ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ; ಏನೇ ಅಧಿಕಾರ ಕೊಟ್ಟರೂ ಸ್ವೀಕರಿಸುತ್ತೇನೆ: ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್

Karnataka Bypolls Results 2019: ನನಗೆ ಅಪಹಾಸ್ಯ ಅಪಕಾರ‌ ಮಾಡಿರುವಂತಹವರು‌ ಮನೆಯಲ್ಲಿ ಕುಳಿತು ಟಿವಿ ನೊಡುತ್ತಿದ್ದಾರೆ. ಯಾವ ನಾಯಕರು ಕೆಟ್ಟ ಪದಗಳನ್ನು ಉಪಯೊಗಿಸಿದ್ದಾರೆ ಅವರಿಗೆ ಜನರೆ ತಕ್ಕ ಪಾಠ ಕಳಿಸಿದ್ದಾರೆ. ಬಿಜೆಪಿ ಪಕ್ಷವನ್ನ ಮೂರು ಜಿಲ್ಲೆಗಳಲ್ಲಿ‌ ಕೆಸರಿ‌ಮಯ ಮಾಡುತ್ತೇವೆ ಎಂದರು

G Hareeshkumar | news18-kannada
Updated:December 9, 2019, 3:08 PM IST
ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ; ಏನೇ ಅಧಿಕಾರ ಕೊಟ್ಟರೂ ಸ್ವೀಕರಿಸುತ್ತೇನೆ: ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್
ಅನರ್ಹ ಶಾಸಕ ಸುಧಾಕರ್​.
  • Share this:
ಚಿಕ್ಕಬಳ್ಳಾಪುರ(ಡಿ.09): ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಲ್ಲ. ಲಾಬಿ ಮಾಡಿಕೊಳ್ಳುವ ಸಂಸ್ಕ್ರತಿ ಬಿಜೆಪಿ ಪಕ್ಷದಲ್ಲಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಯಾವುದೇ ಅಧಿಕಾರ ಕೊಟ್ಟರೂ ಸ್ವೀಕರಿಸುತ್ತೇನೆ. ಅಂದಿನ ಸ್ವೀಕರ್​ ರಮೇಶ್ ಕುಮಾರ್ ಬಗ್ಗೆ ಸದನದಲ್ಲಿ ಮಾತಾಡುವೆ ಎಂದು ಬಿಜೆಪಿ ಶಾಸಕ ಕೆ ಸುಧಾಕರ್​ ಹೇಳಿದ್ದಾರೆ.  

ಫಲಿತಾಂಶದ ಬಳಿಕ ಮಾತನಾಡಿದ ಅವರು, ಹಿಂದಿನ‌ ಸಭಾಧ್ಯಕ್ಷರು ನನ್ನ ಅನರ್ಹತೆ ಮಾಡಿದ್ದರು. 35 ಸಾವಿರ ಅಂತರದಿಂದ ಮತ್ತೆ ಗೆದ್ದಿರುವೆ. ಅಂತಃಕರಣದಿಂದ‌ ರಾಜಿನಾಮೆ‌ ಕೊಟ್ಟ ಮೇಲೆ ನನ್ನ ಅನರ್ಹ ಮಾಡಿದ್ದರು. ಕಾಂಗ್ರೆಸ್ ನವರ ಮಾತು‌ ಕೇಳಿ‌ ನನ್ನ ಅನರ್ಹ ಮಾಡಿದ್ದರು. ಈ ಬಾರಿ ಚುನಾವಣೆನಲ್ಲಿ ಮತದಾರ ನನ್ನ ಕೈಬಿಟ್ಟಿಲ್ಲ. ಈ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸ್ಥಿರ‌ ಸರ್ಕಾರ ಇರಬೇಕು. ಸುಭದ್ರ‌ ಸರ್ಕಾರ ಮುಂದುವರೆಯಲಿದೆ ಎಂದರು.

ಸಿಎಂ ಯಡಿಯೂರಪ್ಪ‌ನವರ ಅಧಿಕಾರದಲ್ಲಿ ಅಭಿವೃದ್ಧಿ ಆಗಬೇಕು ಶುದ್ಧ ಆಡಳಿತ ಕೊಡಬೇಕು. ಅಭಿವೃದ್ದಿ ಮುಖ್ಯ ಅಂತ ಜನ ಅವರಿಗೆ ತೊರಿಸಿದ್ದಾರೆ. ಜೆಡಿಎಸ್ ನವರು 224 ಜನರಿಗೆ ಬಿ ಫಾರಂ ಕೊಡುತಾರೆ. ಎಲ್ಲರೂ ಗೆದ್ದಿದ್ದರೆ ನಿಮ್ಮನ್ನ ಹಿಡಿಯಲಿಕ್ಕೆ ಆಗುತ್ತಿರಲಿಲ್ಲಾ. 84 ಸಾವಿರ ಜನರ‌ ಪ್ರೀತಿಗೆ ಪಾತ್ರ ಆಗಿದ್ದೇನೆ ಈಗ ಕೆಟ್ಟ ಸರ್ಕಾರ ತೆಗೆದ ಹೆಮ್ಮೆ ಎಂದು ಹೇಳಿದರು.

ನನ್ನ ಸೋಲಿಸಲು ಪ್ರಯತ್ನ ಪಟ್ಟಿವರು ಕಾಂಗ್ರೆಸ್​​ ನಲ್ಲಿದ್ದಾರೆ

ಬಿಜೆಪಿ ಸರ್ಕಾರದ ಅನೇಕ ನಾಯಕರು ತಂಡವಾಗಿ ಬಂದು ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಎರಡು ಚುನಾವಣೆ ಎದುರಿಸಿದ್ದೇನೆ. ನನ್ನ ಸೋಲಿಸಲು ಎರಡು ಬಾರಿ ಪ್ರಯತ್ನ ಪಟ್ಟಿದ್ದವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಅವರೇ ಈಗ ನನ್ನ ಸೊಲಿಸಲೇಬೇಕೆಂದು ಪಣ ತೊಟ್ಟಿದ್ದರು. ನನಗೆ ಅಪಹಾಸ್ಯ ಅಪಕಾರ‌ ಮಾಡಿರುವಂತಹವರು‌ ಮನೆಯಲ್ಲಿ ಕುಳಿತು ಟಿವಿ ನೊಡುತ್ತಿದ್ದಾರೆ. ಯಾವ ನಾಯಕರು ಕೆಟ್ಟ ಪದಗಳನ್ನು ಉಪಯೊಗಿಸಿದ್ದಾರೆ ಅವರಿಗೆ ಜನರೆ ತಕ್ಕ ಪಾಠ ಕಳಿಸಿದ್ದಾರೆ. ಬಿಜೆಪಿ ಪಕ್ಷವನ್ನ ಮೂರು ಜಿಲ್ಲೆಗಳಲ್ಲಿ‌ ಕೆಸರಿ‌ಮಯ ಮಾಡುತ್ತೇವೆ ಎಂದರು.

ಇದನ್ನೂ ಓದಿ  : KARNATAKA BYPOLL RESULTS 2019: ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು; ರಮೇಶ್​ ಜಾರಕಿಹೊಳಿ  

ಕಾಂಗ್ರೆಸ್ ಜೆಡಿಎಸ್ ಒಳ ಸಂಚು ಮಾಡಿಕೊಂಡು ಈ ಬಾರಿ ಚುನಾವಣಾ ಪ್ರಚಾರ ಮಾಡಿದರು. ದೊಡ್ಡ ಪ್ರಮಾಣದ ಮೂರು ಮಾಜಿ ಮುಖ್ಯಮಂತ್ರಿ ಗಳು ನನ್ನ ಸೊಲಿಸಲು ಹರಸಾಹಸ ಪಟ್ಟರು. ಅವರ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ ಜನ. ಜೆಡಿಎಸ್ ಕುಟುಂಬ ರಾಜಕಾರಣದ ಒಳಗೆ ಯಾರನ್ನೂ ಸೇರಿಸಿಕೊಳ್ಳೋದಿಲ್ಲಾ ಅಂತಾ ಗೊತ್ತಾಗಿದೆ ಕಾಂಗ್ರೆಸ್ ನಾಯಕರು ನಾನು ಅನ್ನುವ ದುರಹಂಕಾರ ಈಗಲಾದರೂ ಹೊಗಲಿ ಎಂದು ಹೇಳಿದರು.ಹುಣಸೂರು ಎಂಟಿಬಿ ನಾಗರಾಜ್ ಅವರೆಡು ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು. ಅವರು ಅತ್ಯಂತ ಆತ್ಮಿಯರು‌ ಜೆಡಿಎಸ್ ಹಾಗೂ‌ ಕಾಂಗ್ರೆಸ್ ಒಳ ಸಂಚು ಪಿತೂರಿನಿಂದ ಎಂಟಿಬಿ‌ ಸೊತಿದ್ದಾರೆ ಎಂದು ತಿಳಿಸಿದರು.

 
First published: December 9, 2019, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading