• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಡ್ರಗ್ಸ್‌ ಸೇವನೆ ಮಾಡುವವರ 10-15 ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ; ಇಂದ್ರಜಿತ್ ಲಂಕೇಶ್

ಡ್ರಗ್ಸ್‌ ಸೇವನೆ ಮಾಡುವವರ 10-15 ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ; ಇಂದ್ರಜಿತ್ ಲಂಕೇಶ್

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಸ್ಯಾಂಡಲ್‌ವುಡ್‌ನಲ್ಲಿ ಮಾದಕ ವಸ್ತುಗಳನ್ನು ಬಳಸುತ್ತಿರುವವರ ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನೂ ಅವರಿಗೆ ನೀಡಿದ್ದೇನೆ. ನಾನು ಮೊನ್ನೆ ಹೇಳಿದ ಮಾತಿಗೆ ತಕ್ಕಂತೆ ಅವರ ತನಿಖೆಗೆ-ವಿಚಾರಣೆಗೆ ಸಹಕರಿಸಿದ್ದೇನೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು (ಆಗಸ್ಟ್ 31); ನಾನು ಮೊನ್ನೆ ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪೊಲೀಸರ ವಿಚಾರಣೆಗೆ ಎಲ್ಲಾ ಸಹಕಾರ ನೀಡಿದ್ದೇನೆ. ಅಲ್ಲದೆ, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಸೇವಿಸುವ 10-15 ಜನರ ಹೆಸರುಗಳನ್ನು ಸೂಕ್ತ ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ. ಆದರೆ, ಅವರ ಹೆಸರುಗಳನ್ನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.


  ಮಾದಕ ವಸ್ತುಗಳನ್ನು ಬಳಸುವವರ ಕುರಿತ ಸಿಸಿಬಿ ಪೊಲೀಸ್‌ ವಿಚಾರಣೆಗೆ ಇಂದು ಹಾಜರಾಗಿ ಎಲ್ಲಾ ಮಾಹಿತಿ ನೀಡಿದ ನಂತರ ಪತ್ರಕರ್ತರ ಎದುರು ಮಾತನಾಡಿರುವ ಇಂದ್ರಜಿತ್‌ ಲಂಕೇಶ್, "ಸ್ಯಾಂಡಲ್‌ವುಡ್‌ನಲ್ಲಿ ಮಾದಕ ವಸ್ತುಗಳನ್ನು ಬಳಸುತ್ತಿರುವವರ ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನೂ ಅವರಿಗೆ ನೀಡಿದ್ದೇನೆ. ನಾನು ಮೊನ್ನೆ ಹೇಳಿದ ಮಾತಿಗೆ ತಕ್ಕಂತೆ ಅವರ ತನಿಖೆಗೆ-ವಿಚಾರಣೆಗೆ ಸಹಕರಿಸಿದ್ದೇನೆ.


  ನಿನ್ನೆಮೊನ್ನೆ ಬಂದ ನಟ-ನಟಿಯರು ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಡ್ರಗ್ಸ್‌ಗೆ ಬ್ಯ್ರಾಂಡ್‌ ಅಂಬಾಸಿಡರ್‌ ಆಗುತ್ತಿದ್ದಾರೆ. ಡ್ರಗ್ಸ್‌ ಸೇವನೆ ಮಾಡುವವರ ಹೆಸರನ್ನು ಹೇಳುವ ಮೂಲಕ ಅವರಿಗೆ ವ್ಯಯಕ್ತಿಕವಾಗಿ ಹಿಂಸೆ ನೀಡಬೇಕು ಎಂಬುದು ನನ್ನ ಉದ್ದೇಶವಲ್ಲ. ಬದಲಿಗೆ ಯುವ ನಟರು, ಮಕ್ಕಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು.


  ಇನ್ನೂ ಈ ವಿಚಾರವಾಗಿ ಪೊಲೀಸ್‌ ಅಧಿಕಾರಿಗಳ ಬಳಿಯೂ ಸಾಕಷ್ಟು ಮಾಹಿತಿ ಇದೆ. ಹೀಗಾಗಿ ಶೀಘ್ರದಲ್ಲೇ ಅವರ ಡ್ರಗ್ಸ್‌ ಜಾಲವನ್ನು ಬೇಧಿಸುತ್ತಾರೆ ಎಂಬ ಕುರಿತು ನನಗೆ ವಿಶ್ವಾಸವಿದೆ" ಎಂದು ಅವರು ತಿಳಿಸಿದ್ದಾರೆ.


  ಇದನ್ನೂ ಓದಿ : ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಸೇವನೆಗೂ ಕೋಡ್‌ವರ್ಡ್‌; ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್


  ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾದ ನಟ ಚಿರಂಜೀವಿ ಸರ್ಜಾ ಕುರಿತ ಮಾತಿಗೆ ಕ್ಷಮೆಯಾಚಿಸಿರುವ ಇಂದ್ರಜಿತ್, “ಮೃತಪಟ್ಟವರ ಬಗ್ಗೆ ನಾನು ಮಾತನಾಡಿದ್ದ ನನ್ನ ಮಾತುಗಳನ್ನು ವಾಪಸ್‌ ತೆಗೆದುಕೊಳ್ಳುತ್ತೇನೆ. ಚಿರು ಬಗ್ಗೆ, ಅರ್ಜುನ್ ಸರ್ಜಾ ಬಗ್ಗೆ, ಸುಂದರರಾಜ್ ಬಗ್ಗೆ ಈಗ ಮಾತಾಡಲ್ಲ” ಎಂದು ತಿಳಿಸಿದ್ದಾರೆ.


  ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, “ಮಾದ್ಯಮಗಳಲ್ಲಿ ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿ ಮೆರೆಗೆ ನೋಟಿಸ್ ನೀಡಲಾಗಿತ್ತು. ಇಂದು ವಿಚಾರಣೆ ವೇಳೆ ಇಂದ್ರಜಿತ್ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕೆಲ ಪೂರಕವಾದ ಸಾಕ್ಷಾಧಾರಗಳನ್ನು ನೀಡಿದ್ದಾರೆ. ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ತೇವೆ” ಎಂದು ಭರವಸೆ ನೀಡಿದ್ದಾರೆ.

  Published by:MAshok Kumar
  First published: