ಸಚಿವನಾಗಬೇಕು ಅಂತ ಆಸೆ ಇದೆ, ಆದರೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ; ಯಲಹಂಕ ಶಾಸಕ ವಿಶ್ವನಾಥ ಇಂಗಿತ

ಕೆಲವರ ಹಣೆಯಲ್ಲಿ ದೊಡ್ಡದಾಗಿ ಅದೃಷ್ಟ ಇರುತ್ತೆ. ಅವರಿಗೆ ಬೇಗ ಅದೃಷ್ಟ ಬರುತ್ತೆ. ಆದರೆ ನಮಗೆ ನಿಧಾನವಾಗಿ ಅದೃಷ್ಟ ಬರುತ್ತೆ.  ಅಲ್ಲಿಯವರೆಗೂ ಕಾಯೋಣ ಎಂದ ಎಸ್ ಆರ್ ವಿಶ್ವನಾಥ ಹೇಳಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ.

  • Share this:
ಬೆಂಗಳೂರು: ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಚರ್ಚಿಸಿ, ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ, ಏನೇ ತೀರ್ಮಾನ ಆದರೂ ಸದ್ಯಕ್ಕೆ ಸಂಪುಟ ವಿಸ್ತರಣೆ ಆಗಲ್ಲ. ಏಕೆಂದರೆ ನಾಳೆ ಸಿಎಂ ವಿದೇಶಕ್ಕೆ ಹೊರಟಿದ್ದಾರೆ. ಹೀಗಾಗಿ ಅವರು ಬಂದ ನಂತರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ ಅವರು, ಎಷ್ಟು ಜನರಿಗೆ ಸಚಿವ ಸ್ಥಾನ ಕೊಡ್ತಾರೋ ಗೊತ್ತಿಲ್ಲ. ಬಹುಶಃ 33 ಸ್ಥಾನವನ್ನು ಕೂಡ ತುಂಬುವ ಬಗ್ಗೆ ತೀರ್ಮಾನ ಆಗಬಹುದು. ಇಂದೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಆಗುತ್ತೆ ಎಂದು ಹೇಳಿದರು.

ಕಷ್ಟ ಕಾಲದಲ್ಲಿ ನಾನು ಮಂತ್ರಿ ಸ್ಥಾನ ಕೇಳಿಲ್ಲ. ಸಂಖ್ಯೆ ಕಡಿಮೆ ಆದಾಗ ನಾವೇ ಬೇಡ ಎಂದು, ಕೆಲಸ ಕೊಡಿ ಎಂದು ಕೇಳಿದ್ದೇವು. ಮೊನ್ನೆ ಸಿಎಂ ಯಡಿಯೂರಪ್ಪ ಬಳಿ, ಸಾಧ್ಯವಾದರೆ ನನಗೂ ಒಂದು ಅವಕಾಶ ಕೊಡಿ ಸರ್, ಕೆಲಸ ಮಾಡಿ ತೋರಿಸ್ತೇನೆ ಎಂದು ಕೇಳಿದ್ದೇನೆ. ಆಗಲೇಬೇಕು ಎಂದು ನಾನೇನು ಲಾಭಿ ಮಾಡೋಕೆ ಹೋಗಲ್ಲ. ಬಹಳ ಆಸೆ ಅಂತಾ ಏನು ಇಲ್ಲ. ಆದರೆ ಸಚಿವರಾಗಬೇಕು ಎಂದು ಒಳಗೆ ಆಸೆ ಇದ್ದೆ ಇದೆ. ಆದರೆ ಈ ಮಾತನ್ನು ಬಹಿರಂಗವಾಗಿ ಹೇಳೋಕೆ ಆಗಲ್ಲ. ಕೆಲವರ ಹಣೆಯಲ್ಲಿ ದೊಡ್ಡದಾಗಿ ಅದೃಷ್ಟ ಇರುತ್ತೆ. ಅವರಿಗೆ ಬೇಗ ಅದೃಷ್ಟ ಬರುತ್ತೆ. ಆದರೆ ನಮಗೆ ನಿಧಾನವಾಗಿ ಅದೃಷ್ಟ ಬರುತ್ತೆ.  ಅಲ್ಲಿಯವರೆಗೂ ಕಾಯೋಣ ಎಂದ ಎಸ್ ಆರ್ ವಿಶ್ವನಾಥ ಹೇಳಿದರು.

ಇದನ್ನು ಓದಿ: ವಚನಾನಂದ ಶ್ರೀಗಳ ಆಗ್ರಹಕ್ಕೆ ಸಿಎಂ ಗರಂ; ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ಮುರುಗೇಶ್ ನಿರಾಣಿ

ಯಲಹಂಕ‌ದ ಸೃಷ್ಟಿ ಆರ್ಟ್ ಕಾಲೇಜಿನ ಗೋಡೆಗಳಲ್ಲಿ ಮೋದಿಯವರ ಅವಹೇಳನಕಾರಿ ಚಿತ್ರ ಬಿಡಿಸಿದ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ವಿಶ್ವನಾಥ, ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡ್ತಿದ್ರು. ರಸ್ತೆಯಲ್ಲಿ, ಸಾರ್ವಜನಿಕವಾಗಿ ಕಾಲೇಜು ಯುವಕರು ಸಿಗರೇಟು ಸೇದುತ್ತಿದ್ದರು. ಇದರ ಬಗ್ಗೆ ಸಾರ್ವಜನಿಕರು ದೂರು ಕೊಟ್ಟಿದ್ರು. ಜೊತೆಗೆ ಕಾಲೇಜಿನ ಗೋಡೆಗಳಲ್ಲಿ ಮೋದಿಯವರ ಅವಹೇಳನಕಾರಿ ಚಿತ್ರ ಬರೆದಿದ್ರು. ಇದರ ಬಗ್ಗೆ ಚರ್ಚಿಸಲು ಮೊನ್ನೆ ಕಾಲೇಜಿಗೆ ಹೋಗಿದ್ವಿ. ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ, ಇದನ್ನೆಲ್ಲ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಅಂತ ಹೇಳಿದ್ದೇನೆ. ಆದರೆ ನಮ್ಮ ಭೇಟಿ ವಿಚಾರವಾಗಿ ಏನೇನೋ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯ್ತು. ನಾವು ಕಾಲೇಜು ಯುವಕರಿಗೆ ಬೆದರಿಕೆ ಏನೂ ಹಾಕಲಿಲ್ಲ. ಕಾಲೇಜಿನ ವಿದ್ಯಾರ್ಥಿನಿಯರ ಉಡುಗೆ ಬಗ್ಗೆಯೂ ಮಾತಾಡಲಿಲ್ಲ ಎಂದು ಹೇಳಿದರು.
First published: