ನಾನು ಕೊಟ್ಟ ಲಿಂಬೆಹಣ್ಣನ್ನೇ ರಾಜನಾಥ ಸಿಂಗ್​ ರಫೇಲ್ ವಿಮಾನದ ಮೇಲಿಟ್ಟಿದ್ದು; ಬಿಜೆಪಿ ನಾಯಕರ ಕಾಲೆಳೆದ ಹೆಚ್​.ಡಿ. ರೇವಣ್ಣ

ಇನ್ನೇನು ಸದನ ಮುಗಿಯುವ ಹಂತ ತಲುಪುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವ ಹೆಚ್​.ಡಿ. ರೇವಣ್ಣನವರನ್ನು ತಮಾಷೆ ಮಾಡಿದ ಸಿದ್ದರಾಮಯ್ಯ, ಈಗ ಬಂದ್ರೇಯೇನಪ್ಪ... ರೇವಣ್ಣ ಲಿಂಬೆಹಣ್ಣನ್ನು ತಂದುಬಿಟ್ರೆ ಕಷ್ಟ ಎಂದು ಕೆಣಕಿದರು.

Sushma Chakre | news18-kannada
Updated:October 10, 2019, 5:38 PM IST
ನಾನು ಕೊಟ್ಟ ಲಿಂಬೆಹಣ್ಣನ್ನೇ ರಾಜನಾಥ ಸಿಂಗ್​ ರಫೇಲ್ ವಿಮಾನದ ಮೇಲಿಟ್ಟಿದ್ದು; ಬಿಜೆಪಿ ನಾಯಕರ ಕಾಲೆಳೆದ ಹೆಚ್​.ಡಿ. ರೇವಣ್ಣ
ಎಚ್​.ಡಿ. ರೇವಣ್ಣ
Sushma Chakre | news18-kannada
Updated: October 10, 2019, 5:38 PM IST
ಬೆಂಗಳೂರು (ಅ. 10): ಇಂದಿನಿಂದ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಹಲವಾರು ಸ್ವಾರಸ್ಯಕರ ಘಟನೆಗಳಿಗೆ ಇಂದಿನ ಸದನ ಸಾಕ್ಷಿಯಾಯಿತು.  ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಆಡಳಿತ ಪಕ್ಷದ ನಾಯಕರು, ಜೆಡಿಎಸ್​ ಶಾಸಕರು ಹಾಗೂ ತಮ್ಮ ಪಕ್ಷದ ಶಾಸಕರ ಕಾಲೆಳೆದು ಸದನದಲ್ಲಿ ನಗು ಹೊಮ್ಮುವಂತೆ ಮಾಡಿದರು. ಇದರ ನಡುವೆ ಲಿಂಬೆಹಣ್ಣಿನ ಬಗ್ಗೆಯೇ ಚರ್ಚೆಗಳು ನಡೆದಿದ್ದು ವಿಶೇಷವಾಗಿತ್ತು.

ಇನ್ನೇನು ಸದನ ಮುಗಿಯುವ ಹಂತ ತಲುಪುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವ ಹೆಚ್​.ಡಿ. ರೇವಣ್ಣನವರನ್ನು ತಮಾಷೆ ಮಾಡಿದ ಸಿದ್ದರಾಮಯ್ಯ, 'ಈಗ ಬಂದ್ರೇಯೇನಪ್ಪ... ರೇವಣ್ಣ ಲಿಂಬೆಹಣ್ಣನ್ನು ತಂದುಬಿಟ್ರೆ ಕಷ್ಟ' ಎಂದು ಕೆಣಕಿದರು. ಅದಕ್ಕೆ ಪ್ರತಿಯಾಗಿ ಸ್ಪೀಕರ್ ಕಾಗೇರಿ 'ರೇವಣ್ಣನವರು ತಮ್ಮ ಲಿಂಬೆಹಣ್ಣನ್ನು ನಿಮಗೆ ಕೊಟ್ಟಿದ್ದಾರೆ ಎಂದು ನನಗೆ ಸುದ್ದಿ ಬಂದಿದೆ' ಎಂದು ಸಿದ್ದರಾಮಯ್ಯನವರ ಕಾಲೆಳೆದರು.

ಅಷ್ಟರಲ್ಲಿ ಎದ್ದುನಿಂತ ಹೆಚ್​.ಡಿ. ರೇವಣ್ಣ 'ಈಗ ನನ್ನ ಬಳಿ ಲಿಂಬೆಹಣ್ಣಿಲ್ಲ. ನನ್ನ ಬಳಿಯಿದ್ದ ಲಿಂಬೆಹಣ್ಣುಗಳನ್ನು ನಿಮ್ಮ ಪಕ್ಷದ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರಿಗೆ ಕೊಟ್ಟಿದ್ದೆ. ನಾನು ಕೊಟ್ಟ ಲಿಂಬೆಹಣ್ಣನ್ನು ತಗೊಂಡು ಹೋಗಿ ರಾಜನಾಥ ಸಿಂಗ್ ರಫೇಲ್ ವಿಮಾನದ ಮೇಲೆ ಇಟ್ಟವ್ರೆ ' ಎನ್ನುತ್ತಿದ್ದಂತೆ ಸದನದಲ್ಲಿದ್ದವರು ನಗೆಗಡಲಲ್ಲಿ ಮುಳುಗಿದರು.

ಸದನ ವಿಸ್ತರಣೆಗೆ ಒಪ್ಪದ ಸ್ಪೀಕರ್​; ನೆರೆ ಚರ್ಚೆಗೂ ಇಲ್ಲ ಅವಕಾಶ; ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ 3 ದಿನ ಮಾತ್ರ!

ಫ್ರಾನ್ಸ್​ನಲ್ಲಿ ಸಿದ್ಧಗೊಂಡಿದ್ದ ರಫೇಲ್ ಯುದ್ಧವಿಮಾನಕ್ಕೆ ಪೂಜೆ ಸಲ್ಲಿಸುವ ವೇಳೆ ಕೇಂದ್ರ ರಕ್ಷಣಾ ಸಚಿವ ವಿಮಾನದ ಚಕ್ರಗಳ ಕೆಳಗೆ ಎರಡು ಲಿಂಬೆಹಣ್ಣುಗಳನ್ನು ಇಟ್ಟಿದ್ದರು. ದಸರಾದ ಆಯುಧಪೂಜೆ ವೇಳೆ ರಫೇಲ್ ಯುದ್ಧವಿಮಾನದ ಮೇಲೆ ಓಂ ಎಂಬ ಅಕ್ಷರಗಳನ್ನು ಬರೆದು, ಹೂವುಗಳನ್ನಿಟ್ಟು ಚಕ್ರದ ಬಳಿ 2 ಲಿಂಬೆಹಣ್ಣುಗಳನ್ನಿಡಲಾಗಿತ್ತು. ಯಾವುದೇ ಕೆಟ್ಟ ದೃಷ್ಟಿ ತಾಕದಂತೆ ಬೇರೆ ವಾಹನಗಳಿಗೆ ಈ ರೀತಿ ಪೂಜೆ ಮಾಡುವುದು ಸಾಮಾನ್ಯ. ಆದರೆ, ಸಚಿವ ರಾಜನಾಥ್ ಸಿಂಗ್ ಯುದ್ಧವಿಮಾನಕ್ಕೂ ಈ ರೀತಿ ಪೂಜೆ ಸಲ್ಲಿಸಿ ಲಿಂಬೆಹಣ್ಣಗಳನ್ನು ಇಟ್ಟಿದ್ದು ಟ್ವಿಟ್ಟರ್​ನಲ್ಲಿ ಟ್ರೋಲ್ ಆಗಿತ್ತು.ಭಾರತವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಲು ರಫೇಲ್ ಯುದ್ಧವಿಮಾನವನ್ನು ತರಲಾಯಿತು. ರಫೇಲ್ ಯುದ್ಧವಿಮಾನವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಲು ಲಿಂಬೆಹಣ್ಣುಗಳನ್ನು ಇಡಲಾಯಿತು. ಹಾಗಿದ್ದಮೇಲೆ ಭಾರತವನ್ನು ರಕ್ಷಿಸಲು ಕೋಟ್ಯಂತರ ರೂ. ಖರ್ಚು ಮಾಡಿ ಯುದ್ಧವಿಮಾನ ತರುವ ಬದಲು ಎಲ್ಲರಿಗೂ ಲಿಂಬೆಹಣ್ಣುಗಳನ್ನೇ ವಿತರಿಸಬಹುದಿತ್ತಲ್ಲ ಎಂದು ಹಲವು ಜನ ಟ್ವಿಟ್ಟರ್​ನಲ್ಲಿ ಲೇವಡಿ ಮಾಡಿದ್ದರು. ಈ ಬಗ್ಗೆ ಕಾರ್ಟೂನ್​ಗಳೂ ಹರಿದಾಡಿದ್ದವು.

 

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...