ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್

H Vishwanath Press Meet: ಜೆಡಿಎಸ್​ ಪಕ್ಷಕ್ಕೆ ನಾನು ವಿಷ ಇಟ್ಟಿದ್ದೇನೆ ಎಂದು ಯಾರೋ ಹೇಳಿದ್ದರು. ಯಾರು ವಿಷ ಇಟ್ಟರೆಂದು ರಾಜ್ಯದ ಜನತೆ ಗೊತ್ತಿದೆ . ನಾವು 4-5 ತಲೆಮಾರಿನಿಂದ ಭತ್ತದ ವ್ಯಾಪಾರ ಮಾಡಿಕೊಂಡು ಗೌರವಯುತವಾಗಿ ಬದುಕಿದ್ದೇವೆ. ನಾನು ಹಣಕ್ಕಾಗಿ ಮಾರಿಕೊಂಡವನಲ್ಲ ಎಂದು ಹೆಚ್. ವಿಶ್ವನಾಥ್ ಬೇಸರ ಹೊರಹಾಕಿದ್ದಾರೆ. 

Sushma Chakre | news18-kannada
Updated:September 22, 2019, 11:48 AM IST
ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್
ಹೆಚ್. ವಿಶ್ವನಾಥ್
Sushma Chakre | news18-kannada
Updated: September 22, 2019, 11:48 AM IST
ಮೈಸೂರು (ಸೆ. 22): ಒಂದೆಡೆ ಕಾಂಗ್ರೆಸ್​-ಜೆಡಿಎಸ್​ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾದೆ. ಇನ್ನೊಂದೆಡೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಇತ್ಯರ್ಥವಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ನೀತಿಸಂಹಿತೆ ಜಾರಿಯಾಗಿದ್ದು,  ಉಪ ಚುನಾವಣೆಗೆ ಇನ್ನು ಕೇವಲ 1 ತಿಂಗಳಿರುವ ಹಿನ್ನೆಲೆಯಲ್ಲಿ ಇಂದು ಮಾಜಿ ಶಾಸಕ ಹೆಚ್. ವಿಶ್ವನಾಥ್​ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಉಪಚುನಾವಣೆ ಬಗ್ಗೆ ಯಾರೂ ಆತಂಕ ಪಡಬೇಡಿ. ಸುಪ್ರೀಂಕೋರ್ಟ್​ನಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. ನಾವು ರಾಜೀನಾಮೆ ಕೊಟ್ಟಿದ್ದು ಅಧಿಕಾರಕ್ಕಾಗಿ ಅಲ್ಲ. ರಾಕ್ಷಸ ರಾಜಕಾರಣಕ್ಕೆ ಬೇಸತ್ತು ನಾವು ರಾಜೀನಾಮೆ ನೀಡಿದ್ದೆವು.  ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮನ್ನು ದುಡ್ಡಿಗಾಗಿ ಮಾರಿಕೊಂಡಿರಿ ಎಂದು ಹೀಯಾಳಿಸುತ್ತಿದ್ದಾರೆ.  ಅವರ ಹೇಳಿಕೆಯನ್ನು ವಾಪಾಸ್​ ತೆಗೆದುಕೊಳ್ಳಬೇಕು. ಎಂಟಿಬಿ ನಾಗರಾಜ್​ ಕಾಂಗ್ರೆಸ್​ ಪಕ್ಷದಲ್ಲಿ ಹೇಗಿದ್ದರು ಎಂಬುದು ಸಿದ್ದರಾಮಯ್ಯನವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ನಮ್ಮನ್ನು ಅನರ್ಹರು, ಅಬ್ಬೆಪಾರಿಗಳು ಎಂದು ಕರೆಯಬೇಡಿ. ಕೀಳುಮಟ್ಟದ ರಾಜಕಾರಣದ ವಿರುದ್ಧ ದಂಗೆದ್ದು ನಾವು ರಾಜೀನಾಮೆ ನೀಡಿದೆವು. ಮಾಧ್ಯಮಗಳು ಪದೇಪದೆ ನಮ್ಮನ್ನು ಅತಂತ್ರರಾಗಿದ್ದೇವೆ ಎಂಬಂತೆ ಬಿಂಬಿಸಬೇಡಿ ಎಂದು ಹೆಚ್. ವಿಶ್ವನಾಥ್ ಮನವಿ ಮಾಡಿಕೊಂಡಿದ್ದಾರೆ.

ಹೆಚ್​ಡಿಕೆ ಜೊತೆ ಈಗ ಯಾರಿದ್ದಾರೆ?:

ಮಾಜಿ ಸಿಎಂ ಕುಮಾರಸ್ವಾಮಿಯವರ ನಾಯಕತ್ವ ಬಲಹೀನವಾಗಬಾರದು. ಅವರ ಹಿಂದೆ ಮುಂದೆ ಓಡಾಡುತ್ತಿದ್ದವರೆಲ್ಲ ಎಲ್ಲಿ ಹೋದರು? ಅವರ ಜೊತೆ ಇದ್ದ ಹೆಚ್. ವಿಶ್ವನಾಥ್ ಎಲ್ಲೋದ್ರು? ಕುಮಾರಪರ್ವ ಮಾಡಿದ ಜಿ.ಟಿ. ದೇವೇಗೌಡ ಎಲ್ಲಿ ಹೋದರು? 40 ಕೋಟಿ ರೂ. ಖರ್ಚು ಮಾಡಿಸಿ ನಾಲ್ಕು ತಿಂಗಳಿಗೆ ಎಂಪಿ ಮಾಡಿದಿರಲ್ಲ ಆ ಶಿವರಾಮೇಗೌಡ ಎಲ್ಲಿ ಹೋದರು? ಪುಟ್ಟರಾಜು, ನಾರಾಯಣ ಗೌಡ ಎಲ್ಲೋದ್ರು? ಈಗ ನಿಮ್ಮ ಜೊತೆ ಇರೋರು ಯಾರು ಕುಮಾರಸ್ವಾಮಿಯವರೇ? ಎಂದು ಹೆಚ್​. ವಿಶ್ವನಾಥ್​ ಪ್ರಶ್ನೆ ಹಾಕಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮುಖಾಮುಖಿಯಾದ ಸಚಿವ ಈಶ್ವರಪ್ಪ- ಜಿ.ಟಿ. ದೇವೇಗೌಡ

ದೇವೇಗೌಡರು ನಮಗೆ ಸಾಕಷ್ಟು ಉಪಕಾರ ಮಾಡಿದ್ದಾರೆ. ನಾನು ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೇನೆ ಎಂದು ಹೇಳಿದ್ದೆ.  ಈಗಲೂ ಅವರ ಮೇಲೆ ನನಗೆ ಗೌರವ ಇದೆ. ವಿಶ್ವನಾಥ್ ವಿಷ ಇಟ್ಟರೆಂದು ಯಾರೋ ಹೇಳಿದ್ದರು. ಯಾರು ವಿಷ ಇಟ್ಟರೆಂದು ರಾಜ್ಯದ ಜನತೆ ಗೊತ್ತಿದೆ . ನಾವು 4-5 ತಲೆಮಾರಿನಿಂದ ಭತ್ತದ ವ್ಯಾಪಾರ ಮಾಡಿಕೊಂಡು ಗೌರವಯುತವಾಗಿ ಬದುಕಿದ್ದೇವೆ. ನಾನು ಹಣಕ್ಕಾಗಿ ಮಾರಿಕೊಂಡವನಲ್ಲ ಎಂದು ವಿಶ್ವನಾಥ್ ಬೇಸರ ಹೊರಹಾಕಿದ್ದಾರೆ.
Loading...

ಸಾ.ರಾ. ಮಹೇಶ್​ ವಿರುದ್ಧ ಪರೋಕ್ಷ ದಾಳಿ:

ಕೆಲವು ನಾಯಕರ ಆಸ್ತಿ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ 200 ಪಟ್ಟು ಹೆಚ್ಚಾಗಿದೆ. ಆದರೆ, ನಾನು ಇಷ್ಟು ವರ್ಷ ರಾಜಕೀಯದಲ್ಲಿದ್ದರೂ ನಮ್ಮ ಆಸ್ತಿ ಮಾರಿ ಸಾಲ ಮಾಡಿಕೊಂಡಿದ್ದೇನೆ ಎಂದು ಹೆಚ್​. ವಿಶ್ವನಾಥ್​ ಮಾಜಿ ಸಚಿವ ಸಾ.ರಾ. ಮಹೇಶ್ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದ್ದಾರೆ.

(ವರದಿ: ಪುಟ್ಟಪ್ಪ)

First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...