ಇದುವರೆಗೂ ಜೆಡಿಎಸ್ ಬಿಟ್ಟಿಲ್ಲ - ನಮ್ಮ ಮೌಲ್ಯಕ್ಕೆ ವಿರುದ್ಧವಾದ್ರೆ ಖಂಡಿತಾ ಪಕ್ಷ ಬಿಡ್ತೇನೆ ; ಬಸವರಾಜ ಹೊರಟ್ಟಿ

ರಾಜಕೀಯದಲ್ಲಿ ಮೌಲ್ಯ ಎನ್ನುವುದು ಇವತ್ತು ಇಲ್ಲ, ಮೌಲ್ಯ ಬಿಟ್ಟು ಎಲ್ಲ ಇದೆ. ನಾವೂ ಸಹ ಜನತಾ ಪರಿವಾರದವರನ್ನು ಕೂಡಿಸಲು ಬಹಳ ಪ್ರಯತ್ನ ಮಾಡಿದ್ದೇವೆ.

G Hareeshkumar | news18-kannada
Updated:December 12, 2019, 4:38 PM IST
ಇದುವರೆಗೂ ಜೆಡಿಎಸ್ ಬಿಟ್ಟಿಲ್ಲ - ನಮ್ಮ ಮೌಲ್ಯಕ್ಕೆ ವಿರುದ್ಧವಾದ್ರೆ ಖಂಡಿತಾ ಪಕ್ಷ ಬಿಡ್ತೇನೆ ; ಬಸವರಾಜ ಹೊರಟ್ಟಿ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • Share this:
ಗದಗ(ಡಿ.12): ಇವತ್ತಿನವರೆಗೂ ನಾನು ಪಕ್ಷ ಬಿಟ್ಟಿಲ್ಲ, ಅಂತಹ ಪ್ರಸಂಗ ಬರುವುದಿಲ್ಲ. ಇದ್ದವರನ್ನೇ ಕರೆದುಕೊಂಡು ಪಕ್ಷಕ್ಕೆ ಸೇರಿಸೋ ಕೆಲಸ ಮಾಡ್ತೀನಿ. ನಮ್ಮ ಮೌಲ್ಯಕ್ಕೆ ವಿರುದ್ಧವಾದ್ರೆ ಮಾತ್ರ ನಾನು ಪಕ್ಷ ಬಿಡುತ್ತೇನೆ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ್​​​ ಹೊರಟ್ಟಿ ಹೇಳಿದರು. 

ಮತ್ತೆ ಮೂರು ಡಿಸಿಎಂ ಮಾಡೋ ವಿಚಾರ, ಒಂದೇಕೆ‌ ಹತ್ತು ಮಾಡಲಿ‌ ಎಂದ ಅವರು, ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವುದು ಜಾಹೀರಾಗಿದೆ. ಆದರೂ, ಜನ ಅವರಿಗೆ ಓಟು ಹಾಕಿದ್ದಾರಲ್ಲ. ಜನರೂ ಹಾಗೆ ಆಗಿದ್ದಾರೆ, ನಾವೂ ಹಾಗೆ ಆಗಿದ್ದೀವಿ. ಯಾವುದಕ್ಕೆ ಕೆಲಸ ಮಾಡಬೇಕು ಯಾವುದಕ್ಕೆ ಮಾಡಬಾರದು ಎನ್ನೋದಿಲ್ಲ. ಜನ ಓಟು ಹಾಕುತ್ತಾರೆ ರಾಜಕಾರಣ ಕಲುಷಿತವಾಗಿದೆ ಎಂದು ತಿಳಿಸಿದರು.

ಮಹಿಮಾ ಪಟೇಲ್ ಹೇಳೋದು ನೂರಕ್ಕೆ‌ ನೂರು ಒಪ್ಪುತ್ತೀನಿ. ರಾಜಕೀಯದಲ್ಲಿ ಮೌಲ್ಯ ಎನ್ನುವುದು ಇವತ್ತು ಇಲ್ಲ, ಮೌಲ್ಯ ಬಿಟ್ಟು ಎಲ್ಲ ಇದೆ. ನಾವೂ ಸಹ ಜನತಾ ಪರಿವಾರದವರನ್ನು ಕೂಡಿಸಲು ಬಹಳ ಪ್ರಯತ್ನ ಮಾಡಿದ್ದೇವೆ. ಈಗಿನ ಹೊಲಸು ರಾಜಕಾರಣದಲ್ಲಿ ಅವರು ಹೇಳಿದಷ್ಟು ಸರಳವಾಗಿಲ್ಲ. ಎಲ್ಲರೂ ಕೈ ಜೋಡಿಸಿ ಮಾಡೋದಕ್ಕೆ ತಯಾರಾಗಿದ್ದೇವೆ ಎಂದರು.

ನಾನು ವಿಚಾರ ಮಾಡಿರುವುದು ಉತ್ತರ ಕರ್ನಾಟಕ ಭಾಗದ ಎಲ್ಲಾ ಪಕ್ಷದವರನ್ನು ಸೇರಿಸಿಕೊಂಡು ನಮ್ಮ‌ ಹೋರಾಟಕ್ಕೆ ನನ್ನದು ಸಂಪೂರ್ಣ ಬೆಂಬಲ ಇದೆ ಎಂದರು.

ಗದಗನಿಂದಲೇ ಹೊಸ ಚಿಂತನೆ ಆರಂಭ : ಮಾಜಿ ಶಾಸಕ ಮಹಿಮಾ ಪಟೇಲ್

ರಾಜಕಾರಣಲ್ಲಿ ಬದ್ಧತೆ ಜವಾಬ್ದಾರಿ ತರುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿರಿಯ ರಾಜಕಾರಣಿಗಳಾದ ಎಸ್ ಎಸ್ ಪಾಟೀಲ್, ಎಚ್ ಕೆ ಪಾಟೀಲ್, ಬಸವರಾಜ್ ಹೊರಟ್ಟಿ ಆಲೋಚಿಸಿ ಈ ಬಗೆಯ ಕಾರ್ಯಕ್ರಮ‌ ರೂಪಿಸಿದ್ದಾರೆ. ಜನರಿಗಾಗಿ ಮಾಡುವುದು ರಾಜಕಾರಣ ಎನ್ನೋದನ್ನು ಜನರಿಗೆ ಅರ್ಥ ಮಾಡಿಸುತ್ತೇನೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.

ಇದನ್ನೂ ಓದಿ : ನೂತನ ಶಾಸಕರಿಗೆ ಸದ್ಯಕ್ಕಿಲ್ಲ ಸಚಿವ ಭಾಗ್ಯ; ಮುಂದಿನ ವಾರ ಸಂಪುಟ ವಿಸ್ತರಣೆ ಸಾಧ್ಯತೆಎಸ್ ಎಸ್ ಪಾಟೀಲ್ ರ ಮುಖಂಡತ್ವದಲ್ಲಿ ರಾಜ್ಯದಾದ್ಯಂತ ಹೊಸ ಚಿಂತನೆ ತರೋ ವಿಚಾರವಿದೆ. ಗದಗನಿಂದಲೇ ಹೊಸ ಚಿಂತನೆ ಆರಂಭವಾಗುತ್ತೆ. ಇದನ್ನು ಒಂದು‌ ಪಕ್ಷಕ್ಕೆ ಸೀಮಿತ ಮಾಡಿಲ್ಲ ಎಲ್ಲಾ ಪಕ್ಷಗಳ ಒಳ್ಳೆಯ ಆಲೋಚನೆಯಿರುವವರನ್ನು‌ ಇಲ್ಲಿ ಸೇರಿಸಿದ್ದೇವೆ. ಎಲ್ಲಾ ಪಕ್ಷದಲ್ಲೂ‌ ಒಳ್ಳೆ ಆಲೋಚನೆ ಮಾಡುವವರು ಇದ್ದಾರೆ. ಅಂಥವರನ್ನು ಜೊತೆಗೆ ತಗೊಂಡು ಬರೋದು ನಮ್ಮ‌ ಉದ್ದೇಶ ಎಂದರು.

 

 
First published: December 12, 2019, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading