ನಾನೂ ಸಿಎಂ ಸ್ಥಾನದ ಆಕಾಂಕ್ಷಿ; ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್

ತನ್ವೀರ್ ಸೇಠ್

ತನ್ವೀರ್ ಸೇಠ್

ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಸಿಎಂ ಆಗಬೇಕು ಎಂಬುದು ನನ್ನ ಆಸೆ. ಹಾಗಂತ ಅದು ಈಡೇರಲೇಬೇಕು ಅಂತ ಏನಿಲ್ಲ ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

  • Share this:

ಮೈಸೂರು (ನ. 1): ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪರ ಕಾರ್ಯಕರ್ತರು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಶಾಸಕ ತನ್ವೀರ್​ ಸೇಠ್​ ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಸಿಎಂ ಆಗಬೇಕು ಎಂಬುದು ನನ್ನ ಆಸೆ. ಹಾಗಂತ ಅದು ಈಡೇರಲೇಬೇಕು ಅಂತ ಏನಿಲ್ಲ ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.


ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಆಗಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದು ಮೈಸೂರಿನಲ್ಲಿ ಸಿಎಂ ಸ್ಥಾನದ ಬಗ್ಗೆ ಶಾಸಕ ತನ್ವೀರ್​ ಸೇಠ್ ಮಾರ್ಮಿಕ ಹೇಳಿಕೆ ನೀಡಿದ್ದಾರೆ.


ಆರ್​ಆರ್​ ನಗರ, ಶಿರಾ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತನ್ವೀರ್ ಸೇಠ್, ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಗುರಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವರಿಷ್ಠರ ನಿರ್ಧಾರಕ್ಕೆ ಬದ್ದರಾಗೋಣ ಎಂದು ಹೇಳಿದ್ದಾರೆ.


ಇದನ್ನೂ ಓದಿ: Kannada Rajyotsava: ತಂತ್ರಜ್ಞಾನದ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸೋಣ; ಸಿಎಂ ಯಡಿಯೂರಪ್ಪ ಕರೆ


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಜಮೀರ್ ಅಹಮದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತನ್ವೀರ್​ ಸೇಠ್, ಜಮೀರ್ ಅಹಮದ್​​ಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಾವು ಶ್ರಮಿಸಬೇಕು‌. ಆಗ ಯಾರು ಸಿಎಂ ಆಗ್ತಾರೆ, ಆಗಬೇಕು ಎಂಬುದು ವರಿಷ್ಠರು ನಿರ್ಧಾರ ಮಾಡ್ತಾರೆ ಎಂದು ಜಮೀರ್ ಅಹಮದ್‌ಗೆ ಟಾಂಗ್ ನೀಡಿದ್ದಾರೆ.


ಕೂಸು ಹುಟ್ಟೋಕೂ ಮೊದಲು ಗಂಡು ಹುಟ್ಟುತ್ತೆ ಎಂದುಕೊಂಡಿರುತ್ತೇವೆ. ನಂತರ ಹೆಣ್ಣು ಮಗುವಾದರೆ ಏನು ಮಾಡಲು ಆಗುತ್ತದೆ? ಹಾಗೇ ಉಪ ಚುನಾವಣೆ ಬಳಿಕ ನಾವು ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದೇವೆ. ಆಮೇಲೆ ಏನಾಗುತ್ತೋ ಯಾರಿಗೆ ಗೊತ್ತು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

Published by:Sushma Chakre
First published: