ಡಿ.ಕೆ.‌ ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ; ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿರುಗೇಟು

ಡಿ.ಕೆ.‌ ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಅವರ ಹಿನ್ನೆಲೆಯೇನು ಎಂದು ನಾನು ಹೇಳಲು ಹೋಗುವುದಿಲ್ಲ. ಅವರ ಹಿನ್ನೆಲೆ ಬಗ್ಗೆ ಜನರಿಗೆ ಗೊತ್ತಿದೆ. ಡಿಕೆ ಸುರೇಶ್ ಅವರಿಂದ ನಾನು ಹೇಳಿಸಿ ಕೊಳ್ಳೋ ಅಗತ್ಯವಿಲ್ಲ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಸಚಿವ ಕೆ.ಸುಧಾಕರ್

ಸಚಿವ ಕೆ.ಸುಧಾಕರ್

  • Share this:
ಬೆಂಗಳೂರು (ಡಿ. 24): ಸುಧಾಕರ್ ನಾಲಾಯಕ್ ಮಂತ್ರಿ ಎಂಬ ಡಿ.ಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಡಿ.ಕೆ.‌ ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಅವರ ಹಿನ್ನೆಲೆಯೇನು ಎಂದು ನಾನು ಹೇಳಲು ಹೋಗುವುದಿಲ್ಲ. ಅವರ ಹಿನ್ನೆಲೆ ಬಗ್ಗೆ ಜನರಿಗೆ ಗೊತ್ತಿದೆ. ಅವರ ಹೇಳಿಕೆಯಿಂದಲೇ ಅವರ ಅಭಿರುಚಿ ಏನೆಂಬುದು ಗೊತ್ತಾಗುತ್ತಿದೆ. ನನ್ನ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಡಿಕೆ ಸುರೇಶ್ ಅವರಿಂದ ನಾನು ಹೇಳಿಸಿ ಕೊಳ್ಳೋ ಅಗತ್ಯವಿಲ್ಲ. ಅವರ ಸರ್ಟಿಫಿಕೇಟ್ ನನಗೇನೂ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೈಟ್ ಕರ್ಪ್ಯೂ ಬಗ್ಗೆ ಇಂದು ಸಿಎಂ ಜೊತೆ ಯಾವುದೇ ಚರ್ಚೆ ಆಗಿಲ್ಲ. ಶಿಕ್ಷಣ ಸಚಿವರು ಮತ್ತು ನಮ್ಮ ನಡುವೆ ಏನೂ ಭಿನ್ನಾಭಿಪ್ರಾಯ ಇಲ್ಲ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ನಿನ್ನೆ ಸಿಎಂ ನೇತೃತ್ವದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. 11 ಗಂಟೆ ಬಳಿಕ ಬಾರ್, ಪಬ್ ಗಳಲ್ಲಿ ಹಬ್ಬ, ಹೊಸ ವರ್ಷ ಆಚರಣೆ ವೇಳೆ ಜನರು ಸೇರುತ್ತಾರೆ.‌ ಇದನ್ನು ನಿಯಂತ್ರಿಸಬೇಕು ಎಂಬುದು ನಮ್ಮ ಉದ್ದೇಶ. ರಾತ್ರಿ 11 ಗಂಟೆಯ ಬಳಿಕ ಅಂತಹ ಯಾವುದೇ ಚಟುವಟಿಕೆ ಇರುವುದಿಲ್ಲ. ನಾನು, ಸುರೇಶ್ ಕುಮಾರ್, ಲಕ್ಷ್ಮಣ ಸವದಿ ಸಹೋದರರಂತೆ ಇದ್ದೇವೆ. ಸಿಎಂ ನೇತೃತ್ವದಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆ ಇಲ್ಲದ ಕಾರಣ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸದ್ಯದಲ್ಲೇ ವೈದ್ಯರು, ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೂಡ ಮಾಡಲಾಗುತ್ತದೆ. 6ರಿಂದ 8 ಕೋಟಿ ರೂ. ವೆಚ್ಚದಲ್ಲಿ ಮಾದರಿ ಆರೋಗ್ಯ ಕೇಂದ್ರಗಳು ನಿರ್ಮಾಣ ಆಗಲಿವೆ. 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ ಸುಧಾಕರ್; ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

ಆರೋಗ್ಯ ಇಲಾಖೆಯಿಂದ ಸಿಎಂ ನಿರ್ದೇಶನದಂತೆ ಆರೋಗ್ಯ ಇಲಾಖೆಯ ಸುಧಾರಣೆ ಮತ್ತು ಉಚಿತ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದು ವ್ಯವಸ್ಥೆ ಮಾಡಿದ್ದೇವೆ. ಇದಕ್ಕೆ ಕೂಲಂಕುಷವಾಗಿ ಸಮಿತಿ ಮೂಲಕ ಸಿಎಂಗೆ ಪ್ರಾತ್ಯಕ್ಷಿಕೆ ನೀಡಿದ್ದೇವೆ. ಕೇರಳ, ತಮಿಳುನಾಡಿನಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ . ನಮ್ಮ ರಾಜ್ಯದಲ್ಲಿ ಕೂಡ ದೇಶಕ್ಕೆ ಮಾದರಿಯಾಗುವ ಆರೋಗ್ಯ ವ್ಯವಸ್ಥೆ ಬೇಕು ಎಂದು ಸಿಎಂ ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಹೆಚ್ಚುವರಿ ಪಿಹೆಚ್​ಸಿ ಸ್ಥಾಪನೆ, ಮೇಲ್ದರ್ಜೆಗೆ‌ ಏರಿಸುವಿಕೆ, ಒಂದು ಕೇಂದ್ರಕ್ಕೆ ಮೂವರು ವೈದ್ಯರ ನೇಮಕ ಮಾಡುತ್ತೇವೆ. ಸಮುದಾಯ ಆರೋಗ್ಯ ವ್ಯವಸ್ಥೆಗೆ ಮುತುವರ್ಜಿ ವಹಿಸಿದ್ದೇವೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆ ಇಲ್ಲದ ಕಾರಣ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸದ್ಯದಲ್ಲೇ ವೈದ್ಯರು, ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೂಡ ಮಾಡಲಾಗುತ್ತದೆ. 6ರಿಂದ 8 ಕೋಟಿ ರೂ. ವೆಚ್ಚದಲ್ಲಿ ಮಾದರಿ ಆರೋಗ್ಯ ಕೇಂದ್ರಗಳು ನಿರ್ಮಾಣ ಆಗಲಿವೆ. 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಪ್ರತಿ ಆರೋಗ್ಯ ಕೇಂದ್ರಕ್ಕೆ ಒಂದು ಆ್ಯಂಬುಲೆನ್ಸ್​ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ನಾನು ಹಾಗೂ ಸುರೇಶ್ ಕುಮಾರ್ ಇಬ್ಬರೂ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಶಾಲೆ ಆರಂಭದ ಬಗ್ಗೆ ತೀರ್ಮಾನ ಮಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಹೊಂದಾಣಿಕೆಯ ಸಮಸ್ಯೆ ಇಲ್ಲ ಎಂದು ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
Published by:Sushma Chakre
First published: