• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಅಮಿತ್​ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ, ಕೊಟ್ಟರೆ ರಾಜ್ಯ ರಾಜಕೀಯ ಚರ್ಚೆ; ಎಚ್​ ವಿಶ್ವನಾಥ್​​

ಅಮಿತ್​ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ, ಕೊಟ್ಟರೆ ರಾಜ್ಯ ರಾಜಕೀಯ ಚರ್ಚೆ; ಎಚ್​ ವಿಶ್ವನಾಥ್​​

ಹೆಚ್. ವಿಶ್ವನಾಥ್.

ಹೆಚ್. ವಿಶ್ವನಾಥ್.

ರಮೇಶ್ ಜಾರಕಿಹೊಳಿಯವರು ಸಿ.ಪಿ. ಯೋಗೇಶ್ವರ್ ಸರ್ಕಾರ ತಂದರು ಎನ್ನುತ್ತಿದ್ದಾರೆ.  ನಾವು ಸರ್ಕಾರ ರಚಿಸಲು ಕಾರಣ ಎನ್ನುವುದು ಅವರಿಗೆ ಗೊತ್ತಿಲ್ವಾ. ಈ ಎಲ್ಲಾ ಅಂಶಗಳನ್ನು ಬಹಳ ವಿಸ್ತೃತವಾಗಿ ಬಹಿರಂಗಪಡಿಸುತ್ತೇನೆ

 • Share this:

ಹುಬ್ಬಳ್ಳಿ (ಜ. 15): ನಾಳೆ ರಾಜ್ಯಕ್ಕೆ ಅಮಿತ್ ಶಾ ಆಗಮಿಸುತ್ತಿದ್ದು, ಅವರ ಭೇಟಿಗೆ ಅವಕಾಶ ಕೇಳಿದ್ದೀನಿ. ಕೊಟ್ಟರೆ ರಾಜ್ಯದ ರಾಜಕೀಯ ಮತ್ತು ನಾಯಕತ್ವದ ಬಗ್ಗೆ ಚರ್ಚಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದ್ದಾರೆ. ಇಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ನಾನು ಪ್ರಶ್ನಿಸಲ್ಲ.‌ ಅವರ ನಡುವಳಿಕೆಗಳ ನಗ್ಗೆ ನನ್ನ ಪ್ರಶ್ನೆಯಿದೆ ಎಂದಿದ್ದಾರೆ. ಸಿಡಿ ಬಗ್ಗೆ ನನಗಿಂತ ಯತ್ನಾಳ್ ಅವರಿಗೆ ಹೆಚ್ಚು ಗೊತ್ತಿದೆ.‌ ಸಿಡಿ ಸಿಡಿದಾಗ ಎಲ್ಲಾ ಗೊತ್ತಾಗುತ್ತದೆ. ಬಹಳ ಜನರು ಸಿಡಿ ಇದೇ ಅಂತಿದ್ದಾರೆ. ಸಚಿವ ಹೇಗಿರಬೇಕು ಎನ್ನುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಜೈಲಿಗೆ ಹೋಗಬೇಕಾದ ವ್ಯಕ್ತಿಯನ್ನು ಮಂತ್ರಿ ಮಾಡಬೇಕಾ ಎನ್ನುವುದು ಪ್ರಶ್ನೆ. ಸಿ.ಪಿ‌. ಯೋಗೇಶ್ವರ್ ಕೋಟ್ಯಾಂತರ ರೂಪಾಯಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಸತ್ಯ ಮಾತಾಡಿದರೆ ವಿಲನ್ ಮಾಡ್ತಿದ್ದಾರೆ. ನಾಳೆ ನನ್ನನ್ನು ದೇಶದ್ರೋಹಿ ಅನ್ನಬಹುದು. ನಮ್ಮದು ಪಕ್ಷಾಂತರ ಅಲ್ಲಾ,‌ ಶಾಸಕಾಂಗ ನಾಯಕರ ವಿರುದ್ಧದ ದಂಗೆ.‌ ಪುಸ್ತಕದ ಮೂಲಕ ಈಗಿನ ಪರಿಸ್ಥಿತಿಗೆ ಕಾರಣ ಏನೆಂದು ಬಹಿರಂಗ ಪಡಿಸುತ್ತೇನೆ. ಸದ್ಯದಲ್ಲಿಯೇ ವಿಸ್ತೃತ ಪುಸ್ತಕ ಬರೆಯುತ್ತೇನೆ ಎಂದರು.


ರಮೇಶ್ ಜಾರಕಿಹೊಳಿಯವರು ಸಿ.ಪಿ. ಯೋಗೇಶ್ವರ್ ಸರ್ಕಾರ ತಂದರು ಎನ್ನುತ್ತಿದ್ದಾರೆ.  ನಾವು ಸರ್ಕಾರ ರಚಿಸಲು ಕಾರಣ ಎನ್ನುವುದು ಅವರಿಗೆ ಗೊತ್ತಿಲ್ವಾ. ಈ ಎಲ್ಲಾ ಅಂಶಗಳನ್ನು ಬಹಳ ವಿಸ್ತೃತವಾಗಿ ಬಹಿರಂಗಪಡಿಸುತ್ತೇನೆ. ಸಿ.ಪಿ. ಯೋಗೇಶ್ವರ್ ಮಂತ್ರಿ ಮಾಡುವ ಅನಿವಾರ್ಯತೆ ಏನಿತ್ತು.‌ ದಲಿತ ಮುಖಂಡ ನಾಗೇಶ್ ಹಕ್ಕನ್ನು ಕಿತ್ತುಕೊಂಡಿದ್ದು ಸರಿಯಲ್ಲ. ನಾನು ಅಧಿಕಾರಕ್ಕಾಗಿ ಹಂಬಲಿಸಿದವನಲ್ಲ. ರಾಜಕಾರಣದ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಯಡಿಯೂರಪ್ಪನವರಿಗೆ ಅಧಿಕಾರದ ಆಸೆ ಇರುವಾಗ ನನಗೆ ಯಾಕಿರಬಾರದು ಎಂದರು.


ಇದನ್ನು ಓದಿ: ಜಾರಕಿಹೊಳಿ ಕುಟುಂಬಕ್ಕೆ ಜನಸಂಘದ ನಂಟು; ಸಹೋದರರ ನಡುವೆ ಟಾಕ್ ವಾರ್


ಇದೇ ವೇಳೆ ಜೆಡಿಎಸ್​ ನಾಯಕನ ವಿರುದ್ಧ ಹರಿಹಾಯ್ದ ಅವರು,  ಸಾ.ರಾ. ಮಹೇಶ್ ಕೊಚ್ಚೆ ಗುಂಡಿ. ಹೀಗಾಗಿ ಕೊಚ್ಚೆಯಲ್ಲಿ ನಾನು ಕಲ್ಲು ಹಾಕಲು ಹೋಗಲ್ಲ. ನಮ್ಮ ಶಾಸಕಾಂಗ ಪಕ್ಷದ ನಾಯಕರ ದುರಹಂಕಾರ, ದರ್ಪದ‌ ಕಾರಣ ದಂಗೆ ಎದ್ದಿದ್ದೇವು. ಪಕ್ಷ ತ್ಯಾಗ ಮಾಡಿದ್ದೇವು. ಸಚಿವನನ್ನಾಗಿ ಮಾಡಿ ಅಂತಾ ಯಾರಿಗೂ ಒತ್ತಾಯ ಮಾಡಿಲ್ಲ. ಕುಟುಂಬ ರಾಜಕಾರಣ ರಾಜಕೀಯದಲ್ಲಿ ವಿಜೃಂಭಿಸುತ್ತಿದೆ.‌


ಯಡಿಯೂರಪ್ಪ ಕುಟುಂಬ ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪ ಮಗ ಹಾಗೂ ಹೆಣ್ಣುಮಕ್ಕಳು ರಾಜಕೀಯ‌ ಮಾಡುತ್ತಿದ್ದಾರೆ. ಈಶ್ವರಪ್ಪ ಮನೆಯಲ್ಲೂ ಕುಟುಂಬ ರಾಜಕೀಯವಿದೆ. ಅಮಿತ್ ಶಾ ಮಗನ ವಿಷಯದಲ್ಲೂ ಮೋದಿಯವರಿಗೆ ಬೇಸರವಿದೆ.‌ ಮೋದಿಯವರು ದೇಶದಲ್ಲಿ ಕುಟುಂಬ ರಾಜಕೀಯ ಕೊನೆಗಾಣಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಜೀವ ವಿಜಯೇಂದ್ರನ ಕೈಯಲ್ಲಿದೆ. ನಾನು ಪಕ್ಷಗಳ ಬಗ್ಗೆ ಯಾವತ್ತೂ ಟೀಕಿಸಿಲ್ಲ.

top videos


  ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಬೇಡಿಕೆ ಇದೆ. ಇದಕ್ಕಾಗಿ ಕಾಗಿನೆಲೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಹಿನ್ನೆಲೆ ಜನರನ್ನು ಭೇಟಿಯಾಗಲು ಬಂದಿದ್ದೇನೆ. ಸಿದ್ದರಾಮಯ್ಯ ಮೀಸಲಾತಿ ಹೋರಾಟ ಬೇಡ ಎನ್ನುತ್ತಿದ್ದಾರೆ. ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಇದ್ಯಾಗೂ 2ಎ ಸೇರಿಸುವಂತೆ ಹೋರಾಟ ನಡೆಸಿದ್ದಾರೆ. ಮೀಸಲಾತಿ ಪಡೆಯಲು ಹೋರಾಟ ನಡೆಸಲೆಬೇಕು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಯಾಕೆ ಮೀಸಲಾತಿ ಬಗ್ಗೆ ಯೋಚಿಸಲ್ಲ.ಈಶ್ವರಪ್ಪ ಬೆಳೆದುಬಿಡುತ್ತಾರೆ ಎಂಬ ಆತಂಕದಿಂದ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಏಕಚಕ್ರಾಧಿಪತಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು  ಟೀಕಿಸಿದ್ದಾರೆ.

  First published: