ನಮ್ಮ ಮನೆಗೆ ನಾನು ಬರಲು ಯಾರ ಅನುಮತಿಯೂ ಬೇಕಿಲ್ಲ; ನಡುರಾತ್ರಿ ಅಣ್ಣನೊಂದಿಗೆ ಮಾತುಕತೆ ನಡೆಸಿದ ಡಿ.ಕೆ. ಸುರೇಶ್​

news18
Updated:September 9, 2018, 8:51 AM IST
ನಮ್ಮ ಮನೆಗೆ ನಾನು ಬರಲು ಯಾರ ಅನುಮತಿಯೂ ಬೇಕಿಲ್ಲ; ನಡುರಾತ್ರಿ ಅಣ್ಣನೊಂದಿಗೆ ಮಾತುಕತೆ ನಡೆಸಿದ ಡಿ.ಕೆ. ಸುರೇಶ್​
news18
Updated: September 9, 2018, 8:51 AM IST
ಗಂಗಾಧರ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 9): ಸಚಿವ ಡಿ.ಕೆ. ಶಿವಕುಮಾರ್​  ಮೇಲೆ ಇಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂಬ ಸುದ್ದಿ ನಿನ್ನೆ ಹೊರಬಿದ್ದಿದ್ದೇ ತಡ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟಾಯಿತು. ಇಡೀ ದಿನದ ಬೆಳವಣಿಗೆಗಳು ನಡೆದ ನಂತರ ನಿನ್ನೆ ತಡರಾತ್ರಿ ಸಚಿವ  ಡಿ.ಕೆ. ಸುರೇಶ್​ ತಮ್ಮ ಅಣ್ಣ ಡಿ.ಕೆ. ಶಿವಕುಮಾರ್​ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್​, 'ನನ್ನ ಅಣ್ಣನ ಜೊತೆ ಮಾತನಾಡಲು ಬಂದಿದ್ದೇನೆ. ನಮ್ಮ ಮನೆಗೆ ನಾನು ಬರುವುದಕ್ಕೆ ಯಾರ ಅನುಮತಿ ಬೇಕು?' ಎಂದು ಕೇಳಿದ್ದಾರೆ.

ನಿನ್ನೆ ತಡರಾತ್ರಿ ಡಿಕೆಶಿ ಮನೆಗೆ ಆಗಮಿಸಿದ ಸಂಸದ ಡಿ.ಕೆ. ಸುರೇಶ್, ಬೆಳಗ್ಗೆಯಿಂದ ಅಣ್ಣ ಸಿಕ್ಕಿರಲಿಲ್ಲ. ಹೀಗಾಗಿ ಅವರೊಂದಿಗೆ ಮಾತನಾಡಲು ಈಗ ಬಂದಿದ್ದೇನೆ. ನಾನು ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ನಾನು ಆಗಾಗ ಭೇಟಿ ಮಾಡಲು ಬರುತ್ತಲೇ ಇರುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ನಿನ್ನೆ ಬೆಳಗ್ಗೆ ದೆಹಲಿಗೆ ಹೋಗಬೇಕಾಗಿತ್ತು. ಆದರೆ, ಮಾಧ್ಯಮಗಳಲ್ಲಿ ಏನೇನೋ ವದಂತಿಗಳು ಪ್ರಸಾರವಾದ ಕಾರಣ ಬೆಂಗಳೂರಿನಲ್ಲೇ ಉಳಿದುಕೊಳ್ಳುವಂತಾಯಿತು. ಇಡಿ ಎಫ್​ಐಆರ್​ ದಾಖಲಿಸುತ್ತೆ ಎಂದಾದರೆ ಸಂತೋಷ!. ನೀವೆಲ್ಲರೂ ಅದಕ್ಕೇ ಕಾಯುತ್ತಿದ್ದೀರಿ ಅನಿಸುತ್ತೆ. ನಾವೇನೂ ಮಾಡಬಾರದ್ದನ್ನು ಮಾಡಿಲ್ಲ ಎಂದು ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡರು.

ಬಿಜೆಪಿ ಪಕ್ಷದವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಕಾಯುತ್ತಿದ್ದಾರೆ. ಆದರೆ, ಅದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಅವರ ಎಲ್ಲ ಆಟಗಳಿಗೆ ಜನರೇ ಉತ್ತರ ನೀಡಲಿದ್ದಾರೆ. ನಾನಾಗಲಿ, ಡಿ ಕೆ ಶಿವಕುಮಾರ್ ಆಗಲಿ ಭಯ ಪಡುವ ಪ್ರಮೇಯವೇ ಇಲ್ಲ. ಸರ್ಕಾರ ಮತ್ತು ನಾವು ಇದನ್ನು ಎದುರಿಸುತ್ತೇವೆ. ನಮಗೆ ಆ ಸಾಮರ್ಥ್ಯ ಇದೆ ಎಂದು ಈ ವೇಳೆ ಡಿ.ಕೆ. ಸುರೇಶ್ ಹೇಳಿದರು.
Loading...

 
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...