ಕೈ ಶಾಸಕರ ಮನವೊಲಿಸಬೇಕಾದ ಅಗತ್ಯವಿಲ್ಲ, ಯಾರ ಆಟ ಹೇಗೆ ನಡೀತಿದೆ ಎಂಬುದು ಗೊತ್ತು; ಸಚಿವ ಡಿಕೆ ಶಿವಕುಮಾರ್

ಬಿಜೆಪಿ ಏನು ಮಾಡುತ್ತಿದೆ, ಅದಕ್ಕೆ ಯಾರು ಯಾವ ರೀತಿಯ ಸ್ಪಂದನೆ ನೀಡುತ್ತಿದ್ದಾರೆ ಎಂಬುದು ಗೊತ್ತಿದೆ.  ಯಾರೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಯಾರೆಲ್ಲ ಯಾವ ಚೆಸ್​ ಪಾನ್ ಮೂವ್ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲದ ವಿಷಯವೇನಲ್ಲ ಎಂದು ಸಚಿವ ಡಿಕೆಶಿ ಹೇಳಿದ್ದಾರೆ.

Sushma Chakre | news18
Updated:July 2, 2019, 11:48 AM IST
ಕೈ ಶಾಸಕರ ಮನವೊಲಿಸಬೇಕಾದ ಅಗತ್ಯವಿಲ್ಲ, ಯಾರ ಆಟ ಹೇಗೆ ನಡೀತಿದೆ ಎಂಬುದು ಗೊತ್ತು; ಸಚಿವ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
  • News18
  • Last Updated: July 2, 2019, 11:48 AM IST
  • Share this:
ಬೆಂಗಳೂರು (ಜು.2): ನಮ್ಮ ಪಕ್ಷದ ಯಾವ ಶಾಸಕರನ್ನೂ ಮನವೊಲಿಸುವ ಪ್ರಯತ್ನ ಮಾಡಬೇಕಾಗಿಲ್ಲ. ಯಾರೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಯಾರ ಆಟ ಹೇಗೆ ನಡೀತಿದೆ ಅನ್ನೋದು ನಮಗೆ ಗೊತ್ತಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾರೆಲ್ಲ ಯಾವ ಚೆಸ್​ ಪಾನ್ ಮೂವ್ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲದ ವಿಷಯವೇನಲ್ಲ. ಎಲ್ಲರ ಆಟವೂ ನನಗೆ ಚೆನ್ನಾಗಿ ಗೊತ್ತಿದೆ. ಸರ್ಕಾರ ಉಳಿಯಬೇಕು ಎಂಬುದು ಎಲ್ಲರ ಆಶಯ. ಬಿಜೆಪಿ ಏನು ಮಾಡುತ್ತಿದೆ, ಅದಕ್ಕೆ ಯಾರು ಯಾವ ರೀತಿಯ ಸ್ಪಂದನೆ ನೀಡುತ್ತಿದ್ದಾರೆ ಎಂಬುದು ಗೊತ್ತಿದೆ.  ಯಾರೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಆನಂದ್​ ಸಿಂಗ್ ರಾಜೀನಾಮೆ ವಾಪಾಸ್​ ಪಡೆಯುವ ವಿಶ್ವಾಸ ನನಗಿದೆ ಎಂದು ಅತೃಪ್ತರ ರಾಜೀನಾಮೆಗೆ ಸಚಿವ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಆಪರೇಷನ್ ಕಮಲ ವಿಚಾರದಲ್ಲಿ ಸೈಲೆಂಟಾದ ಡಿಕೆಶಿ; ಟ್ರಬಲ್ ಶೂಟರ್ ಮೌನಕ್ಕೆ ಕಾರಣವೇನು?

ಶಾಸಕ ನಾಗೇಂದ್ರ ಬುದ್ದಿವಂತ, ಪ್ರಜ್ಞಾವಂತ. ಅವರು ಕಾಂಗ್ರೆಸ್ ಬಿಡೋ ಪ್ರಶ್ನೆಯೇ ಇಲ್ಲ. ಮಹೇಶ್​ ಕುಮಟಳ್ಳಿ ಕೂಡ ಹುಟ್ಟು ಕಾಂಗ್ರೆಸ್ಸಿಗ. ಅವರು ಪಕ್ಷ ಬಿಡುವ ನಿರ್ಧಾರ ಮಾಡಲಾರರು. ದೆಹಲಿಯಲ್ಲೇ ಇದ್ದುಕೊಂಡು ಏನು ಮಾಡಬೇಕೋ ಅದನ್ನು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಮಾಡಿದ್ದಾರೆ. ನಮ್ಮ ಸರ್ಕಾರಕ್ಕೆ ಏನೂ ಆಗಲು ಸಾಧ್ಯವಿಲ್ಲ. ಸಿಎಂ ಎಲ್ಲ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ದಿನೇಶ್​ ಅವರಿಗೆ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು  ಗೊತ್ತಿದೆ. ಅವರಿಗೂ ಖಾಸಗಿ ಜೀವನ ಇದೆ. ಅದಕ್ಕೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ  ಎಂದಿದ್ದಾರೆ. ಈ ಮೂಲಕ ನಿನ್ನೆಯಿಂದ ಮೌನಕ್ಕೆ ಶರಣಾಗಿದ್ದ ಡಿ.ಕೆ. ಶಿವಕುಮಾರ್​ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ವರದಿ: ಶ್ರೀನಿವಾಸ್​ ಹಳಕಟ್ಟಿ

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ