ಮಂತ್ರಿಯಾಗಲಿ ಬಿಡಲಿ, ಎಂಟು ಬಾರಿ ಶಾಸಕನಾಗಿರುವ ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ; ಉಮೇಶ್ ಕತ್ತಿ

ಮಂತ್ರಿ ಆಗುತ್ತೇ ಇಲ್ಲ ಸಿಎಂ ಸ್ಥಾನ ಕೊಟ್ಟರೂ ಆಗುತ್ತೇನೆ ಎಂದು ಯಡಿಯೂರಪ್ಪ ಇರುವಾಗಲೇ ಸಿಎಂ ಸ್ಥಾನಕ್ಕೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ

news18-kannada
Updated:December 12, 2019, 7:01 PM IST
ಮಂತ್ರಿಯಾಗಲಿ ಬಿಡಲಿ, ಎಂಟು ಬಾರಿ ಶಾಸಕನಾಗಿರುವ ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ; ಉಮೇಶ್ ಕತ್ತಿ
ಉಮೇಶ್​ ಕತ್ತಿ
  • Share this:
ಬೆಂಗಳೂರು(ಡಿ.12): ನಾನು ಎಂಟು ಸಲ‌ ಶಾಸಕನಾಗಿದ್ದೇನೆ. ಕಳೆದ‌ ಮೂರ್ನಾಲ್ಕು ತಿಂಗಳಿಂದ ನನಗೆ‌ ಅಧಿಕಾರ ಕೊಟ್ಟಿಲ್ಲ. ಮಂತ್ರಿಯಾಗಲಿ ಆಗದಿರಲಿ ಶಾಸಕನಾಗಿ ಕೆಲಸವನ್ನು ಮಾಡುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಮಾತನಾಡಿದ ಅವರು, ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕೊಟ್ರೆ ಮಂತ್ರಿ ಸ್ಥಾನ ಕೊಡಲಿ, ಡಿಸಿಎಂ ಬೇಡ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ ಈಗಲೂ, ಮುಂದೆಯೂ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಇದರಲ್ಲಿ‌ ಬೇರೆ ಪ್ರಶ್ನೆಯೇ ಇಲ್ಲ ಎಂದರು.

ಮಂತ್ರಿ ಆಗುತ್ತೇ ಇಲ್ಲ ಸಿಎಂ ಸ್ಥಾನ ಕೊಟ್ರೂ ಆಗ್ತೇನೆ ಎಂದು ಯಡಿಯೂರಪ್ಪ ಇರುವಾಗಲೇ ಸಿಎಂ ಸ್ಥಾನಕ್ಕೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ನಾನಂತು ಇದೇ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ : ಶಾಸಕ ಎಸ್​ ಟಿ ಸೋಮಶೇಖರ್

ಇಷ್ಟೊತ್ತಿಗಾಗಲೇ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ ಸಿಎಂ ಯಡಿಯೂರಪ್ಪ ಈ ಬಗ್ಗೆ ಏನು ತೀರ್ಮಾನ ಮಾಡಿದ್ದಾರೋ ಗೊತ್ತಿಲ್ಲ. ನಾನಂತು ಇದೇ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಜೊತೆಗೆ ಇದೇ ಖಾತೆ ಬೇಕು ಎಂದು ಕೂಡ ಕೇಳಿಲ್ಲ ನಮಗೆ ಸಚಿವ ಸ್ಥಾನ ಕೊಡುವುದರ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.

ಇದನ್ನೂ ಓದಿ : ಇದುವರೆಗೂ ಜೆಡಿಎಸ್ ಬಿಟ್ಟಿಲ್ಲ - ನಮ್ಮ ಮೌಲ್ಯಕ್ಕೆ ವಿರುದ್ಧವಾದ್ರೆ ಖಂಡಿತಾ ಪಕ್ಷ ಬಿಡ್ತೇನೆ ; ಬಸವರಾಜ ಹೊರಟ್ಟಿ

ಸಂಪುಟ ರಚನೆ ಬಗ್ಗೆ ಸಿಎಂ ಬಿಎಸ್​ ವೈ ಏನು ಹೇಳಿದ್ದಾರೋ ಗೊತ್ತಿಲ್ಲ. ನಾಳೆ ಮಧ್ಯಾಹ್ನ12.30ಕ್ಕೆ ಶಾಸಕರಾಗಿ ಪ್ರಮಾಣ ವಚನ ತೆಗೆದುಕೊಳ್ಳಬೇಕು. ಅದಕ್ಕಾಗಿ ಈ ಬಗ್ಗೆ  ಸ್ಪೀಕರ್ ಭೇಟಿ ಮಾಡಿ ವಿಚಾರಿಸಲು ಬಂದಿದ್ದೇವೆ. ನಾಳಿನಪ್ರಮಾಣ‌ ವಚನ ಬಗ್ಗೆ ಸ್ಪೀಕರ್ ಏನು ತೀರ್ಮಾನ ಮಾಡ್ತಾರೋ ನೋಡೋಣ ಎಂದು  ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.
First published: December 12, 2019, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading