ಈಗಿನ ಪರಿಸ್ಥಿತಿಯಲ್ಲಿ ನನಗೆ ಡಿಸಿಎಂ ಸ್ಥಾನ ಸಿಗಲ್ಲ; ಸಚಿವ ಕೆ.ಎಸ್.ಈಶ್ವರಪ್ಪ

ರಾಮನಗರಕ್ಕೆ ಕೊಟ್ಟ ಅನುದಾನ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್,ಜೆಡಿಎಸ್ ಅಂತ ನಾವು ಎಲ್ಲೂ ನೋಡಿಲ್ಲ. ರಾಜ್ಯದ ಅಭಿವೃದ್ಧಿಯಷ್ಟೇ ಮುಖ್ಯ. ಎಲ್ಲ ಶಾಸಕರಿಗೂ ನಾವು ನೆರವು ಕೊಟ್ಟಿದ್ದೇವೆ ಎಂದರು.

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಬೆಂಗಳೂರು(ಡಿ.12):  ಕರ್ನಾಟಕದ ಉಪಚುನಾವಣೆ ಫಲಿತಾಂಶ ಪ್ರಧಾನಿ ಮೋದಿ ಮತ್ತು ಅಮಿತ್​​ ಶಾ ಸಂತೋಷಪಟ್ಟಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ  ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಯಾವಾಗ ಏನು ಬೇಕಿಲ್ಲ. ಸಂಪುಟ ವಿಸ್ತರಣೆ ಆಗುತ್ತೆ, ಎಲ್ಲರಿಗೂ ಅವಕಾಶ ಸಿಗುತ್ತೆ. ವಿಳಂಬವಾದರೂ ಎಲ್ಲವೂ ಸರಿ ಹೋಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ; ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್

ಈಶ್ವರಪ್ಪಗೆ ಡಿಸಿಎಂ ಹುದ್ದೆ ಸಿಗುತ್ತಾ ಎಂಬ ವಿಚಾರವಾಗಿ ಸಚಿವರು ಪ್ರತಿಕ್ರಿಯೆ ನೀಡಿದರು. ಈಗಿನ ಪರಿಸ್ಥಿತಿಯಲ್ಲಿ ನನಗೆ ಅವಕಾಶವಿಲ್ಲ. ನಾನು ಕೊಡಿ ಅಂತ ಕೇಳೋಕು ಹೋಗಲ್ಲ. ಸರ್ಕಾರ ರಚನೆಗೆ ಪೂರ್ಣ ಸಹಕಾರ ಕೊಡಬೇಕು. ಈಶ್ವರಪ್ಪ ಡಿಸಿಎಂ ಆಗಬೇಕು ಎನ್ನುವುದು ಇಲ್ಲ ಎಂದು ಹೇಳಿದರು.

ರಾಮನಗರಕ್ಕೆ ಕೊಟ್ಟ ಅನುದಾನ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್,ಜೆಡಿಎಸ್ ಅಂತ ನಾವು ಎಲ್ಲೂ ನೋಡಿಲ್ಲ. ರಾಜ್ಯದ ಅಭಿವೃದ್ಧಿಯಷ್ಟೇ ಮುಖ್ಯ. ಎಲ್ಲ ಶಾಸಕರಿಗೂ ನಾವು ನೆರವು ಕೊಟ್ಟಿದ್ದೇವೆ ಎಂದರು.

ನಿಮ್ಮ ಹಕ್ಕುಗಳನ್ನು ಯಾರೂ ಕಸಿದುಕೊಳ್ಳುವುದಿಲ್ಲ; ಅಸ್ಸಾಂ ಜನತೆಗೆ ಪಿಎಂ ಮೋದಿ ಭರವಸೆ

 
Published by:Latha CG
First published: