ನನ್ನ ರಾಜಕೀಯ ಜೀವನದಲ್ಲಿ ಇಂತಹ ಸುಳ್ಳುಗಾರ ಪ್ರಧಾನಿಯನ್ನು ನೋಡಿಲ್ಲ; Modi ವಿರುದ್ಧ Siddaramaiah ವಾಗ್ದಾಳಿ

ಡಿಸೇಲ್- ಪೆಟ್ರೋಲ್ ಏರಿಕೆಗೆ ಕಾಂಗ್ರೆಸ್ ಆಡಳಿತ ಕಾರಣ ಎಂದು ಹೇಳ್ತಾರೆ. ನರೇಂದ್ರ ಮೋದಿಜೀ ಈ ದೇಶದ ಜನರು ಪೆದ್ದರು. ದಾರಿ ತಪ್ಪಿಸಬಹುದು ಅಂತ ತಿಳಿದುಕೊಂಡಿದ್ದಿರಾ. ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿ ಈಗ ನಾವು ಹತ್ತು ರೂಪಾಯಿ ಡಿಸೇಲ್ ಮೇಲೆ ಐದು ರೂಪಾಯಿ ಕಡಿಮೆ ಮಾಡಿದ್ದೇವೆಂದು ಹೇಳ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
    ಬೆಂಗಳೂರು: ನವೆಂಬರ್14 (November 14th Childrens Day) ಬಹಳ ಮಹತ್ವ ದಿನ. ನೆಹರೂ ಅವರ ಜನ್ಮ ದಿನ (Neharu Birthday). ಇಡೀ ರಾಷ್ಟ್ರದಲ್ಲಿ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸ್ತಾರೆ. ನೆಹರೂ ಅವರಿಗೆ ಮಕ್ಕಳ ಕಂಡ್ರೆ ಅಪಾರ ಪ್ರೀತಿ, ನಂಬಿಕೆ ಕೂಡ. ದೇಶದ ಭವಿಷ್ಯ ರೂಪಿಸಬೇಕಂದ್ರೆ, ಮಕ್ಕಳಿಂದ ಮಾತ್ರ ಸಾಧ್ಯ ಅಂತ ನಂಬಿಕೆ ಇಟ್ಟಿದ್ದರು. ಅವರ ಹುಟ್ಟಿದ ದಿನವನ್ನ ಮಕ್ಕಳ ದಿನವನ್ನಾಗಿ ಆಚರಿಸಲಾಗ್ತಿದೆ. ನಾಡಿನ ಮಕ್ಕಳ ಭವಿಷ್ಯ ಉಜ್ವಲ ಆಗಲಿ ಅಂತ ಬಯಸ್ತೀನಿ. ಇಂದು ಪಕ್ಷದ ಸದಸ್ಯತ್ವ ಅಭಿಯಾನ ಕೂಡ (Congress Membership Campaign) ಹಮ್ಮಿಕೊಳ್ಳಲಾಗಿದೆ. ನೆಹರೂರವರು ಮಹಾತ್ಮ ಗಾಂಧಿ (Mahatma Gandhi) ಜೊತೆಗೂಡಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರು. ನಿರಂತರವಾಗಿ ಗಾಂಧಿ, ಪಟೇಲ್, ಮೌಲಾನಾ ಆಜಾದ್ ಜೊತೆ ಹೋರಾಟ ಮಾಡಿದ್ರು. ಹೋರಾಟದಲ್ಲಿ ಭಾಗಿಯಾಗಿದ್ರು. ಒಂಭತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರೋವರೆಗೂ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಹೋರಾಡಿದ್ರು. ಭಾರತ ದೇಶದಲ್ಲಿ‌565 ಜನ ರಾಜರು, ಪಾಳೇಗಾರರು ಆಳ್ವಿಕೆ ನಡೆಸಿದ್ರು. ಅವರೆಲ್ಲರ ಮನಸು ಗೆಲ್ಲಲು ಮನವಿ ಮಾಡಿದ್ರು. ಪ್ರಜಾಪ್ರಭುತ್ವ ಹೆಚ್ಚು ದಿನ ಉಳಿಯೋದಿಲ್ಲ ಅಂದುಕೊಂಡಿದ್ರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ರೆ, ಬುನಾದಿ ಸಿಕ್ಕಿದ್ರೆ ಅದಕ್ಕೆ ನೆಹರೂ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಹೇಳಿದರು.

    ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜರನ್ನೆಲ್ಲಾ ಒಟ್ಟುಗೂಡಿಸೋ ಕೆಲಸ ಮಾಡಿದರು. ಯಾವುದಾದರೂ ರಾಷ್ಟ್ರ ಏಕತೆಯನ್ನು ಉಳಿಸಿ, ಬೆಳೆಸಿದ್ದರೆ ಅದಕ್ಕೆ ನೆಹರು, ವಲ್ಲಭಭಾಯಿ ಪಟೇಲರು ಕಾರಣ. ನೆಹರೂರವರು ದೇಶದ ಪ್ರಗತಿಗೆ, ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬೆಳವಣಿಗೆಗೆ ಅಡಿಪಾಯ ಹಾಕಿದವರು. ನೆಹರೂ ಪ್ರಧಾನಿಯಾಗಿ 17 ವರ್ಷಗಳ ಕಾಲ ಇದ್ರು. ದೇಶವನ್ನು ಕಟ್ಟಲು ಜೀವವನ್ನು ಮುಡಿಪಾಗಿಟ್ಟಿದ್ದರು ಎಂದರು.

    ಬಿಜೆಪಿ ಪಕ್ಷದವರು ಕೋಮುವಾದಿಗಳು. ದೇಶ ಒಡೆಯಲು ಪ್ರಯತ್ನ ಪಡುತ್ತಿದ್ದಾರೆ. ವಾಜಪೇಯಿ ಅವರು ಯುವಕರು, ಆಗ ತಾನೆ ಸಂಸತ್ ಪ್ರವೇಶಿಸಿದ್ರು. ನೆಹರು ಒಂದು ಮಾತು ಹೇಳಿದ್ರು ಅವರಿಗೆ. ಮುಂದೆ ನೀವು ದೇಶದ ಪ್ರಧಾನಿಯಾಗೋ ಎಲ್ಲ ಲಕ್ಷಣ ಇವೆ ಅಂತ. ಲೋಹಿಯಾ ಅವರು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುತ್ತಿದ್ರು. ವಿಪಕ್ಷ ಮಾಡೋ ಟೀಕೆಗೆ ಉತ್ತರಿಸೋ ಚಾಕಚಕ್ಯತೆ ಇದ್ದ ಪ್ರಧಾನಿ. ಬಹುಶಃ ಈ ದೇಶದ ಮಾದರಿ ಪ್ರಧಾನಿಯಾಗಿದ್ದಾರೆ. ಈ ದೇಶದಲ್ಲಿ ವಿಜ್ಞಾನ ಬೇಳೆದಿದ್ರೆ, ವೈಚಾರಿಕತೆ ಉಳಿದಿದ್ರೆ ಅವರು ಮಾಡಿರೋ ಕೆಲಸವೇ ಕಾರಣ. ವಿಜ್ಞಾನ ಮತ್ತು ವೈಚಾರಿಕತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದ್ರೆ ಇಂದಿನ ಪ್ರಧಾನಿ ಏನು ಮಾಡಿದ್ದಾರೆ. RSS ಇಂದ ಬಂದವರು. ದೇಶದಲ್ಲಿ ಕೊರೋನಾ ಬಂದಿದ್ರೆ, ಇವತ್ತು ಹೇಳ್ತಾರೆ. ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ಜಾಗಟೆ ಬಾರಿಸಿ ಅಂತ ಹೇಳ್ತಾರೆ. ನೆಹರೂ ಅವರು ಎಂದಾದರೂ ಈ ರೀತಿ ವೈಚಾರಿಕತೆ ಹೇಳಿದ್ರಾ.? ಇಂತಹ ಮೌಡ್ಯಗಳ ಪ್ರತಿಪಾದಕ ಮತ್ತೊಬ್ಬ ಈ ದೇಶಕ್ಕೆ ಸಿಗೋದಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇಂದು ಆಹಾರದ ಸ್ವಾವಲಂಬನೆ ದೊರೆತಿದ್ರೆ ಅದಕ್ಕೆ ನೆಹರೂ ಅವರೇ ಕಾರಣ. ಜನಸಂಖ್ಯೆ ಹೆಚ್ಚಿರೋ ದೇಶದಲ್ಲಿ ಆಹಾರ ಹೆಚ್ಚಾಗಿದ್ರೆ ನೆಹರೂ, ಇಂದಿರಾ ಕಾರಣ. ಮೋದಿಯವರು ಇಂದಿನ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದಾರೆ. ನಿಮ್ಮ ನೈತಿಕತೆಯನ್ನು ಪ್ರಶ್ನೆ ಮಾಡಿಕೊಳ್ಳಿ. 1978ರಿಂದ ನಾನೂ ರಾಜಕಾರಣದಲ್ಲಿದ್ದೇನೆ. ದೇಶವನ್ನ ಇಷ್ಟು ಕೆಳಮಟ್ಟದ ಆರ್ಥಿಕತೆಗೆ ಯಾರೂ ತೆಗೆದುಕೊಂಡು ಹೋಗಿಲ್ಲ. ದೇಶದ ಮಹಾನ್ ಸುಳ್ಳುಗಾರ ಅಂದ್ರೆ ಮೋದಿ. ಭರವಸೆ, ಆರ್ಥಿಕ ಪರಿಸ್ಥಿತಿ ಎಲ್ಲವೂ ಈವರೆಗೂ ಈಡೇರಿಲ್ಲ. ಪ್ರಧಾನಿ ಮನ್ ಕೀ ಬಾತ್‌ನಲ್ಲಿ, ಕಾಂಗ್ರೆಸ್ ಮಾಡಿದ ಸಾಲ ತೀರಿಸಲು ಈ ರೀತಿ ಮಾಡಬೇಕಿದೆ ಅಂತ ಹೇಳಿದ್ದಾರೆ. ಸಾಲ ಮಾಡೋದಕ್ಕೂ, ಆಯಿಲ್ ಬಾಂಡ್ ಇಡೋದಕ್ಕೂ ಏನ್ ಸಂಬಂಧ. ಇಂತಹ ಮಹನ್ ಸುಳ್ಳುಗಾರ ಪ್ರಧಾನಿ ಯನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

    ಇದನ್ನು ಓದಿ: Covid ಲಸಿಕೆ ಪೂರೈಕೆಯಲ್ಲಿ Octocopter Drone ಬಳಕೆ ಯಶಸ್ವಿ; ಹತ್ತೇ ನಿಮಿಷದಲ್ಲಿ 14 ಕಿ.ಮೀ ಕ್ರಮಿಸಿದ ಡ್ರೋಣ್

    ಡಿಸೇಲ್- ಪೆಟ್ರೋಲ್ ಏರಿಕೆಗೆ ಕಾಂಗ್ರೆಸ್ ಆಡಳಿತ ಕಾರಣ ಎಂದು ಹೇಳ್ತಾರೆ. ನರೇಂದ್ರ ಮೋದಿಜೀ ಈ ದೇಶದ ಜನರು ಪೆದ್ದರು. ದಾರಿ ತಪ್ಪಿಸಬಹುದು ಅಂತ ತಿಳಿದುಕೊಂಡಿದ್ದಿರಾ. ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿ ಈಗ ನಾವು ಹತ್ತು ರೂಪಾಯಿ ಡಿಸೇಲ್ ಮೇಲೆ ಐದು ರೂಪಾಯಿ ಕಡಿಮೆ ಮಾಡಿದ್ದೇವೆಂದು ಹೇಳ್ತಾರೆ. ಕೋಮುವಾದಿಗಳು ದೇಶ ಹಾಳು ಮಾಡಲು ಇದ್ದಾರೆ. ನಾವು ದೇಶ ರಕ್ಷಣೆ ಮಾಡಬೇಕು. ಸ್ವತಂತ್ರ ತಂದಿದ್ದು ಕಾಂಗ್ರೆಸ್ ಅದನ್ನ ಉಳಿಸಬೇಕಿರುವುದು ಕಾಂಗ್ರೆಸ್. ದೇಶ ಉಳಿಸಿದ್ರೆ ನಾವು ಉಳಿಯುತ್ತೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
    Published by:HR Ramesh
    First published: