದಿನಗಳ ಹಿಂದೆ ಸಂವಾದವೊಂದರಲ್ಲಿ ಭಾಗವಹಿಸಿಸದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ತಾನು ಇಷ್ಟು ದಿಟ್ಟವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರ ಎದುರು ಮಾತನಾಡುವುದಕ್ಕೆ ಸಾಧ್ಯವಾಗಿರೋದು ಮಂಡ್ಯ ಜನರ ಬೆಂಬಲ, ಸತ್ಯ ಮತ್ತು ಅಂಬರೀಶ್​ ಇಂದ ಎಂದಿದ್ದಾರೆ. 

ರೆಬೆಲ್ ಸ್ಟಾರ್ ಅಂಬರೀಶ್ ಇರುವವರೆಗೆ ಅವರ ಬೆನ್ನುಲುಬಾಗಿ ಜೊತೆಗಿದ್ದವರು ಸುಮಲತಾ. ರಾಜಕೀಯದ ವಿಚಾರವಾಗಿ ಎಂದೂ ಮುಂಚೂಣಿಗೆ ಬರದ ಆಕೆ ಅಂಬರೀಶ್​ ಜೊತೆ ಸದಾ ಗಟ್ಟಿಯಾಗಿ ನಿಂತವರು. ಹಾಗಾಗಿ ಮಂಡ್ಯದ ಜನರಿಗೆ ಸುಮಲತಾ ಹೊಸಬರು ಎಂದು ಎನಿಸಲೇ ಇಲ್ಲ. ಅಂಬರೀಶ್ ಧಿಡೀರನೆ ನಿಧನರಾದ ನಂತರ ಮೊಟ್ಟಮೊದಲ ಬಾರಿಗೆ ರಾಜಕಾರಣದ ಅಖಾಡಕ್ಕೆ ಇಳಿದ ಸುಮಲತಾ ಚೊಚ್ಚಲ ಚುನಾವಣೆಯಲ್ಲೇ ಜಯಭೇರಿ ಬಾರಿಸಿದರು.

ಇದನ್ನೂ ಓದಿ: HDK: ರೆಬೆಲ್ ಸ್ಟಾರ್ ಎದುರು ಕೈಕಟ್ಟಿ ನಿಂತ ಕುಮಾರಣ್ಣ, 'ಹುಲಿ ಮುಂದೆ ಇಲಿ ಎಂದ ಫ್ಯಾನ್ಸ್, ನಾ ಎಲ್ಲಾ ಕಡೆ ಹೀಗೇ ಎಂದ ಎಚ್ಡಿಕೆ !

ಆದರೆ ಆರಂಭದಲ್ಲಿ ತಾನು ರಾಜಕಾರಣದ ಬಗ್ಗೆಯಾಗಲಿ ಸಂಸದೆಯಾಗುವ ತನ್ನ ಜವಾಬ್ದಾರಿಯ ಬಗ್ಗೆಯಾಗಲಿ ಹೆಚ್ಚು ಸೀರಿಯಸ್ ಆಗಿ ಇರಲಿಲ್ಲ ಎನ್ನುತ್ತಾರೆ ಸುಮಲತಾ ಅಂಬರೀಶ್. ನಟಿಯಾಗಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಆಕೆ ಚುನಾವಣೆ ಎದುರಿಸಿದ್ದು ವಿಷಾದದ ಸನ್ನಿವೇಶದಲ್ಲಿ. ಅಂಬರೀಶ್ ಹೋದ ದುಃಖ ಮಡುಗಟ್ಟಿದ್ದಾಗಲೇ ಚುನಾವಣೆ ಎದುರಿಸೋಕೆ ಸ್ವತಂತ್ರ ಅಭ್ಯರ್ಥಿಯಾಗಿ ಮುಂದೆ ಬಂದವರು ಸುಮಲತಾ. ಮಂಡ್ಯದ ಮಗಳಿಗೆ ಓಟಿನ ಭಿಕ್ಷೆ ನೀಡಿ ಎಂದು ಸೆರಗೊಡ್ಡಿ ಬೇಡಿಕೊಂಡಿದ್ದ ಆಕೆಯನ್ನು ಮಂಡ್ಯ ಜನರು ನಿಜಕ್ಕೂ ಕೈಬಿಡಲಿಲ್ಲ.

ನಾನು ಸಂಸತ್ತಿನ ಮೆಟ್ಟಿಲು ಹತ್ತಿದ ದಿನ ನನಗೆ ಈ ಪದವಿಯ ಸೀರಿಯಸ್​ನೆಸ್ ಸಂಪೂರ್ಣವಾಗಿ ಅರ್ಥವಾಯಿತು, ನನ್ನ ಜವಾಬ್ದಾರಿಗಳು ನನ್ನನ್ನು ಎಚ್ಚರಿಸಿದಂತೆ ಆಯಿತು ಎಂದಿದ್ದಾರೆ ಸುಮಲತಾ. ತನ್ನ ವಿರುದ್ಧ ಅನೇಕರು ನಾನಾ ಬಗೆಯಲ್ಲಿ ಈ ಹಿಂದೆಯೂ ಮಾತನಾಡಿದ್ದಾರೆ, ಈಗಲೂ ಮಾತನಾಡುತ್ತಿದ್ದಾರೆ ಬಹುಶಃ ಮುಂದೆಯೂ ಮಾತನಾಡುತ್ತಾರೆ. ಅದು ಅವರ ಸಂಸ್ಕಾರವನ್ನು ತೋರಿಸುತ್ತದೆ. ನನ್ನ ಸಂಸ್ಕಾರ ಅದಲ್ಲ, ಎಲ್ಲರ ಮಾತಿಗೂ ಪ್ರತಿಕ್ರಿಯಿಸೋದು, ಎಲ್ಲದಕ್ಕೂ ಉತ್ತರ ಕೊಡೋದು ನನ್ನ ಕೆಲಸ ಅಲ್ಲ. ಅದು ನನ್ನ ಡಿಗ್ನಿಟಿಗೆ, ನನ್ನ ಗೌರವಕ್ಕೆ ಧಕ್ಕೆ ತರುವಂಥಾ ಕೆಲಸ ಎಂದೇ ನಾನು ನಂಬಿದ್ದೇನೆ. ಸಿಕ್ಕವರಿಗೆಲ್ಲಾ ಉತ್ತರಿಸುವುದು ನನ್ನ ಘನತೆಗಿಂತ ಕಡಿಮೆ ವಿಚಾರ. ಅದಕ್ಕೇ ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತ್ರ ಮಾತನಾಡುತ್ತೇನೆ. ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇನೆ, ಮಂಡ್ಯ ಜನರು ನನ್ನನ್ನು ನಡೆಸುತ್ತಿದ್ದಾರೆ. ನಾನೇನಾದ್ರೂ ಉತ್ತರಿಸಬೇಕು ಅಂದ್ರೆ ಅದು ಮಂಡ್ಯ ಜನರಿಗೆ ಮಾತ್ರ, ಇನ್ಯಾರಿಗೂ ಅಲ್ಲ ಎಂದು ಖಡಕ್ ಮಾತನ್ನಾಡಿದ್ರು ಸುಮಲತಾ ಅಂಬರೀಶ್.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: