ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ (Gangavati, Koppal) ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Former Minister Janardhan Reddy) 56 ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ, ನಾನು ಕಣ್ಣೀರು ಹಾಕುವ ಪ್ರಯತ್ನ ಮಾಡಲ್ಲ. ನನ್ನ ಕಣ್ಣೀರು ಹಾಕೋದೆಲ್ಲ 12 ವರ್ಷದ ಹಿಂದೆ ಮುಗಿದು ಹೋಯ್ತು. ಬೆಂಗಳೂರಿನಲ್ಲಿದ್ದು (Bengaluru) ಇದ್ದು ಬೇಜಾರಾಗಿತ್ತು. ಇಲ್ಲಿಗೆ ಬಂದ ಮೇಲೆ ಹೆಚ್ಚು ಶಕ್ತಿ ಬಂದಿದೆ. ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ನಾನೀಗ ಹನುಮ ಹುಟ್ಟಿದ ನಾಡಿನಲ್ಲಿದ್ದೇನೆ. ಲಕ್ಷ್ಮಿ ದೇವಿಯ ಕೃಪೆ ನನ್ನ ಮೇಲಿದೆ. ಅಯೋಧ್ಯೆ (Ayodhya) ಮತ್ತು ತಿರುಪತಿ (Tirupati) ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿ (Anjanadri Development) ಮಾಡೋದು ನನ್ನ ಗುರಿಯಾಗಿದೆ. ಅದೇ ರೀತಿ ಗಂಗಾವತಿ ಅಭಿವೃದ್ಧಿ (Gangavati Development) ಮಾಡುತ್ತೇನೆ ಎಂದು ಹೇಳಿದರು.
ನಾನು ಯಾರ ಜೇಬಿಗೂ ಕೈ ಹಾಕದೆ, ಲಂಚ ತೆಗೆದುಕೊಳ್ಳದೆ ಸ್ವಂತ ವ್ಯಾಪಾರದಿಂದ ಸಂಪಾದನೆ ಮಾಡಿದ್ದೇನೆ. ನಾನು ಸತ್ಯದ ಹಾದಿಯಲ್ಲಿಯೇ ಜೀವನ ಮಾಡುತ್ತಿರುವೆ ಎಂದು ಜನಾರ್ದನ್ ರೆಡ್ಡಿ ಹೇಳಿದರು.
1,200 ಕೋಟಿ ಆಸ್ತಿ ಜಪ್ತಿ ಮಾಡಿದ್ರು
12 ವರ್ಷದ ಹಿಂದೆ ನಾನು ರಾಜಕೀಯದಲ್ಲಿ ಹೊರಟ್ಟಿದ್ದ ಸ್ಪೀಡ್ ಕೆಲವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನನ್ನನ್ನು ಜೈಲಿಗೆ ಕಳುಹಿಸಿದರು. ನಾನು ಬಂಧನದಲ್ಲಿದ್ದಾಗ 1,200 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಕೊನೆಗೆ ಹೈಕೋರ್ಟ್ ಮೊರೆ ಹೋಗಿ ನನ್ನ ಆಸ್ತಿ ವಾಪಸ್ ಪಡೆದುಕೊಂಡಿದ್ದೇನೆ. ನಾನು ಎಲ್ಲಾ ಪ್ರಕರಣಗಳಿಂದ ಮುಕ್ತನಾದ ಮೇಲೆಯೇ ನನ್ನ ಜೀವ ಹೋಗೋದು ಎಂದರು.
ಈಗ ನನ್ನ ಆಸ್ತಿ ನಾಲ್ಕು ಸಾವಿರ ಕೋಟಿ ರೂಪಾಯಿ ಇದೆ. ನನ್ನ ಇಡೀ ಆಸ್ತಿ ಹೋದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
ಜೈಲಿನಿಂದ ಹೊರ ಬಂದ ಬಳಿಕ ಮತ್ತೊಮ್ಮೆ ರಾಜಕೀಯ ಆರಂಭಿಸಿದ್ದೇನೆ. ಈಗ ಮೊದಲಿಗಿಂತಲೂ ನನ್ನ ರಾಜಕೀಯದ ವೇಗ ಹೆಚ್ಚಾಗಿದೆ. ಈ ವೇಗವನ್ನು ಯಾರಿಂದಲೂ ಸಹ ತಡೆಯಲು ಸಾಧ್ಯವಿಲ್ಲ ಎಂದು ಜನಾರ್ದನ್ ರೆಡ್ಡಿ ಗುಡುಗಿದರು.
ಮುಂದೆ ಏನಾಗುತ್ತೆ ಅಂತ ಕಾದು ನೋಡೋಣ
ನನ್ನ ಕಣ್ಣೀರಿನ ಅಧ್ಯಾಯ ಮುಕ್ತಾಯವಾಗಿದ್ದು, ಹೊಸ ಪಕ್ಷ ಸ್ಥಾಪನೆ ಮಾಡಿ 15 ದಿನಗಳು ಕಳೆದಿವೆ. ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳಿದ್ದು, ಮುಂದೆ ಏನಾಗುತ್ತೆ ಅಂತ ಕಾದು ನೋಡೋಣ ಎಂದು ಹೇಳಿದರು.
ಶ್ರೀರಾಮುಲು ಗರಂ
ಜನಾರ್ದನ ರೆಡ್ಡಿ ಹೆಸರು ಹೇಳ್ತಿದ್ದಂತೆ ಸಚಿವ ಶ್ರೀರಾಮುಲು ಗರಂ ಆದ್ರು. ರಾತ್ರಿ ಗಂಗಾವತಿಯ ಪಂಪಾ ಸರೋವರದಲ್ಲಿ ರಾಮುಲು-ರೆಡ್ಡಿ ಭೇಟಿಯಾಗಿದ್ರು ಎನ್ನಲಾಗ್ತಿದೆ. ಅದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೆರಳಿದ ರಾಮುಲು, ನಿಮಗೆ ಕನಸು ಬಿದ್ದಿತ್ತಾ ಎಂದು ಮರುಪ್ರಶ್ನೆ ಹಾಕಿದ್ರು.
ಕಾಂಗ್ರೆಸ್ ಮತ ಬ್ಯಾಂಕ್ ಮೇಲೂ ಜನಾರ್ದನ ರೆಡ್ಡಿ ಕಣ್ಣು
ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಭರ್ಜರಿ ಸಿದ್ಧತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರು ಗಂಗಾವತಿಯಲ್ಲಿ (Gangavathi Constituency) ಭರ್ಜರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಬಿಜೆಪಿ ಅಲ್ಲದೇ, ಕಾಂಗ್ರೆಸ್ ಪಕ್ಷದ ಮತಗಳ ಮೇಲೂ ಕಣ್ಣೀಟ್ಟಿರುವ ರೆಡ್ಡಿ, ಕ್ಷೇತ್ರದ ವಿವಿಧ ಪ್ರಭಾವಿ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಪ್ರಭಾವಿ ಕುರುಬ ಸಮುದಾಯದ (Kuruba Community) ಮುಖಂಡರ ಮನೆಗೆ ಜನಾರ್ದನ ರೆಡ್ಡಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Bengaluru: ಪೋಷಕರು ದೂರು ನೀಡುವ ಮೊದಲೇ ಪೊಲೀಸರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ರಕ್ಷಣೆ
ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮದ ಮುಖಂಡ, ಸಿದ್ದರಾಮಯ್ಯ (Siddaramaiah) ಆಪ್ತ ಹನುಮಂತ ಅರಸನಕೇರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ, ಗಂಗಾವತಿ ಕ್ಷೇತ್ರದ ಅನ್ಸಾರಿ ಅವರಿಗೆ ಶಾಕ್ ನೀಡಲು ರೆಡ್ಡಿ ನೀಡಿದ್ರಾ ಎಂಬ ಚರ್ಚೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಹನುಮಂತ ಅರಸನಕೇರಿ ಅವರು ಕ್ಷೇತ್ರದಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ