• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Renukacharya: ಡಿಜಿಪಿ ಡಾ.ಪಿ.ರವೀಂದ್ರನಾಥ್ ರಾಜೀನಾಮೆಗೂ ನನಗೂ ಸಂಬಂಧ ಇಲ್ಲ: ಡಿಕೆಶಿ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು

Renukacharya: ಡಿಜಿಪಿ ಡಾ.ಪಿ.ರವೀಂದ್ರನಾಥ್ ರಾಜೀನಾಮೆಗೂ ನನಗೂ ಸಂಬಂಧ ಇಲ್ಲ: ಡಿಕೆಶಿ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು

ರೇಣುಕಾಚಾರ್ಯ

ರೇಣುಕಾಚಾರ್ಯ

ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಡಾ. ರವೀಂದ್ರನಾಥ್ ಅವರ ರಾಜೀನಾಮೆಗೆ ನಾನು ಕಾರಣ ಅಲ್ಲ, ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

  • Share this:

ದಾವಣಗೆರೆ (ಮೇ 12) :  ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ (DGP Ravindranath) ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ ಮಾತಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಎಂ.ಪಿ ರೇಣುಕಾಚಾರ್ಯ (M.P Renukacharya) ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಡಾ. ರವೀಂದ್ರನಾಥ್ ಅವರ ರಾಜೀನಾಮೆಗೆ (Resignation) ನಾನು ಕಾರಣ ಅಲ್ಲ, ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರ (Duplicate Caste Certificate) ಪಡೆದಿಲ್ಲ, ಡಿ.ಕೆ ಶಿವಕುಮಾರ್ ಅವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದ್ರು.


ಸಿಎಂ ಆಗೋ ಹಗಲುಗನಸು ಕಾಣ್ತಿದ್ದಾರೆ ಡಿಕೆಶಿ


ಬಿಜೆಪಿ ಸಚಿವರ ಮೇಲೆ ಡಿಕೆ ಶಿವಕುಮಾರ್ ಅವರು ನಿರಂತರ ಆರೋಪ ಮಾಡುತ್ತಾ ಬರುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನಡುವೆ ಸಿಎಂ ಆಗಬೇಕೆಂಬ ಶೀತಲ ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಆಗುತ್ತೇನೆಂದು ಡಿ.ಕೆ ಶಿವಕುಮಾರ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ABCD ಎಂದು ಗುಂಪುಗಳಿವೆ ಆದರೆ ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ, 2023 ಚುನಾವಣೆಯಲ್ಲಿ ನಾವೆಲ್ಲ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ಮುಳುಗುವುದು, ಮುಳುಗುವ ಹಡಗಿಗೆ ಡಿ.ಕೆ ಶಿವಕುಮಾರ್ ಕ್ಯಾಪ್ಟನ್ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ರು.


ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ರಾಜೀನಾಮೆ


ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಪೂರ್ವ ವರ್ಗಾವಣೆ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ರವೀಂದ್ರನಾಥ್ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿದ್ದರು. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಐಪಿಎಸ್ ಹುದ್ದೆಗೇರಿದ್ದ ಪ್ರಕರಣ ಸಂಬಂಧ ರವೀಂದ್ರನಾಥ್ ತನಿಖೆ ಆರಂಭಿಸಿದ್ದರು. ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನೊಟೀಸ್ ನೀಡಿದ್ದ ಬಳಿಕ ರವೀಂದ್ರನಾಥ್​ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿತ್ತು. ಕರ್ನಾಟಕ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. ಹೀಗಾಗಿ ಅವಧಿಪೂರ್ವ ವರ್ಗಾವಣೆ ಹಿನ್ನೆಲೆ ಡಿಜಿಪಿ ರವೀಂದ್ರನಾಥ್ ರಾಜೀನಾಮೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Kolluru Mookambika Temple: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ದೇಣಿಗೆ ಸಂಗ್ರಹ


ಕೆಲ ಕಾರಣಗಳಿಂದ ನೊಂದು ನಾನು ಅತ್ಯಂತ ನೋವಿನಿಂದ ಈ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನಕಲಿ‌ಜಾತಿ ಪ್ರಮಾಣ ಪತ್ರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದೆ. ಎಸ್.ಎಸ್ಟಿ ಕಾಯ್ದೆಯಡಿ ಪೊಲೀಸ್ ಸಿಬ್ಬಂದಿಗೆ ಭದ್ರತಾ ಸಮಿತಿ ರಚಿಸಲು‌ ಕೋರಿದ್ದೆ. ಆದರೆ ಸರ್ಕಾರ ನನ್ನ ಮನವಿಯನ್ನ ಪರಿಗಣಿಸಿಲ್ಲ. ಬದಲಾಗಿ ಕಿರುಕುಳ ನೀಡಲೆಂದೇ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಬೇಸತ್ತು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಸರ್ಕಾರದ ನಿರ್ಲಕ್ಷ್ಯತನ ಬೇಸರ ತಂದಿದೆ


ಐಪಿಎಸ್ ಹುದ್ದೆಗೆ ಡಾ.ಪಿ.ರವೀಂದ್ರನಾಥ್ ಗುಡ್ ಬೈ ವಿಚಾರಕ್ಕೆ ಸಂಬಂಧಿಸಿ ಡಿಜಿಪಿ ಡಾ.ಪಿ.ರವೀಂದ್ರನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ನಾನು ಸಮರ ಸಾರಿದ್ದೆ. ಈ ಹಂತದಲ್ಲೇ ನನ್ನ ವರ್ಗಾವಣೆ ಮಾಡಿದ್ದು ಬೇಸರ ತಂದಿತ್ತು. ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಿದ್ದೆ. ಅವರು ವಕೀಲರ ಮೂಲಕ 10 ದಿನ ಕಾಲಾವಕಾಶ ಕೇಳಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿತ್ತು. ನನ್ನ ವರ್ಗಾವಣೆಯಲ್ಲಿ ಈ ಪ್ರಕರಣದ ಪಾತ್ರ ಇದೆ. ನನ್ನ ವರ್ಗಾವಣೆ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ಜವಾಬ್ದಾರಿಯುತ ಅಧಿಕಾರಿಯಾಗಿ ನಾನು ಮಾತನಾಡುತ್ತಿದ್ದೇನೆ.


SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ


1995ರಿಂದಲೇ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಜಾರಿಯಲ್ಲಿದೆ. ಪೊಲೀಸ್ ಇಲಾಖೆಯಲ್ಲೂ ಕಾಯ್ದೆ ಜಾರಿಗೆ ಮನವಿ ಮಾಡಿದ್ದೆ. ಪದೇಪದೆ ಕೇಳಿದ್ರೂ ಸರ್ಕಾರದ ನಿರ್ಲಕ್ಷ್ಯತನ ಬೇಸರ ತಂದಿತ್ತು ಎಂದು ತರಬೇತಿ ವಿಭಾಗದ ಡಿಜಿಪಿ ಡಾ.ಪಿ.ರವೀಂದ್ರನಾಥ್ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದು ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ.


ರಾಜೀನಾಮೆ ಅಂಗೀಕರಿಸದಂತೆ HDK ಆಗ್ರಹ


ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಯಮಬಾಹಿರ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ) ಡಾ. ಪಿ. ರವೀಂದ್ರನಾಥ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸದಂತೆ ಒತ್ತಡ ಹೆಚ್ಚಿದೆ. ಈಗಾಗಲೇ ಈ ವಿಚಾರ ಸಂಬಂಧ ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಷ್ಠಾವಂತ ಅಧಿಕಾರಿಯ ಅವಧಿಪೂರ್ವ ವರ್ಗಾವಣೆಗೆ ಕಿಡಿಕಾರಿದ್ದಾರೆ. ಈ ಹಿನ್ನಲೆ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಶಾಸಕರು, ಮಾಜಿ ಸಿಎಂ ಕುಮಾರಸ್ವಾಮಿ  ಆಗ್ರಹಿಸಿದ್ದಾರೆ.


ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರ ಇದು ಎಂದ ಮಾಜಿ ಸಿಎಂ


ಪಿ ರವೀಂದ್ರ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ದಕ್ಷ ಅಧಿಕಾರಿ. ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು. ಸರ್ಕಾರ ಮತ್ತು ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಅವರು ಪ್ರಯತ್ನ ಮಾಡುತ್ತಿದ್ದರು. ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಇದು ಎಂದು ಆರೋಪಿಸಿದ್ದಾರೆ.

Published by:Pavana HS
First published: